ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಬುಧನ ವಕ್ರಸ್ಥಾನ ಯಾವೆಲ್ಲ ರಾಶಿಗೆ ಪರಿಣಾಮ ಬೀರಲಿದೆ?

ಕೃಷ್ಣ ಪಕ್ಷೆಯ ಈ ದಿನ ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರದ್ದಲ್ಲಿದ್ದು ಜುಲೈ 18ನೇ ತಾರೀಖಿನ ಶುಕ್ರವಾರ ದಂದು ಬಹುತೇಕ ರಾಶಿಗಳ ಮೇಲೆ ಬುಧ ಗ್ರಹ ಹೆಚ್ಚಿನ ಮಟ್ಟದಲ್ಲಿ ಪ್ರಭಾವ ಬೀರಲಿದ್ದಾ‌ನೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದಿನ ರಾಶಿ ಭವಿಷ್ಯ ಹೀಗಿದೆ.

ಬುಧನ ವಕ್ರಸ್ಥಾನ ಯಾವೆಲ್ಲ ರಾಶಿಗೆ ಪರಿಣಾಮ ಬೀರಲಿದೆ?

Profile Pushpa Kumari Jul 18, 2025 6:00 AM

ಬೆಂಗಳೂರು: ಕೃಷ್ಣ ಪಕ್ಷೆಯ ಈ ದಿನ ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರದಲ್ಲಿದ್ದು ಇಂದು ಮಾತು ಮತ್ತು ಬುದ್ಧಿವಂತಿಕೆಗೆ ಹೆಸರಾದ ಬುಧ ಗ್ರಹವು ವಕ್ರ ಮತ್ತು ಅಸ್ತ ಸ್ಥಾನದಲ್ಲಿದ್ದಾನೆ. ಹೀಗಾಗಿ ಬಹುತೇಕ ರಾಶಿಗಳ ಮೇಲೆ ಬುಧ ಗ್ರಹ ಹೆಚ್ಚಿನ ಮಟ್ಟದಲ್ಲಿ ಪ್ರಭಾವ ಬೀರಲಿದ್ದಾ‌ನೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದು ನಿಮ್ಮ ಭವಿಷ್ಯ (Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಬುಧ ಗ್ರಹವು ವಕ್ರಿಯಾಗಿದ್ದ ಕಾರಣ ಮೇಷ ರಾಶಿ ಅವರು ಮಾತಿನ ಮೇಲೆ ತುಂಬಾ ನಿಗಾ ವಹಿಸಬೇಕು. ಈಗಾಗಲೇ ನಡೆಯುತ್ತಿದ್ದ ಕೆಲಸ ಕಾರ್ಯಗಳಲ್ಲಿ ಅಡೆ ತಡೆ, ಸ್ನೇಹ ಸಂಬಂಧಗಳಲ್ಲಿ ವೈಮನಸ್ಸು ಮೂಡುವ ಸಾಧ್ಯತೆ ಇದೆ. ತೋಟ, ಜಮೀನು ಖರೀದಿ, ಮನೆಗೆ ಗುದ್ದಲಿ ಪೂಜೆ ಇತರ ಹೊಸ ಕೆಲಸ ಕಾರ್ಯಗಳ ಆರಂಭಕ್ಕೆ ಅಡೆತಡೆಯಾಗಲಿದೆ. ಯಾವುದೇ ಹೊಸ ಕೆಲಸ ಆರಂಭ ಸದ್ಯಕ್ಕೆ ಬೇಡ. ಮನೆಯ ವಾತಾವರಣ ಕಿರಿ ಕಿರಿ ಉಂಟಾಗಿ ವೈಮನಸ್ಸು ಮೂಡಲಿದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಸಹೋದರರ ಜೊತೆಗಿದ್ದ ವೈಮನಸ್ಸು ದೂರಾಗಲಿದೆ. ಹೊಸ ಕೆಲಸ ಕಾರ್ಯಕ್ಕೆ ತಡೆ ಬೀಳಲಿದೆ ಹಾಗಾಗಿ ಸ್ವಲ್ಪ ದಿನ ಕಾದ ಬಳಿಕವೇ ಹೊಸ ಕೆಲಸ ಅಥವಾ ಯೋಜನೆಗಳನ್ನು ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಶುಭದಿನವಾಗಿದ್ದು ಹೊಸ ಜವಾ ಬ್ದಾರಿಗಳು ಇರಲಿವೆ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರೆ ಉತ್ತಮ.

ಮಿಥುನ ರಾಶಿ: ‌ಇಂದು ಮಿಥುನ ರಾಶಿಯ ಮೇಲು ಬುಧ ಗ್ರಹದ ಪ್ರಭಾವ ಇರಲಿದ್ದು ಮುಖ್ಯ ವಾದ ಕೆಲಸ ಕಾರ್ಯಗಳನ್ನು, ಆಸ್ತಿ ಖರೀದಿ , ಮನೆಕಟ್ಟುವ ನಿರ್ಧಾರಗಳಿಗೆ ಸ್ವಲ್ಪ ಸಮಯಾವಕಾಶ ನೀಡಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಕೆಲವೊಂದು ಅಂದುಕೊಂಡ ಕೆಲಸ ಕಾರ್ಯಗಳು ಇಂದು ಆಗದೇ ಇರುವ ಸಾಧ್ಯತೆ ಇದೆ.

ಕಟಕ ರಾಶಿ: ಕಟಕ ರಾಶಿಯವರು ಮಾತುಕತೆಗಳ ಬಗ್ಗೆ ತುಂಬಾ ನಿಗಾ ವಹಿಸಬೇಕು. ಈಗಾಗಲೇ ಇತರರಿಂದ ನೀವು ನಿಂಧನೆಗಳನ್ನು ಕೇಳಿದ್ದರೆ ಇಂದು ಅವೆಲ್ಲಕ್ಕೂ ಮುಕ್ತಿ ದೊರೆಯಲಿದೆ. ಆದರೆ ಬುಧ ವಕ್ರನಾಗಿದ್ದ ಕಾರಣ ನಿಮ್ಮ ಯೋಚನೆಯ ರೀತಿಯ ಮೇಲೆ ಹಿಡಿತ ಸಾಧಿಸಬೇಕು.

ಸಿಂಹ ರಾಶಿ: ಸಿಂಹ ರಾಶಿ ಅವರು ಸ್ನೇಹ ಸಂಬಂಧಗಳು ಹಾಳಾಗಿದ್ದದ್ದು ಇಂದಿನ ದಿನದಲ್ಲಿ ಸರಿಯಾಗಲಿದೆ. ವೈಮಸ್ಸು ದೂರಾಗಲಿದೆ. ಇನ್ನು ಸ್ವಲ್ಪ ದಿನಗಳ ಕಾಲ ನಿಮ್ಮ ಮಾತಿನ ಮೇಲೆ ಎಚ್ಚರಿಕೆಯಿಂದಿರಿ. ಕೆಲವು ಅನಿರೀಕ್ಷಿತ ಘಟನೆಗಳು ಸಂಭವಿಸಿದರೂ ಅದನ್ನು ಸರಿಯಾಗಿ ನಿಭಾ ಯಿಸಿ ನಾಯಕತ್ವ ಸ್ಥಾನ ತುಂಬುವವರು ನೀವಾಗಲಿದ್ದೀರಿ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಬುಧನು ಲಾಭ ಸ್ಥಾನದಲ್ಲಿದ್ದು ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುವ ಸ್ಥಾನದಲ್ಲಿದ್ದಾನೆ. ಆದರೆ ಈಗ ಬುಧನ ಸ್ಥಾನ ವಕ್ರಿಯಾಗಿ ಅಸ್ತವಾಗುತ್ತಿರುದರಿಂದ ಕೆಲಸ ಕಾರ್ಯಗಳಿಗೆ ತಡೆಯಾಗಲಿದೆ. ದುಡ್ಡು ಕಾಸಿನ ವಿಚಾರದಲ್ಲಿ ಸಣ್ಣ ಮಟ್ಟಿಗಿನ ಅಡೆತಡೆ ಕೇಳಿಬರಲಿದೆ.

ತುಲಾ ರಾಶಿ: ತುಲಾ ರಾಶಿ ಅವರ ಕಾರ್ಯಕ್ಷೇತ್ರದಲ್ಲಿ ಬಹಳ ಚೆನ್ನಾಗಿ ಇತ್ತು ಆದರೆ ಬುಧನ ವಕ್ರ ಸ್ಥಾನದಿಂದ ನಿಮ್ಮ ಮುಖ್ಯ ಕೆಲಸ ಕಾರ್ಯಕ್ಕೆ ಅಡೆ ತಡೆ ಬರಲಿದೆ. ಬುಧ ಅಸ್ತ ಮುಗಿಯುವ ತನಕ ಇದೇ ಸ್ಥಿತಿ ಮುಂದುವರೆಯಲಿದೆ. ಹಾಗಾಗಿ ನಿಮ್ಮ ಒಳ್ಳೆ ಸಮಯಕ್ಕಾಗಿ ತಾಳ್ಮೆಯಿಂದ ಕಾಯುವ ಜಾಣ್ಮೆಯಿಂದ ಮುನ್ನಡೆಯಿರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಬುಧ ಭಾಗ್ಯ ಸ್ಥಾನಿಯಾಗಿದ್ದು ಕೆಲ ಕೆಲಸ ಕಾರ್ಯಕ್ಕೆ ಸಣ್ಣ ಪುಟ್ಟ ಅಡ್ಡಿ ಬರಲಿದೆ. ಅದೇ ರೀತಿ ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳಿಗೆ ಮತ್ತೆ ಪುನರಾರಂಭ ಆಗುವ ಭಾಗ್ಯ ಈ ದಿನ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿಗಾ ವಹಿಸಿ ಆರ್ಥಿಕ ವಹಿವಾಟನ್ನು ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ವೈಮಸ್ಸಿನಿಂದ ಸಾಕಷ್ಟು ತೊಂದರೆಯಾಗಿತ್ತು ಅದರಿಂದ ಈಗ ಎಲ್ಲವೂ ಇನ್ನೇನು ಸರಿಯಾಗಿತ್ತು ಅನ್ನುವಾಗಲೇ ಬುಧ ವಕ್ರಿಯಾದ ಕಾರಣ ಪುನಃ ವೈಮ ನಸ್ಸು ಮೂಡುವ ಸಾಧ್ಯತೆ ಇದೆ. ಮನೆಯವರು,ಪ್ರೀತಿ ಪಾತ್ರರ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಗೊಂದಲ ವೈಮನಸ್ಸು ಮೂಡಲಿದ್ದು ಸಾಕಷ್ಟು ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಮಕರ: ಮಕರ ರಾಶಿ ಅವರಿಗೆ ದಾಂಪತ್ಯ ಜೀವನದ ವೈಮನಸ್ಸು ದೂರಾಗಲಿದೆ. ಜಗಳಗಳು ಸರಿ ಯಾಗಿ ಮತ್ತೆ ಸಂಬಂಧಗಳು ಒಂದಾಗಲಿದೆ. ಕೆಲವು ಸಮಸ್ಯೆಗಳನ್ನು ಪರಿಹಾರ ಕಂಡು ಕೊಳ್ಳಲು ಹೋಗಿ ಆತುರದ ನಿರ್ಧಾರ ಕೈಗೊಳ್ಳದೆ ಸರಿಯಾಗಿ ವಿಶ್ಲೇಷಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳು ವುದರಿಂದ ಶೀಘ್ರವೇ ಶುಭ ಸುದ್ದಿ ಕೇಳಲಿದ್ದೀರಿ.

ಕುಂಭ: ಕುಂಭರಾಶಿ ಅವರಿಗೆ ಬುಧನ ಗೋಚಾರ ತುಂಬಾ ಚೆನ್ನಾಗಿ ಇರಲಿದೆ. ನಿಮಗೆ ತೊಂದರೆ ನೀಡುವವರು ಈಗ ಹಿಮ್ಮೆಟ್ಟಲಿದ್ದಾರೆ. ಆರೋಗ್ಯ ಸಮಸ್ಯೆ ಮತ್ತೆ ಮರುಕಳಿಸುವ ಸಾಧ್ಯತೆಗಳು ಇವೆ. ಸಾಲ ವ್ಯವಹಾರಗಳ ಮೇಲೆ ಸರಿಯಾದ ನಿರ್ಧಾರ ಕೈಗೊಂಡರೆ ತುಂಬಾ ಉತ್ತಮ.

ಮೀನ: ಮೀನ ರಾಶಿ ಅವರು ಕ್ರೀಯಾಶೀಲ ಸ್ವಭಾವದವರಾಗಿದ್ದು ಕೆಲವೇ ದಿನದಲ್ಲಿ ಉತ್ತಮ ಅವಕಾಶ ಸಿಗಲಿದೆ. ನಿಮ್ಮ ಸಮಸ್ಯೆ ತೊಂದರೆ ಎಲ್ಲದರ ಬಗ್ಗೆ ನಿಮಗೆ ಸ್ವತಃ ಮನದಟ್ಟಾಗಲಿದೆ. ಇತರರ ಸಹಕಾರ ನಿಮಗೆ ದೊರೆಯಲಿದೆ. ಮಕ್ಕಳ ಜೊತೆ ಮಾತು ಕತೆ ಹೆಚ್ಚುಕಮ್ಮಿ ಆಗಿದ್ದರೆ ಎಲ್ಲವೂ ಸರಿಯಾಗಲಿದೆ. ಹೂಡಿಕೆಯಲ್ಲಿ ಏರು ಪೇರಾಗಿದ್ದರೆ ಅದನ್ನು ಸರಿಪಡಿಸಲು ಈ ದಿನ ಬಹಳ ಪ್ರಶಸ್ತವಾಗಿದೆ.