ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು!

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 20ನೇ ತಾರೀಖಿನ ಭಾನುವಾರದಂದು, ದಶಮಿ ತಿಥಿ, ಕೃತಿಕಾ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ದಶಮಿ ತಿಥಿ, ಕೃತಿಕಾ ನಕ್ಷತ್ರದಲ್ದಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದು ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಕೃತಿಕಾ ನಕ್ಷತ್ರ ಇದ್ದು ಮೇಷ ರಾಶಿಯವರು ಮನೆ ಕಡೆಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಸಂಸಾರದ ವಿಚಾರಗಳಲ್ಲಿ ಸ್ವಲ್ಪ ತೊಡಕು ಏರು ಪೇರು ಇರಬಹುದು‌. ನಿಮ್ಮ ಮನೆಯ ಸಂಬಂಧಿಕರು ಈ ಬಗ್ಗೆ ಪರಿಹರಿಸಲು ಎಚ್ಚರಿಕೆ ನೀಡಬಹುದು. ಹಾಗಾಗಿ ಅದನ್ನು ಸರಿ ಮಾಡಬೇಕಾದ ಪರಿಸ್ಥಿತಿ ಒದಗಿಬರಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ತರುವಂತಹ ದಿನವಾಗಿದೆ. ಹಿಂದಿನ ನಾಲ್ಕು ದಿನದಲ್ಲಿ ಮನಸ್ಸಿಗೆ ಶೋಭೆ ಇತ್ತು‌. ‌ಅದೆಲ್ಲವೂ ಕೂಡ ಪರಿಹಾರವಾಗಿ ನಿಮ್ಮ ಯೋಚನಾ ಶಕ್ತಿ ಮೂಲಕ ಯಶಸ್ಸು ಗಳಿಸುವಿರಿ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮನಸ್ಸಿಗೆ ಕ್ಷೇಷಕರವಾದ ದಿನ ಇಂದು ಆಗಿದೆ. ನಿಮ್ಮ ಮುಖ್ಯವಾದ ಕಾರ್ಯ ಕ್ಷೇತ್ರದಲ್ಲಿ ಇರುವ ಪಾರ್ಟ್ನರ್‌ಗಳು , ಉದ್ಯೋಗಿಗಳು ಅಥವಾ ಮಿತ್ರರು ವೈಮನಸ್ಸು ಮಾಡಿ ದೂರ ಹೋಗುವ ಸಾಧ್ಯತೆಯಿದೆ. ಆದರೆ ಎರಡು ದಿನಗಳಲ್ಲಿ ಈ ಬಗ್ಗೆ ಪರಿಹಾರವು ಸಿಗಲಿದೆ.

ಕಟಕ ರಾಶಿ: ಕಟಕರಾಶಿ ಅವರಿಗೆ ಇಷ್ಟಾರ್ಥ ಸಿದ್ಧಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಭಾಗ್ಯ ಸಿಗಲಿದೆ. ಮಿತ್ರರಿಂದ ಧನಾಗಮನ ಆಗುವ ಸಾಧ್ಯತೆ ಇದ್ದು, ಅಂದುಕೊಂಡದ್ದು ನೆರವೇರಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ‌ ಮತ್ತು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕಾಣಲಿದ್ದು, ಮಾಡಿದ ಕೆಲಸಗಳಿಗೆ ಉತ್ತಮ ಬೆಂಬಲ ಸಿಗಲಿದೆ‌.

ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಇರಲಿದ್ದು ಭಾಗ್ಯಸ್ಥಾನಕ್ಕೆ ಚಂದ್ರ ಬರಲಿದ್ದಾನೆ. ಆದರೂ ಭಗವಂತನ ಧ್ಯಾನ ಮಾಡಿದರೆ ಹೆಚ್ಚಿನ ಒಳಿತು ಆಗಲಿದೆ. ಆಗ ಸಂಪೂರ್ಣ ಫಲವು ಪ್ರಾಪ್ತಿಯಾಗಲಿದೆ.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಬುಧನ ವಕ್ರಸ್ಥಾನ ಯಾವೆಲ್ಲ ರಾಶಿಗೆ ಪರಿಣಾಮ ಬೀರಲಿದೆ?

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ‌ಕಷ್ಟಕರವಾದ ದಿನ. ಮನಸ್ಸಿಗೆ ಅಷ್ಟು ಪ್ರಮಾಣದ ನೆಮ್ಮದಿ ಇರುವುದಿಲ್ಲ. ಮನಸ್ಸಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ನಿಮಗೆ ಹತ್ತಿರವಾದವರೂ ನಿಮಗೆ ಬೇಕಾದ ಪ್ರತಿಕ್ರಿಯೆಯನ್ನು ಅವರು ನೀಡದೆ ಇರಬಹುದು. ಹೀಗಾಗಿ ಖಿನ್ನತೆ ಒಳಗಾಗುವ ಸಾಧ್ಯತೆಗಳು ಇದೆ. ಹಾಗಾಗಿ ಧ್ಯಾನ ಮಾಡಿ ಪರಿಹಾರ ಕಂಡುಕೊಳ್ಳಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಮುಖ್ಯವಾದ ವಿಚಾರಗಳಲ್ಲಿ ಯಾವುದೇ ತೊಡಕು ಇಂದು ಆಗುವುದಿಲ್ಲ. ಎಲ್ಲರೂ ನಿಮ್ಮ ಸಹಕಾರವನ್ನು ಕೋರಲಿದ್ದು ಮಿತ್ರತ್ವದಲ್ಲೂ ಉತ್ತಮ ಪಾಲು ಪಡೆಯುವಿರಿ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ.

ಧನಸ್ಸು: ಈ ರಾಶಿ ಅವರಿಗೆ ಇಂದು ಶತ್ರು ಬಾಧೆ ಕಾಡಬಹುದು. ಆದರೂ ಕೂಡ ಗೆಲುವನ್ನು ನೀವು ಕಾಣಲಿದ್ದೀರಿ. ಇತರ ವಿರೋಧಿಗಳಿಂದ ನಿಮಗೆ ತೊಂದರೆ ಕಾಡಬಹುದು‌. ಈ ಬಗ್ಗೆ ಜಾಗೃತರಾಗಿರಿ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಹಣಕಾಸಿನ ವಿಚಾರವಾಗಿ ತೊಂದರೆಯಾಗಲಿದೆ. ಬಿಸಿನೆಸ್‌ನಲ್ಲಿ ತೊಡಗಿ ಕೊಂಡವರು ಹಣ ಖರ್ಚು ಮಾಡುವ ಬಗ್ಗೆ ಜಾಗೃತರಾಗಿರಿ. ಹಾಗೆಯೇ ಯಾವ ವಿಚಾರದ ಕುರಿತು ಯೋಚಿಸಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ.

ಕುಂಭ ರಾಶಿ: ಕುಂಭರಾಶಿ ಅವರಿಗೆ ಸಂಸಾರದ ವಿಚಾರವಾಗಿ ಆಸ್ತಿ ಪಾಸ್ತಿ ವಿಚಾರವಾಗಿ ಗಮನದಿಂದ ಇದ್ದರೆ ಒಳಿತು‌‌. ಕೋರ್ಟ್ ವಿಚಾರವಾಗಿ ಯಾರೆಲ್ಲ ವ್ಯವಹಾರ ಮಾಡುತ್ತಿದ್ದೀರಿ ಈ ಬಗ್ಗೆ ಹೆಚ್ಚಿನ ಗಮನ ಇರಬೇಕು.

ಮೀನ ರಾಶಿ: ಮೀನ ರಾಶಿ ಅವರಿಗೆ ಇಂದು ಉತ್ತಮ ದಿನವಾಗಲಿದೆ. ಉದ್ಯೋಗದಲ್ಲಿಯೂ ಉತ್ತಮ ಅವಕಾಶಗಳು ಒದಗಿ ಬರಲಿದ್ದು ಯಶಸ್ಸನ್ನು ಕಾಣುವಿರಿ. ಅದರಲ್ಲೂ ಸೋಷಿಯಲ್ ಮೀಡಿಯಾ, ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶ ಒದಗಿ ಬರಲಿದೆ.