ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಶುಕ್ರನ ಪ್ರವೇಶದಿಂದ ಯಾವ ರಾಶಿಗೆ ಶುಭ ಫಲ ಇದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷೆಯ, ಆಷ್ಲೇಷ ನಕ್ಷತ್ರದ ಈ ದಿನ ಜುಲೈ 26 ನೇ ತಾರೀಖಿನ ಶನಿವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷೆಯ, ಆಷ್ಲೇಷ ನಕ್ಷತ್ರದ ಈ ದಿನ ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಶುಕ್ರ ಮಿಥುನ ರಾಶಿಯನ್ನು ಪ್ರವೇಶ ಮಾಡಲಿದ್ದು 20-25 ದಿನಗಳವರೆಗೆ ಇದೇ ರಾಶಿಯಲ್ಲಿರುತ್ತಾನೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ವಾದ ದಿನವಾಗಿದ್ದು ಉದ್ಯೋಗ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸನ್ನು ಕಾಣಲಿದ್ದೀರಿ. ಎಲ್ಲ ಅಭಿವೃದ್ಧಿ ಕೆಲಸಗಳಲ್ಲೂ ಬಹಳ ಆತ್ಮವಿಶ್ವಾಸದಿಂದ ನೀವು ಮುಂದುವರಿಯಬಹುದು.‌ ಎಲ್ಲದರಲ್ಲೂ ನಿಮಗೆ ಜಯ ಪ್ರಾಪ್ತಿಯಾಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರ ಸಂಸಾರದಲ್ಲಿ ಸುಖ ಕಾಣಲಿದೆ. ನಿಮ್ಮ ಸುಖ ಸ್ಥಾನ ದಲ್ಲಿ ಶುಕ್ರ ಬರುತ್ತಿದ್ದು ಮುಂದಿನ 20 ದಿನಗಳು ಬಹಳ ಹಿತಕರ ವಾತಾವರಣ ಉಂಟು ಮಾಡಲಿದೆ. ಶುಭ ಸಮಾರಂಭ, ಪೂಜೆ ಇತ್ಯಾದಿಗಳು ಇಂದು ನಡೆಯಬಹುದು. ನಿಮಗೆ ಧನ‌ ಆಗಮನವಾಗುವ ಸಾಧ್ಯತೆ ಕೂಡ ಇದೆ.

ಮಿಥುನ ರಾಶಿ: ಮಿಥುನ ರಾಶಿ ಇರುವವರಿಗೆ ಇಂದು ನಿಮ್ಮ ರಾಶಿಯಲ್ಲೇ ಶುಕ್ರ ಬರಲಿದ್ದು ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಕೆಲವು ದಿನದಿಂದ ಮಿತ್ರರಿಂದ ಮನಸ್ಸಿಗೆ ಸ್ವಲ್ಪ ಬೇಸರ ಇದ್ದು ಅದೆಲ್ಲ ಇಂದು ನಿವಾರಣೆಯಾಗಲಿದೆ. ಶತ್ರು ಗಳಿದ್ದರೂ ಗೆಲವು ನಿಮ್ಮದೆ ಆಗಲಿದೆ. ಎಲ್ಲ ಕಾರ್ಯದಲ್ಲೂ ಜಯ ಪ್ರಾಪ್ತಿಯಾಗುತ್ತದೆ. ಧನಾ ಆಗಮನ ಕೂಡ ಆಗುವ ಸಾಧ್ಯತೆ ಇದ್ದು ಹೊಸ ಮಿತ್ರರ ಪರಿಚಯವೂ ನಿಮಗೆ ಆಗಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕಷ್ಟಕರ ದಿನವಾಗಲಿದೆ. ನಿಮ್ಮ ಮಿತೃತ್ವ ಗಳಲ್ಲೂ ತೊಡಕು ಉಂಟಾಗಬಹುದು. ಶುಕ್ರ ನಿಮ್ಮ ವ್ಯಯ ಸ್ಥಾನದಲ್ಲಿ ಬರಲಿದ್ದು ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಅದರಲ್ಲೂ ಪುರುಷರು ಕೆಲವು ಮಹಿಳೆಯರ ಜೊತೆ ಬಹಳ ಗೌರವ ವಾಗಿ ನಡೆದು ಕೊಳ್ಳಬೇಕಾಗುತ್ತದೆ.‌ ಇಲ್ಲದಿದ್ದಲ್ಲಿ ಮಾನಸಿಕವಾಗಿ ಕೆಲವು ಮಹಿಳೆಯರಿಂದ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ‌

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಈ ದಿನ ಬಹಳ ಉತ್ತಮ ವಾಗಿದೆ. ಧನ ಆಗಮನ ವಾಗುವ ಸಾಧ್ಯತೆ ಕೂಡ ಇದೆ. ಗುಂಪು ಕೆಲಸ ಕಾರ್ಯ ಗಳಲ್ಲಿ ಇರುವವರಿಗೆ ಬಹಳಷ್ಟು ಯಶಸ್ಸು ..ಮಿತ್ರ ರಿಂದಲೂ ಉತ್ತಮ ದಿನವಾಗಲಿದೆ. ಅತ್ಯುತ್ತಮವಾದ ಫಲವನ್ನು ಇಂದು ನೀವು ಪಡೆಯಲಿದ್ದೀರಿ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಅಷ್ಟು ಉತ್ತಮವಾಗಿ ಇರೋದಿಲ್ಲ.ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮಗೆ ತೊಂದರೆ ಉಂಟಾಗಬಹುದು. ಯಾವುದೇ ಮುಖ್ಯ ನಿರ್ಧಾರ ಇಂದು ಕೈಗೊಳ್ಳದೆ ಮತ್ತು ಯಾರೊಂದಿಗೂ ವಾದ ವಿವಾದದೊಂದಿಗೆ ಹೋಗದೆ ತಾಳ್ಮೆಯಲ್ಲೇ ಇರುವುದು ಉತ್ತಮ

ತುಲಾ ರಾಶಿ: ತುಲಾ ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಲಿದೆ.ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದ್ದು ಸಮಾಜದಲ್ಲಿ ಗೌರವಾರ್ಥ ಪ್ರಾಪ್ತಿ ಆಗುತ್ತದೆ. ಮುಂಬರುವ ಸುಮಾರು 20 ದಿನಗಳಲ್ಲಿ ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು ಕಾಣಲಿದ್ದೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ಉತ್ತಮ ದಿನವಾಗಲಿದೆ. ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೂ ನೆಮ್ಮದಿ ಸಿಗಲಿದೆ. ಹಿಂದೆ ಇದ್ದಂತಹ ಮನಸ್ತಾಪಗಳು ಇಂದು ನಿವಾರಣೆಯಾಗಲಿದೆ. ಆರೋಗ್ಯದ ಬಗ್ಗೆಯೂ ಸುಧಾರಣೆ ಕಂಡು ಬಂದು ಒಳಿತನ್ನು ಕಾಣಲಿದ್ದೀರಿ. ಮನಸ್ಸಿಗೆ ನೆಮ್ಮದಿ ಹಾಗೂ ದಾಂಪತ್ಯದಲ್ಲಿ ಸುಖಕರ ಕಾಣುತ್ತೀರಿ

ಇದನ್ನು ಓದಿ:Daily Horoscope: ಶ್ರಾವಣ ಶುಕ್ರವಾರ ಯಾವೆಲ್ಲ ರಾಶಿಗೆ ಶುಭ ಫಲ ಇದೆ?

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಮನಸ್ಸಿಗೆ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ.‌ ಪಾರ್ಟ್ನರ್ ಶಿಪ್ ಕೆಲಸಗಳಲ್ಲಿ ತೊಡಕು ಉಂಟಾಗಬಹುದು. ಆದರೆ ಮುಂದಿನ ದಿನ ಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದ್ದು ಹೆಚ್ಚು ಯೋಚಿಸಬೇಕಾಗಿಲ್ಲ.

ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಉತ್ತಮವಾದ ಗೋಚರ‌ ಇಲ್ಲ. ನಿಮ್ಮ ಸಾಮಾಜಿಕ ಜೀವನದಲ್ಲಿ ವೈಮನನಸ್ಸು ಉಂಟಾಗುವ ಸಾಧ್ಯತೆ ಇದೆ. ಬೇರೆಯವರಿಂದ ತೊಂದರೆ ಅಪವಾದ ಇತ್ಯಾದಿ ಬರಬಹುದು. ಆದ್ದರಿಂದ ಬಹಳಷ್ಟು ಜಾಗೂರಕರಾಗಿರಿ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೂ ಭಾರೀ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಬಿಸಿನೆಸ್ ವ್ಯವಹಾರ ಗಳಲ್ಲಿ ಇರುವವರಿಗೆ ಅತ್ಯುತ್ತಮ ದಿನವಾಗಲಿದ್ದು ಯಶಸ್ಸು ಕಾಣಲಿದ್ದೀರಿ. ಇತರರಿಂದ ಧನ ಆಗಮನ ಕೂಡ ಉಂಟಾಗುವ ಸಾಧ್ಯತೆ ಇದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಲಿದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು ಕಾಣುತ್ತೀರಿ. ತಾಯಿಯ ಆರೋಗ್ಯ ಸುಧಾರಣೆ ಆಗುತ್ತದೆ. ವ್ಯವಹಾರ ಉದ್ಯಮದಲ್ಲೂ ಯಶಸ್ಸು ಕಾಣಬಹುದು.