Daily Horoscope: ಶ್ರಾವಣ ಶುಕ್ರವಾರ ಯಾವೆಲ್ಲ ರಾಶಿಗೆ ಶುಭ ಫಲ ಇದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷೆಯ ಪುಷ್ಯ ನಕ್ಷತ್ರದ ಈ ದಿನ ಜುಲೈ 25ನೇ ತಾರೀಖಿನ ಶುಕ್ರವಾರ ಯಾವ ರಾಶಿಯವರಿಗೆ ಯಾವ ಫಲವಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷೆಯ ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಶ್ರಾವಣ ಶುಕ್ರವಾರ ಅತ್ಯಂತ ಶುಭ ದಿನ. ಇಂದು ಸಂಜೆ ಮನೆ ಸ್ವಚ್ಛ ಮಾಡಿ ಲಕ್ಷ್ಮೀ ಕಲಶವನ್ನು ಇಟ್ಟು ಲಕ್ಷ್ಮಿ ದೇವಿಯ ಸೋತ್ರಗಳನ್ನು ಪಠಿಸುವ ಮೂಲಕ ಧ್ಯಾನ ಮಾಡಿದರೆ ಮನೆಗೆ ಬಹಳಷ್ಟು ಒಳಿತಗಾಲಿದೆ. ಪುಷ್ಯ ನಕ್ಷತ್ರದ ಈ ದಿನ ಮೇಷ ರಾಶಿಯವರು ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸ ಬೇಕಾಗುತ್ತದೆ. ಆದರೆ ಯಾವುದೇ ಭಯ ಪಡುವ ಸನ್ನಿವೇಶಗಳು ಬರುವುದಿಲ್ಲ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅತ್ಯುತ್ತಮ ದಿನ. ಮಾಧ್ಯಮ ರಂಗದಲ್ಲಿ ಇರುವವರು, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಬಹಳ ಉತ್ತಮ ದಿನವಾಗಲಿದೆ. ಆತ್ಮವಿಶ್ವಾಸವು ಉತ್ತಮ ರೀತಿಯಲ್ಲಿ ಇದ್ದು ಸಾಕಷ್ಟು ಪ್ರಸಿದ್ಧಿ ಪಡೆಯಲು ಅವಕಾಶ ಒದಗಿ ಬರಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಸಂಸಾರದ ತಾಪತ್ರಯಗಳು ಹೆಚ್ಚು ಇರಬಹುದು. ಆದರೆ ಈ ಬಗ್ಗೆ ಯಾವುದೇ ದೈರ್ಯ ಕಳೆದುಕೊಳ್ಳಬೇಡಿ. ಸಂಜೆ ನಿಧಾನವಾಗಿ ಪರಿಹಾರ ಪ್ರಾಪ್ತಿಯಾಗಲಿದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಕೈಗೊಳ್ಳಬೇಡಿ. ಪುಷ್ಯ ನಕ್ಷತ್ರದ ಅಧಿಪತಿ ಚಂದ್ರನಾಗಿರುವುದರಿಂದ ನಿಧಾನವಾಗಿ ತಾಳ್ಮೆಯಿಂದ ಸಮಸ್ಯೆ ಪರಿಹರಿಸಿಕೊಂಡರೆ ಉತ್ತಮ ದಿನವಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಎರಡು ದಿನಗಳ ಹಿಂದೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಅದೇ ರೀತಿ ನೆಮ್ಮದಿಯೂ ಪ್ರಾಪ್ತಿಯಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಅಷ್ಟು ಉತ್ತಮವಾಗಿಲ್ಲ. ಹೆಚ್ಚಾಗಿ ಕಿರಿ-ಕಿರಿ ಉಂಟಾ ಗುವ ಸಾಧ್ಯತೆ ಕೂಡ ಇದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ಕಾಣುವುದಿಲ್ಲ. ಹಾಗಾಗಿ ಮನಸ್ಸಿಗೆ ಕ್ಷೇಷ ಉಂಟಾಗುವ ಸಾಧ್ಯತೆ ಇದೆ. ಆದರೆ ಎರಡು ದಿನಗಳ ನಂತರ ಎಲ್ಲ ಸಮಸ್ಯೆಗೂ ಪರಿಹಾರ ದೊರೆಯುತ್ತದೆ. ಬಿಸಿನೆಸ್ ಹಣಕಾಸಿನ ವ್ಯವಹಾರ ಕುರಿತು ಇಂದು ಮುಖ್ಯವಾದ ನಿರ್ಧಾರ ಕೈಗೊಳ್ಳಲು ಹೋಗಬೇಡಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ನೆಮ್ಮದಿ, ಮಿತ್ರರಿಂದ ಅತೀ ಹೆಚ್ಚಿನ ಸಂತೋಷ ಮತ್ತು ಧನಾಗಮನ ಆಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಇಂದು ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವೊಂದು ಅಲ್ಲದ ವಿಚಾರಕ್ಕೂ ಜವಾಬ್ದಾರಿ ತೆಗೆದುಕೊಂಡು ಸರಿಯಾದ ನಿರ್ಣಯ ತೆಗೆದು ಕೊಳ್ಳಬೇಕಾಗುತ್ತದೆ.
ಇದನ್ನು ಓದಿ:Daily Horoscope: ಈ ರಾಶಿಯವರಿಗೆಲ್ಲ ಸಿಗಲಿದೆ ಪುನರ್ವಸು ನಕ್ಷತ್ರದ ಕೃಪಕಟಾಕ್ಷ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೂ ನೆಮ್ಮದಿ ಸಿಗಲಿದೆ. ಆದರೆ ಹಿರಿಯರ- ತಂದೆ, ತಾಯಿಯರ ಆಶೀರ್ವಾದ ಇಲ್ಲದೆ ಇಂದು ಯಾವ ಕೆಲಸಗಳು ನೆರವೇರುವುದಿಲ್ಲ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಮನಸ್ಸಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ಇಂದು ದೊರಕುವುದಿಲ್ಲ. ಹಾಗಾಗಿ ಸ್ನೇಹಿತರಿಂದ, ಪ್ರೀತಿ ಪಾತ್ರರಿಂದ ಬೇಸರ ಉಂಟಾಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಬಹಳ ಅತ್ಯುತ್ತಮ ವಾದ ದಿನವಾಗಲಿದೆ. ಎಲ್ಲರಿಗೂ ಇಂದು ಸಹಕಾರ ಪ್ರಾಪ್ತಿಯಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ, ಸಂತೋಷಕರ ದಿನವಾಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೂ ಭಾರೀ ನೆಮ್ಮದಿ ಪ್ರಾಪ್ತಿಯಾಗಲಿದೆ. ಸಾಮಾಜಿಕ ವ್ಯವಹಾರದಲ್ಲಿ ಕೂಡ ಜಯ ಪ್ರಾಪ್ತಿಯಾಗಲಿದೆ.
ಮೀನ ರಾಶಿ: ಮೀನ ರಾಶಿಯವರು ಇಂದು ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಬುದ್ಧಿವಂತಿಕೆ ಬಳಸಿ ಕೊಳ್ಳುತ್ತೀರಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಇಂದು ಹೆಚ್ಚಾಗಿ ಪಾಲ್ಗೊಳ್ಳುತ್ತೀರಿ. ಆದರೆ ಮನಸ್ಸಿಗೆ ಸಂಬಂಧಿಸಿದ ಹಾಗೂ ಪ್ರೀತಿ, ಪ್ರೇಮ ದಾಂಪತ್ಯ ವಿಚಾರಗಳಲ್ಲಿ ಮನಸ್ಸಿಗೆ ಕ್ಷೇಷ ಇರಬಹುದು. ಪೋಷಕರಿಗೆ ಮಕ್ಕಳಿಂದ ಇಂದು ಕಿರಿಕಿರಿಯಾಗುವ ಸಾಧ್ಯತೆ ಇದೆ. ಆದರೆ ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುತ್ತದೆ.