ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ ನವೆಂಬರ್ 25, 2026: ಹೊಸ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ, ಸದುಪಯೋಗಪಡಿಸಿಕೊಳ್ಳಿ

Horoscope Today November 25, 2026: ಇಂದು ಬುಧವಾರ, ಗಣಪತಿಯ ದಿನ. ಚಂದ್ರ ಮಕರ ರಾಶಿಯಲ್ಲಿರುತ್ತಾನೆ. ಎಲ್ಲರಿಗೂ ಕೆಲಸದಲ್ಲಿ ಒಳ್ಳೆಯ ದಿನ, ಒಂದು ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ವ್ಯಾಪಾರಿಗಳಿಗೆ ಆರ್ಥಿಕವಾಗಿ ಉತ್ತಮ ದಿನ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 25, 2026 6:00 AM

ಮೇಷ ರಾಶಿ: ಇಂದು ನಿಮಗೆ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಉತ್ತಮ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಸಿಕ್ಕ ಅವಕಾಶ ಬಿಡಬೇಡಿ.

ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಕೆಲಸದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಮಿಥುನ ರಾಶಿ: ಇಂದು ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ. ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಸಹಕಾರ.

ಕರ್ಕ ರಾಶಿ: ಹಣದ ವಿಷಯದಲ್ಲಿ ಒಳ್ಳೆಯ ದಿನ. ಪ್ರೀತಿಪಾತ್ರರಿಂದ ಒಂದು ಸಣ್ಣ ಉಡುಗೊರೆ ಸಿಗಲಿದೆ. ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ.

ಸಿಂಹ ರಾಶಿ: ಇಂದು ನೀವು ತುಂಬಾ ಬ್ಯುಸಿ ಆಗಿರ್ತೀರಿ. ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ದೊರೆಯಲಿದೆ. ಉದ್ಯೋಗದಲ್ಲಿ ಪ್ರಗತಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯ.

ಬುಧವಾರ ಗಣೇಶನ ಪೂಜೆಗೂ ಮುನ್ನ ಈ 5 ಕೆಲಸ ಮಾಡಿ; ಹಣಕಾಸಿನ ಸಮಸ್ಯೆ ದೂರವಾಗುತ್ತೆ

ಕನ್ಯಾ ರಾಶಿ: ನಿಮ್ಮ ರಾಶಿಗೆ ಬುಧನೇ ಅಧಿಪತಿ. ಪರೀಕ್ಷೆ, ಕೆಲಸ ಎಲ್ಲದರಲ್ಲೂ ಯಶಸ್ಸು. ಹಣಕಾಸಿನ ಸ್ಥಿತಿ ಸುಧಾರಣೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.

ತುಲಾ ರಾಶಿ: ಸಂಗಾತಿ ಜತೆ ಒಂದು ಸಣ್ಣ ಜಗಳ ಆಗಬಹುದು. ಆದರೆ ಬಳಿಕ ಎಲ್ಲ ಸರಿ ಹೋಗುತ್ತೆ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಎಚ್ಚರಿಕೆ. ಹೊರಗಿನ ತಿಂಡಿ ತಿನ್ನಬೇಡಿ. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಹಳೆಯ ಸಮಸ್ಯೆಗಳೆಲ್ಲ ಪರಿಹಾರವಾಗಲಿದೆ.

ಧನು ರಾಶಿ: ಅದೃಷ್ಟ ನಿಮ್ಮ ಕೈಹಿಡಿಯುವ ದಿನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ದೂರ ಪ್ರಯಾಣದ ಸಾಧ್ಯತೆ ಇದೆ. ಆರ್ಥಿಕವಾಗಿ ಲಾಭದಾಯಕ ಬೆಳವಣಿಗೆಗಳು ಕಂಡುಬರಬಹುದು.

ಮಕರ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಿ.

ಕುಂಭ ರಾಶಿ: ಇಂದು ಸೃಜನಶೀಲ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ವ್ಯಾಪಾರಿಗಳಿಗೆ ಉತ್ತಮ ದಿನ. ಸ್ನೇಹಿತರಿಂದ ಸಹಾಯ ಸಿಗಲಿದೆ.

ಮೀನ ರಾಶಿ: ಇಡೀ ದಿನ ಸಂತೋಷ ಮತ್ತು ನೆಮ್ಮದಿಯಿಂದ ಇರುತ್ತೀರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಆರೋಗ್ಯದ ಕಡೆ ಗಮನ ಕೊಡಿ.