Astro Tips: ಗುರುವಾರ ಈ ದೈವ ಸ್ವರೂಪಿ ಗಿಡವನ್ನು ಆರಾಧಿಸಿ; ಸಕಲ ಸಂಕಷ್ಟದಿಂದ ದೂರವಾಗಿ
ವಿಷ್ಣುವಿನ ಅನುಗ್ರಹ ಪಡೆಯಲು ಭಕ್ತರು ಗುರುವಾರ ಉಪವಾಸ ವ್ರತ ಮಾಡುವ ಮೂಲಕ ಅಶೀರ್ವಾದ ಪಡೆಯುತ್ತಾರೆ. ಜತೆಗೆ ಇಂದು ಮನೆಯಲ್ಲಿ ಅಥವಾ ಮನೆಯ ಹೊರಭಾಗದಲ್ಲಿರುವ ಬಾಳೆಗಿಡಕ್ಕೆ ನೀರು ಅರ್ಪಿಸಿ ಪೂಜಿಸುವುದು ಅತ್ಯಂತ ಪುಣ್ಯವೆಂದು ಪರಿಗಣಿಸಲಾಗಿದೆ. ಬಾಳೆಗಿಡದಲ್ಲಿ ಶ್ರೀಹರಿಯ ವಾಸವಿದೆ ಎನ್ನುವ ಪುರಾಣ ನಂಬಿಕೆಯೂ ಇದೆ.
ವಿಷ್ಣು -
ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಪ್ರತಿದಿನವೂ ಒಬ್ಬೊಬ್ಬ ದೇವತೆಗೆ ಸಮರ್ಪಿತವಾಗಿದೆ. ಸೋಮವಾರ ಶಿವನಿಗೆ, ಮಂಗಳವಾರ ಹನುಮಂತನಿಗೆ ಮತ್ತು ಬುಧವಾರ ಗಣೇಶನ ಪೂಜೆಗೆ ಪ್ರಸಿದ್ಧ. ಅದೇ ರೀತಿ ಗುರುವಾರ (Thursday) ಭಗವಾನ್ ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವ ನೀಡಲಾಗಿದೆ. ಈ ದಿನ ಉಪವಾಸದಿಂದ ಹಾಗೂ ಭಕ್ತಿ ಭಾವದಿಂದ ವಿಷ್ಣುವನ್ನು ಪೂಜಿಸಿದರೆ, ಶ್ರೀಹರಿ ಶೀಘ್ರ ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ಪುರಾಣಗಳಲ್ಲಿ ಉಲ್ಲೇಖವಾಗುತ್ತದೆ.
ಹೌದು, ಹಿಂದೂ ಧರ್ಮದಲ್ಲಿ ಗುರುವಾರವನ್ನು ಭಗವಾನ್ ವಿಷ್ಣುವಿನ ಆರಾಧನೆಗೆ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶ್ರೀಹರಿಯನ್ನು ಸ್ಮರಿಸಿ ಉಪವಾಸದಿಂದ ಪೂಜೆ ಮಾಡಿದರೆ, ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಶ್ರೀಹರಿಯ ಕೃಪೆಯಿಂದ ಪಾಪ ಕ್ಷಯವಾಗಿ, ಪುಣ್ಯ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಗುರುವಾರದ ಪೂಜೆ ಹಾಗೂ ಉಪವಾಸವು ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆಯುವಲ್ಲಿ ಬಹಳ ಪರಿಣಾಮಕಾರಿ ಎಂದು ಹೇಳಲಾಗಿದೆ. ಈ ದಿನ ವಿಶೇಷವಾಗಿ ಭಗವಾನ್ ವಿಷ್ಣು ಹಾಗೂ ಗುರು ಬೃಹಸ್ಪತಿಯನ್ನು ಆರಾಧಿಸುವುದು ಶುಭದಾಯಕ.
ಇದರೊಂದಿಗೆ ಗುರುವಾರ ಬಾಳೆಗಿಡವನ್ನು ಪೂಜಿಸುವುದರಿಂದ ಮನೋಕಾಮನೆಗಳು ನೆರವೇರಲಿದೆ ಎನ್ನುವ ನಂಬಿಕೆ ಇದೆ. ಧಾರ್ಮಿಕ ಪುರಾಣಗಳು ಮತ್ತು ಹಳೆಯ ಸಂಪ್ರದಾಯಗಳ ಪ್ರಕಾರ, ಬಾಳೆಗಿಡದಲ್ಲಿ ಭಗವಾನ್ ವಿಷ್ಣು ವಾಸ ಮಾಡುತ್ತಾರೆ ಎನ್ನಲಾಗುತ್ತದೆ. ಅದಕ್ಕಾಗಿ ಗುರುವಾರ ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ಬಾಳೆಗಿಡಕ್ಕೆ ಪೂಜೆ ಮಾಡುವ ಅಭ್ಯಾಸ ಹಲವು ಹಿಂದೂ ಮನೆಗಳಲ್ಲಿ ಇನ್ನೂ ಜೀವಂತವಾಗಿದೆ.
ವಿಷ್ಣುವಿನ ಅನುಗ್ರಹ ಪಡೆಯಲು ಭಕ್ತರು ಗುರುವಾರ ಉಪವಾಸದಿಂದ ಇರಬೇಕು. ಜತೆಗೆ ಮನೆಯಲ್ಲಿ ಅಥವಾ ಮನೆಯ ಹೊರಭಾಗದಲ್ಲಿರುವ ಬಾಳೆಗಿಡಕ್ಕೆ ನೀರು ಅರ್ಪಿಸಿ ಪೂಜಿಸುವುದು ಅತ್ಯಂತ ಪುಣ್ಯವೆಂದು ಪರಿಗಣಿಸಲಾಗಿದೆ.
ಪೂಜೆಯ ಭಾಗವಾಗಿ ದೇಸಿ ತುಪ್ಪದ ದೀಪ ಹಚ್ಚಿ, ವಿಷ್ಣು ಮತ್ತು ಗುರು ಬೃಹಸ್ಪತಿಯ ಧ್ಯಾನ ಮಾಡುವುದರಿಂದ ವಿವಾಹಕ್ಕೆ ಇರುವ ಅಡ್ಡಿಗಳು ದೂರವಾಗುತ್ತವೆ, ದಾಂಪತ್ಯ ಜೀವನದಲ್ಲಿ ಪ್ರೀತಿ ಉಂಟಾಗುತ್ತದೆ ಹಾಗೂ ‘ಕಂಕಣ ಬಲ’ ಕೂಡಿ ಬಂದು, ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ.
ಭಕ್ತರ ನಂಬಿಕೆಯ ಪ್ರಕಾರ, ಬಾಳೆಗಿಡಕ್ಕೆ ಪೂಜೆ ಮಾಡಿದರೆ ವಿಷ್ಣು ಪ್ರಸನ್ನನಾಗಿ ಮನೋಕಾಮನೆಗಳನ್ನು ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ. ಜೊತೆಗೆ, ಈ ಪೂಜೆ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿ ಗುರುಗ್ರಹದ ಬಲ ಹೆಚ್ಚಿಸುತ್ತದೆಕೆಮತ್ತು ವಿವಾಹಕ್ಕೆ ಅಡ್ಡಿಯಾದ ಅಡೆತಡೆಗಳನ್ನು ನೀಗಿಸುತ್ತದೆ ಎಂಬ ನಂಬಿಕೆಯೂ ಇದೆ.
ಬುಧವಾರ ಗಣೇಶನ ಈ ಮಂತ್ರಗಳನ್ನ ಪಠಿಸಿದರೆ ಬುಧ ದೋಷ ನಿವಾರಣೆಯಾಗುತ್ತದೆ
ಪೂಜೆ ಮಾಡುವ ವಿಧಾನ ಹೇಗೆ?
ಗುರುವಾರ ಬೆಳಗ್ಗೆ ಮೊದಲು ಭಗವಾನ್ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ನಂತರ ಮನೆಯ ಹೊರಗಿರುವ ಬಾಳೆಗಿಡಕ್ಕೆ ಶುದ್ಧ ನೀರು ಹಾಯಿಸಿ, ಅರಶಿನ ತುಂಡು, ಕಡಲೆಬೇಳೆ ಮತ್ತು ಬೆಲ್ಲವನ್ನು ಅರ್ಪಿಸಿ ನಮಸ್ಕರಿಸಬೇಕು. ಅಕ್ಷತೆ ಮತ್ತು ಪುಷ್ಪವನ್ನು ಸಮರ್ಪಿಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದು ಪೂಜೆಯ ಪ್ರಮುಖ ಅಂಗವಾಗಿದೆ. ಭಕ್ತರ ನಂಬಿಕೆಯ ಪ್ರಕಾರ, ಈ ವಿಧಿಯನ್ನು ಶ್ರದ್ಧೆಯಿಂದ ಮಾಡಿದರೆ ಸರ್ವ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ.