ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಉತ್ತರಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯದ ಬಗ್ಗೆ ಇಲ್ಲಿದೆ ಮಾಹಿತಿ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ. ಆದರೆ ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು.
ವೃಷಭ ರಾಶಿ: ಇಂದು ಕಷ್ಟದ ದಿನವಾಗಲಿದ್ದು, ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕುವುದು ಒಳಿತಲ್ಲ. ಯಾರ ಸಹಕಾರ ಕೂಡ ನಿಮಗೆ ಇಂದು ಸಿಗಲಾರದು.
ಮಿಥುನ ರಾಶಿ: ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಅಭಿವೃದ್ಧಿ ಕಾಣುತ್ತೀರಿ. ಅದೇ ರೀತಿ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಾಣುತ್ತೀರಿ. ಸಂಗಾತಿಯ ಸಹಕಾರದಿಂದ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುತ್ತದೆ.
ಕರ್ಕಾಟಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಹಾಗೂ ಅಭಿವೃದ್ಧಿ ಕಾಣಬಹುದು. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಕೂಡ ಸಿಗುವ ಸಾಧ್ಯತೆಯಿದೆ.
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಸೃಜನಶೀಲ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಆದರೆ ಹೊಸ ಹೂಡಿಕೆ ವಿಚಾರದಲ್ಲಿ ಸಲಹೆ ಪಡೆಯುವುದು ಉತ್ತಮ.
ಕನ್ಯಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಆದರೆ ಕೋರ್ಟ್, ಕಚೇರಿ ವ್ಯವಹಾರದಲ್ಲಿ ಇರೋರಿಗೆ ಕಷ್ಟ ಎದುರಾಗಲಿದೆ. ಕೆಲವೊಂದು ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ವೈವಾಹಿಕ ಜೀವನದಲ್ಲಿ ನೆಮ್ಮದಿ ಬೇಕಾ? ಬೆಡ್ರೂಂನಲ್ಲಿ ಹೀಗಿರಲಿ ವಾಸ್ತು
ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಆತ್ಮ ವಿಶ್ವಾಸದಿಂದ ಮಾಡುವ ಕೆಲಸ ಕಾರ್ಯದಲ್ಲಿ ಜಯ ಉಂಟಾಗಬಹುದು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದ್ದು, ಹೊಸ ಪರಿಚಯಗಳು ಭವಿಷ್ಯದಲ್ಲಿ ನೆರವಾಗಲಿವೆ.
ವೃಶ್ಚಿಕ ರಾಶಿ: ಉತ್ತಮ ದಿನವಾಗಲಿದ್ದು, ಮನೆಯ ಬಗ್ಗೆ ಹಾಗೂ ನಿಮ್ಮ ಸಂಬಂಧಿಕರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.
ಧನು ರಾಶಿ: ಇಂದು ಯಶಸ್ಸು ತರುವ ದಿನ ನಿಮ್ಮದಾಗುತ್ತದೆ. ಎರಡು ಮೂರು ದಿನಗಳ ತೊಂದರೆ ಮಾಯವಾಗಿ ಸರಿಯಾದ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.
ಮಕರ ರಾಶಿ: ಇಂದು ನಿಮ್ಮ ಖರ್ಚುಗಳು ಅನಿರೀಕ್ಷಿತವಾಗಿ ಹೆಚ್ಚಾಗಬಹುದು. ಆದ್ದರಿಂದ ಹಣಕಾಸಿನ ನಿರ್ವಹಣೆಯಲ್ಲಿ ಜಾಗೃತಿ ವಹಿಸಿ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕುಂಭ ರಾಶಿ: ಉತ್ಯಮ ದಿನವಾಗಲಿದೆ. ಹೊಸ ಆಲೋಚನೆಗಳು ಯಶಸ್ಸು ತಂದು ಕೊಡಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ.
ಮೀನ ರಾಶಿ: ಉತ್ತಮ ದಿನವಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಹಾಗೂ ನೆಮ್ಮದಿ ಸಿಗುತ್ತದೆ. ಆರ್ಥಿಕ ವಾಗಿಯೂ ಯಶಸ್ಸು ಕಾಣುತ್ತೀರಿ.