Vastu Tips: ವೈವಾಹಿಕ ಜೀವನದಲ್ಲಿ ನೆಮ್ಮದಿ ಬೇಕಾ? ಬೆಡ್‌ರೂಂನಲ್ಲಿ ಹೀಗಿರಲಿ ವಾಸ್ತು
ವೈವಾಹಿಕ ಜೀವನದಲ್ಲಿ ಪದೇ ಪದೇ ಮನಸ್ತಾಪಗಳು ಉಂಟಾಗುತ್ತಿದ್ದರೆ ಅದರ ಹಿಂದೆ ಬೆಡ್‌ರೂಂ ವಾಸ್ತುವೂ ಕಾರಣವಾಗಿರಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮಲಗುವ ಕೋಣೆಯಲ್ಲಿ ಸರಿಯಾದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಧನಾತ್ಮಕತೆ ಹೆಚ್ಚುತ್ತದೆ.
ವಾಸ್ತು ಶಾಸ್ತ್ರ -
ಬೆಂಗಳೂರು: ದಾಂಪತ್ಯ ಜೀವನ ಸುಖಕರವಾಗಿರಬೇಕಾದರೆ ಪ್ರೀತಿ, ನಂಬಿಕೆ ಮತ್ತು ಪರಸ್ಪರ ಹೊಂದಾಣಿಕೆ ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳೇ ದೊಡ್ಡ ಮನಸ್ತಾಪಗಳಿಗೆ ಕಾರಣವಾಗಿ ವೈವಾಹಿಕ ಸಂಬಂಧಗಳಲ್ಲಿ ಬಿರುಕನ್ನು ಉಂಟುಮಾಡುತ್ತಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಶಕ್ತಿ, ವಿಶೇಷವಾಗಿ ಮಲಗುವ ಕೋಣೆಯ ವಾತಾವರಣ ದಾಂಪತ್ಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಬೆಡ್‌ರೂಂನಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವ ದಿಕ್ಕಿನಲ್ಲಿ ಇಟ್ಟರೆ ಶುಭಫಲ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ ಸಲಹೆಯಂತೆ(Vastu Tips) ಯಾವ ವಸ್ತುಗಳನ್ನು ಮಲಗುವ ಕೊನೆಯಲ್ಲಿಟ್ಟರೆ ಜೀವನದಲ್ಲಿ ಜೀವನದಲ್ಲಿ ಯಶಸ್ಸು ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಬೆಡ್‌ರೂಂನಲ್ಲಿ ಪಿರಮಿಡ್ ಇಟ್ಟರೆ ಏನು ಪ್ರಯೋಜನ?
ವಾಹನ ಖರೀದಿ–ಮಾರಾಟ, ಶೋರೂಂ ಅಥವಾ ವಾಹನ ಸಂಬಂಧಿತ ಉದ್ಯಮದಲ್ಲಿ ತೊಡಗಿರುವವರು ಮಲಗುವ ಕೋಣೆಯಲ್ಲಿ ಮರದ ಅಥವಾ ತಾಮ್ರದ ಪಿರಮಿಡ್ ಇಡುವುದು ಶುಭಕರ ಎಂದು ನಂಬಲಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಿ, ಹಣದ ಸಮಸ್ಯೆಗಳು ಕಡಿಮೆಯಾಗುತ್ತವೆ ಎನ್ನಲಾಗುತ್ತದೆ. ಬರವಣಿಗೆ, ಸಾಹಿತ್ಯ ಅಥವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವವರು ತಮ್ಮ ಕೋಣೆಯಲ್ಲಿ ಹಸಿರು, ನೀಲಿ, ಹಳದಿ ಮತ್ತು ಕೆಂಪು ಬಣ್ಣಗಳ ಸಂಯೋಜನೆ ಇರಿಸುವುದು ಉತ್ತಮ. ಇದು ವೃತ್ತಿಯಲ್ಲಿ ಬೆಳವಣಿಗೆಗೆ ಸಹಕಾರಿ ಎಂದು ಹೇಳಲಾಗುತ್ತದೆ.
ಅಕ್ವೇರಿಯಂ ಇಟ್ಟರೆ ಲಾಭವೇನು?
ಹೋಟೆಲ್, ರೆಸ್ಟೋರೆಂಟ್, ಬೇಕರಿ ಅಥವಾ ಆಹಾರ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮಲಗುವ ಕೋಣೆಯಲ್ಲಿ ನಾಣ್ಯಗಳಿಂದ ತುಂಬಿದ ಒಂದು ಬಟ್ಟಲನ್ನು ಇಡುವುದು ಒಳಿತು ಎಂದು ವಾಸ್ತು ತಿಳಿಸುತ್ತದೆ. ಇದರಿಂದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಜೊತೆಗೆ ಹಸುವಿನ ಮೂರ್ತಿ ಅಥವಾ ಚಿತ್ರ ಇಟ್ಟರೂ ಶುಭಕರ.
ಅದೇ ರೀತಿ ಅಕ್ವೇರಿಯಂ ಇಡುವುದೂ ಒಳ್ಳೆಯದು. ಮೀನಿನ ಚಲನವಲನ ಮನಸ್ಸಿಗೆ ಶಾಂತಿ ನೀಡುತ್ತದೆ ಹಾಗೂ ಅದೃಷ್ಟವನ್ನು ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ. ಅಕ್ವೇರಿಯಂ ಇಡಲು ಸಾಧ್ಯವಾಗದಿದ್ದರೆ ಅದರ ಚಿತ್ರವನ್ನೂ ಗೋಡೆಗೆ ಹಾಕಬಹುದು.
Vastu Tips: ವಾಸ್ತು ಪ್ರಕಾರ ಮನೆಗೆ ಯಾವ ಬಣ್ಣ ಸೂಕ್ತ? ಜೀವನದಲ್ಲಿ ಬದಲಾವಣೆ ತರುವ ಬಣ್ಣಗಳು ಇವು!
ನವಿಲುಗರಿ ಇರಿಸುವ ಮಹತ್ವ
ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ತೊಡಗಿರುವವರು ಮಲಗುವ ಕೋಣೆಯಲ್ಲಿ ನವಿಲುಗರಿ ಇಡುವುದು ಶುಭಕರ. ಬೆಳ್ಳಿಯಿಂದ ಮಾಡಿರುವ ನವಿಲುಗರಿ ಇನ್ನಷ್ಟು ಲಾಭಕರ ಎಂದು ಹೇಳಲಾಗುತ್ತದೆ.
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೋಣೆಯಲ್ಲಿ ಹರಳುಗಳನ್ನು ಇಡುವುದನ್ನು ತಪ್ಪಿಸಬೇಕು. ಔಷಧ ಕ್ಷೇತ್ರದವರು ಸೂರ್ಯದೇವರ ಚಿತ್ರವನ್ನು ಕೋಣೆಯಲ್ಲಿ ಇರಿಸಿದರೆ ಉತ್ತಮ ಫಲ ದೊರೆಯುತ್ತದೆ ಎನ್ನಲಾಗುತ್ತದೆ.
ಕಪ್ಪು ಬಣ್ಣದ ಶೋ ಪೀಸ್ ಇಟ್ಟರೆ ಏನಾಗುತ್ತದೆ..?
ಪಾದರಕ್ಷೆ ಉದ್ಯಮ ಅಥವಾ ಸಂಬಂಧಿತ ವ್ಯವಹಾರ ಮಾಡುವವರು ಮಲಗುವ ಕೋಣೆಯಲ್ಲಿ ಕಪ್ಪು ಬಣ್ಣದ ಶೋ ಪೀಸ್ ಇಡುವುದು ಒಳ್ಳೆಯದು.
ಕಲೆ, ಸಂಗೀತ, ಸಾಹಿತ್ಯ ಅಥವಾ ಸೃಜನಾತ್ಮಕ ಕ್ಷೇತ್ರದಲ್ಲಿ ತೊಡಗಿರುವವರು ವೀಣೆ ಅಥವಾ ಕೊಳಲು ಇಟ್ಟುಕೊಳ್ಳುವುದು ಉತ್ತಮ. ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅಲ್ಮೆರಾದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಇಡಬಹುದು. ಪೀಠೋಪಕರಣ ಅಥವಾ ಮರದ ಉದ್ಯಮದಲ್ಲಿ ತೊಡಗಿರುವವರು ಕೊಳಲು ಇಡುವುದರಿಂದ ಆರ್ಥಿಕ ಲಾಭವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.