ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಅಕ್ಟೋಬರ್ 6 ,2026: ಪ್ರೀತಿ ಪಾತ್ರರ ಜೊತೆ ಒಡಕು ಕಾಣುವ ಸಾಧ್ಯತೆ!

Horoscope Today October 6th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ದಶಮಿ ತಿಥಿ, ಆಶ್ಲೇಷಾ ನಕ್ಷತ್ರದ ಅಕ್ಟೋಬರ್‌ 6ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಆಶ್ಲೇಷಾ  ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದ್ದು ಮಾತಿನಲ್ಲಿ ಜಾಗೃತರಾಗಿರಿ. ಸ್ನೇಹ- ಸಂಬಂಧದಲ್ಲಿ ಒಡಕು ಕಾಣಬಹುದು. ಬಿಸಿನೆಸ್ ವ್ಯವಹಾರದಲ್ಲೂ ಜಾಗೃತಿ ವಹಿಸಬೇಕಾಗುತ್ತದೆ.

ವೃಷಭ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಸೇಲ್ಸ್, ಮಾರ್ಕೆಟಿಂಗ್, ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ. ಆದರೆ ಕೆಲವೊಂದು ವಿಚಾರದಲ್ಲಿ ಜಾಗೃತಿ ವಹಿಸುವುದು ಮುಖ್ಯವಾಗುತ್ತದೆ.

ಮಿಥುನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಸಂಸಾರದಲ್ಲಿ ಇಂದು ಹೆಚ್ಚಿನ ಸಮಯವನ್ನು ಕೈಗೊಳ್ಳುತ್ತೀರಿ. ಏನೇ ಒತ್ತಡ, ಸಮಸ್ಯೆ ಇದ್ದರೂ ಸಮತೋಲನದಿಂದ ದಿನ ಕಳೆಯುತ್ತೀರಿ.

ಕಟಕರಾಶಿ: ಇಂದು ಉತ್ತಮವಾದ ದಿನವಾಗಿದೆ. ಮಾತಿನಲ್ಲಿ ಜಾಗೃತಿ ಅಗತ್ಯ. ನೀವು ಇಂದು ತಾಳ್ಮೆಯಿಂದ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.

‌ಸಿಂಹ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಸ್ನೇಹ ಸಂಬಂಧದಲ್ಲಿ ತೊಂದರೆ ಉಂಟಾಗ ಬಹುದು. ಹಾಗಾಗಿ ಕೆಲವೊಂದು ವಿಚಾರದಲ್ಲಿ ವೈಯಕ್ತಿಕವಾಗಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಕನ್ಯಾ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ಬಂಧು ಮಿತ್ರರಿಂದ ಹೆಚ್ಚಿನ ಖುಷಿ ನೆಮ್ಮದಿ ಸಿಗುತ್ತದೆ.

ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಬಹುದು. ಮನಸ್ಸಿಗೆ ಹೆಚ್ಚಿನ ಕ್ಲೇಷ ಇಂದು ಉಂಟಾಗಬಹುದು.

Vastu Tips: ಮನೆಯ ಬಣ್ಣ ಆಯ್ಕೆಯಲ್ಲಿ ಎಚ್ಚರ! ಈ 3 ಬಣ್ಣಗಳ ಅತಿಯಾದ ಬಳಕೆ ನಕಾರಾತ್ಮಕ ಶಕ್ತಿ ಹೆಚ್ಚಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ

ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು. ಆದರೆ ಮಾತಿನ ಬಗ್ಗೆ ಹೆಚ್ಚು ಜಾಗರೂಕತೆ ಇರಬೇಕಾಗುತ್ತದೆ.

ಧನು ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಸ್ನೇಹಿತರ ಜೊತೆ ಜಗಳ ಉಂಟಾಗಬಹುದು. ಪ್ರೀತಿ ಪಾತ್ರರ ಸಂಬಂಧ ವಿಚಾರದಲ್ಲಿ ಬೇಸರ ಉಂಟಾಗಬಹುದು.

ಮಕರ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗಬಹುದು. ಆದರೆ ಬೇರೆಯವರು ನಿಮ್ಮ ಮಾತನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ.

ಕುಂಭ ರಾಶಿ: ಇಂದು ಉತ್ತಮವಾದ ದಿನವಾಗಿದೆ.  ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಶತ್ರುನಾಶ ಹಾಗೂ ಧ್ವಂಸವಾಗುತ್ತದೆ.

ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ಕ್ರಿಯಾಶೀಲತೆಯಿಂದ ಇಂದು ಜಯವನ್ನು ಕಾಣುತ್ತೀರಿ‌. ಆದರೆ ಇಂದು ಸಂಯಮದಿಂದ ವರ್ತಿಸಿ.