ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Astro Tips: ಸೋಮವಾರ ಈ ಬಿಳಿ ವಸ್ತುಗಳನ್ನು ದಾನ ಮಾಡಿದರೆ ಶಿವನ ಕೃಪೆ, ಐಶ್ವರ್ಯ ಮತ್ತು ಮನಶಾಂತಿ ದೊರೆಯುತ್ತದೆ!

ಸೋಮವಾರವು ಶಿವನ ಆರಾಧನೆ ಮತ್ತು ದಾನಧರ್ಮಕ್ಕೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಬೆಳ್ಳಿ, ಹಾಲು, ಬಿಳಿ ಬಟ್ಟೆ ಮತ್ತು ಅಕ್ಕಿಯನ್ನು ದಾನ ಮಾಡುವುದರಿಂದ ಶಿವನ ಹಾಗೂ ಚಂದ್ರದೇವನ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಮನಶಾಂತಿ, ಐಶ್ವರ್ಯ ಮತ್ತು ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ.

ಶಿವ ಪೂಜೆ

ಬೆಂಗಳೂರು: ಸೋಮವಾರವು ಶಿವ (Lord Shiva) ಮತ್ತು (ಸೂರ್ಯ ದೇವ) Surya Dev ಅವರ ಆರಾಧನೆಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿ ಶಿವನ ಪೂಜೆ, ಉಪವಾಸ, ದಾನ ಧರ್ಮ ಮತ್ತು ಮನಶಾಂತಿಯಿಗಾಗಿ ಸಮರ್ಪಿಸಲಾಗಿದೆ. ಜೊತೆಗೆ ಸೋಮವಾರವು ಚಂದ್ರ ದೇವ (Chandra Dev) ಅವರೊಂದಿಗೆ ಕೂಡ ಸಂಬಂಧ ಹೊಂದಿರುವುದರಿಂದ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದಕ್ಕೆ ವಿಶೇಷ ಮಹತ್ವ ಇದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಈ ದಿನ ಬಿಳಿ ವಸ್ತುಗಳನ್ನು ದಾನ ಮಾಡಿದರೆ ಲಕ್ಷ್ಮೀ (Goddess Lakshmi) ಸಂತುಷ್ಟಳಾಗಿ ಮನೆಗೆ ಸುಖ, ಶಾಂತಿ ಮತ್ತು ಐಶ್ವರ್ಯವನ್ನು ನೀಡುತ್ತಾಳೆ. ಜಾತಕದಲ್ಲಿ ಚಂದ್ರನ ಸ್ಥಿತಿಯನ್ನು ಬಲಪಡಿಸಲು ಹಾಗೂ ಶಿವನ ಕೃಪೆಯನ್ನು ಪಡೆಯಲು ಸೋಮವಾರದಂದು ಕೆಲವು ವಿಶೇಷ ಬಿಳಿ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಹೇಳಲಾಗಿದೆ.

ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ಸೂಚಿಸಿರುವ ಆ ಬಿಳಿ ವಸ್ತುಗಳು ಯಾವುವು..? ಸೋಮವಾರ ಅವುಗಳನ್ನು ದಾನ ಮಾಡುವುದರಿಂದ ಸಿಗುವ ಫಲ ಏನು..? ಎಂಬ ಮಾಹಿತಿ ಇಲ್ಲಿದೆ.

ಸೋಮವಾರ ದಾನ ಮಾಡಬಹುದಾದ ಶುಭ ವಸ್ತುಗಳು

ಬೆಳ್ಳಿ ದಾನ

ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಮವಾರದಂದು ಬೆಳ್ಳಿಯನ್ನು ದಾನ ಮಾಡುವುದು ಅತ್ಯಂತ ಶುಭಕರ. ಜ್ಯೋತಿಷ್ಯದ ಪ್ರಕಾರ ಬೆಳ್ಳಿ ಚಂದ್ರನಿಗೆ ಸಂಬಂಧಿಸಿದ ಲೋಹವಾಗಿದ್ದು, ಇದನ್ನು ದಾನ ಮಾಡುವುದರಿಂದ ಜಾತಕದಲ್ಲಿರುವ ಚಂದ್ರನ ದುರ್ಬಲತೆ ಕಡಿಮೆಯಾಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಮಾಜದಲ್ಲಿ ಗೌರವ, ಕೀರ್ತಿ ಹಾಗೂ ಧನಲಾಭ ದೊರೆಯುತ್ತದೆ ಎಂಬ ನಂಬಿಕೆ ಇದೆ.

Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ? ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ

ಬಿಳಿ ಬಟ್ಟೆಗಳ ದಾನ

ಸೋಮವಾರ ಬಡವರಿಗೆ, ನಿರ್ಗತಿಕರಿಗೆ ಅಥವಾ ಅಗತ್ಯವಿರುವವರಿಗೆ ಬಿಳಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಶಿವನಿಗೂ ಚಂದ್ರದೇವನಿಗೂ ಪ್ರಿಯವೆಂದು ಹೇಳಲಾಗುತ್ತದೆ. ಈ ದಾನದ ಫಲವಾಗಿ ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಮತ್ತು ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.

ಹಾಲಿನ ದಾನ ಮತ್ತು ಅಭಿಷೇಕ

ಶಿವನಿಗೆ ಹಾಲಿನ ಅಭಿಷೇಕ ಬಹಳ ಪ್ರಿಯ. ಆದ್ದರಿಂದ ಸೋಮವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡುವುದು ಅತ್ಯಂತ ಪುಣ್ಯಕರವೆಂದು ಪರಿಗಣಿಸಲಾಗಿದೆ. ನಂತರ ಆ ಹಾಲನ್ನು ಅಥವಾ ಬೇರೆ ಹಾಲನ್ನು ಬಡ ಮಕ್ಕಳಿಗೆ, ವೃದ್ಧರಿಗೆ ಅಥವಾ ಅಗತ್ಯವಿರುವವರಿಗೆ ದಾನ ಮಾಡಬಹುದು. ಇದರಿಂದ ಶಿವನ ವಿಶೇಷ ಆಶೀರ್ವಾದ ದೊರೆಯುತ್ತದೆ ಹಾಗೂ ಕುಟುಂಬದಲ್ಲಿ ಆರೋಗ್ಯ ಮತ್ತು ಶಾಂತಿ ವೃದ್ಧಿಯಾಗುತ್ತದೆ.

ಅಕ್ಕಿ ಮತ್ತು ಅನ್ನದಾನ

ಸೋಮವಾರದಂದು ಅಕ್ಕಿ, ಅನ್ನ ಅಥವಾ ಹಾಲು-ಅಕ್ಕಿಯಿಂದ ತಯಾರಿಸಿದ ಪಾಯಸವನ್ನು ದಾನ ಮಾಡುವುದೂ ಬಹಳ ಮಂಗಳಕರ. ವಿಶೇಷವಾಗಿ ಬಡವರಿಗೆ ಅನ್ನದಾನ ಮಾಡಿದರೆ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಸತ್ಕೀರ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅನ್ನದಾನವನ್ನು ಎಲ್ಲಾ ದಾನಗಳಲ್ಲಿ ಶ್ರೇಷ್ಠವೆಂದು ಕೂಡ ಪರಿಗಣಿಸಲಾಗುತ್ತದೆ.

Astro Tips: ಸೋಮವಾರ ಶಿವನ ಜೊತೆ ಈ ದೇವರನ್ನು ಪೂಜಿಸಿದರೆ ಸಿಗುತ್ತದೆ ವಿಶೇಷ ಫಲ!

ಇನ್ನಷ್ಟು ಶುಭಕರ ದಾನಗಳು

ಮಕ್ಕಳಿಗೆ ಬಿಳಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು

ಬಿಳಿ ಹೂವುಗಳನ್ನು ಶಿವನಿಗೆ ಅರ್ಪಿಸುವುದು.

ಮೊಸರು, ಸಕ್ಕರೆ, ತೆಂಗಿನಕಾಯಿ ಅಥವಾ ಬಿಳಿ ಧಾನ್ಯಗಳನ್ನು ದಾನ ಮಾಡುವುದು.

ದೇವಸ್ಥಾನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.

ಸೋಮವಾರದ ದಾನದ ಮಹತ್ವ

ಧಾರ್ಮಿಕ ನಂಬಿಕೆಯ ಪ್ರಕಾರ, ಸೋಮವಾರದಂದು ಭಕ್ತಿಭಾವದಿಂದ ಮಾಡಿದ ದಾನ ಮನಸ್ಸಿನ ಅಶಾಂತಿಯನ್ನು ಕಡಿಮೆ ಮಾಡುತ್ತದೆ. ಚಂದ್ರನ ದೋಷಗಳಿಂದ ಉಂಟಾಗುವ ಮಾನಸಿಕ ಒತ್ತಡ, ಭಯ ಮತ್ತು ನಿರಾಶೆ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಶಿವನ ಕೃಪೆಯಿಂದ ಜೀವನದಲ್ಲಿ ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಕುಟುಂಬದ ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.