Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ? ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ
ಶಾಂತಿ ಮಂತ್ರಗಳು ಮನಸ್ಸಿಗೆ ಆಳವಾದ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಶಕ್ತಿಯುತ ಸಾಧನಗಳಾಗಿವೆ ಎಂದು ನಂಬಲಾಗುತ್ತದೆ. ಇವುಗಳ ನಿಯಮಿತ ಜಪವು ಆತಂಕ, ಒತ್ತಡ ಹಾಗೂ ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಲು ಸಹಕಾರಿ. ಮಂತ್ರಗಳ ಧ್ವನಿಕಂಪನಗಳು ಮನಸ್ಸನ್ನು ಶುದ್ಧಗೊಳಿಸಿ, ಸಕಾರಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತವೆ. ದಿನನಿತ್ಯ ಕೆಲವು ನಿಮಿಷಗಳ ಕಾಲ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಸ್ಥಿರತೆ ಹೆಚ್ಚಾಗಿ, ಜೀವನದಲ್ಲಿ ಸಮತೋಲನ ಮತ್ತು ಸಂತೋಷವನ್ನು ಅನುಭವಿಸಬಹುದು.
ಶಾಂತಿ ಮಂತ್ರ -
ಬೆಂಗಳೂರು: ಜ್ಯೋತಿಷ್ಯಶಾಸ್ತ್ರದ ನಂಬಿಕೆಗಳ ಪ್ರಕಾರ, ಮಂತ್ರ ಜಪ ಮತ್ತು ಧ್ಯಾನವು ಮನಸ್ಸಿನ ಸಮತೋಲನವನ್ನು ಸಾಧಿಸಲು ಹಾಗೂ ದೈನಂದಿನ ಒತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿ ವಿಧಾನಗಳಾಗಿವೆ. ಮಂತ್ರಗಳನ್ನು ಪ್ರತಿನಿತ್ಯ ಜಪಿಸುವುದರಿಂದ ಅದರಲ್ಲಿ ಅಡಕವಾಗಿರುವ ಶಕ್ತಿ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಮೇಲೆ ಪ್ರಭಾವ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಕೆಲವರು ಈ ಮಂತ್ರಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳುತ್ತಾರೆ. ವಿಶೇಷವಾಗಿ ಶಾಂತಿ ಮಂತ್ರಗಳು ಮನಸ್ಸಿಗೆ ನೆಮ್ಮದಿ, ಸ್ಥಿರತೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ (Astro Tips) ಸೂಚಿಸಿರುವ ಆ ಶಾಂತಿ ಮಂತ್ರಿಗಳು ಯಾವುವು..? ಮತ್ತು ಅವುಗಳ ಮಹತ್ವ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ..
ಶಾಂತಿ ಮಂತ್ರಗಳ ಮಹತ್ವ
ಮಂತ್ರಗಳಲ್ಲಿ ಅನೇಕ ವಿಧಗಳಿವೆ. ಕೆಲವು ನಿರ್ದಿಷ್ಟ ದೇವತೆಗಳಿಗೆ ಸಮರ್ಪಿತವಾಗಿದ್ದು, ಇತರ ಕೆಲವು ಮಂತ್ರಗಳು ಮನಸ್ಸಿನ ಶಾಂತಿ, ಆತ್ಮಶುದ್ಧಿ ಮತ್ತು ಮೋಕ್ಷವನ್ನು ಸಾಧಿಸಲು ಉದ್ದೇಶಿತವಾಗಿವೆ. ಇಂತಹ ಮಂತ್ರಗಳನ್ನು ಶಾಂತಿ ಮಂತ್ರಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ನಿಯಮಿತವಾಗಿ ಜಪಿಸುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು ಎಂದು ನಂಬಲಾಗುತ್ತದೆ. ಆತಂಕ, ಒತ್ತಡ ಹಾಗೂ ಖಿನ್ನತೆ ಇತ್ಯಾದಿ ಸಮಸ್ಯೆಗಳಿಂದ ದೂರವಿರಲು ಸಹ ಇವು ನೆರವಾಗುತ್ತವೆ.
ಇದಲ್ಲದೆ, ಮದುವೆ, ಗೃಹಪ್ರವೇಶ, ಶಿಶು ಜನನ ಮುಂತಾದ ಶುಭಕಾರ್ಯಗಳಲ್ಲಿ ಶಾಂತಿ ಮಂತ್ರಗಳನ್ನು ಜಪಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ಕುಟುಂಬದವರ ಆಶೀರ್ವಾದ ಮತ್ತು ಉತ್ತಮ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
Astro Tips: ಮನೆಯಿಂದ ಹೊರಡುವಾಗ ಈ ಸಂಕೇತಗಳು ಕಂಡರೆ ಅದೃಷ್ಟ ನಿಮ್ಮದಾಗುತ್ತದೆ!
ಶಾಂತಿ ಮಂತ್ರಗಳು ಹೀಗಿವೆ ನೋಡಿ:
ಓಂ ದ್ಯೌ ಶಾಂತಿ ರಂತರಿಕ್ಷ ಗ್ವಾಂ ಶಾಂತಿಃ
ಪೃಥ್ವೀ ಶಾಂತಿ ರಪಃ ಶಾಂತಿ ರೋಷದ್ಧಾಯಃ ಶಾಂತಿಃ
-ವನಸ್ಪತಾಯಃ ಶಾಂತಿ ವಿಶ್ವೇದ್ ದೇವಾಃ ಶಾಂತಿ ಬ್ರಹ್ಮ ಶಾಂತಿಃ
ಸರ್ವಾಗ್ವಾಂ ಶಾಂತಿಃ ಶಾಂತಿ ರೇವಾ ಶಾಂತಿಃ ಸ ಮಾ ಶಾಂತಿ ರೇಧಿ
ಓಂ ಶಾಂತಿಃ ಶಾಂತಿಃ ಶಾಂತಿಃ ಓಂ
ಶಾಂತಿ ಮಂತ್ರಗಳ ಪ್ರಯೋಜನ:
ಮನಸ್ಸಿನ ಶುದ್ಧೀಕರಣಕ್ಕೆ ಸಹಾಯಕ.
ಶಾಂತ ಮನೋಭಾವವನ್ನು ಉಂಟುಮಾಡುತ್ತದೆ.
ನೋವು ಮತ್ತು ದುಃಖವನ್ನು ಕಡಿಮೆ ಮಾಡುತ್ತದೆ.
ಮಾನಸಿಕ ಗಾಯಗಳಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ.
ಮನಸ್ಸಿನ ದೃಢತೆ ಮತ್ತು ಸ್ಥೈರ್ಯವನ್ನು ಹೆಚ್ಚಿಸುತ್ತದೆ.
ಯಾವಾಗ ಜಪಿಸಬೇಕು..?
ಬೆಳಿಗ್ಗೆ ಬೇಗನೆ (ಸುಮಾರು 6ರಿಂದ 8 ಗಂಟೆಯೊಳಗೆ) ಮಂತ್ರ ಜಪಿಸುವುದು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ದೈನಂದಿನ ಕಾರ್ಯಗಳನ್ನು ಮುಗಿಸಿದ ನಂತರ ಜಪಿಸಲು ಆರಂಭಿಸುವುದು ಉತ್ತಮ. ಮುಂಜಾನೆ ಸಾಧ್ಯವಾಗದಿದ್ದರೆ, ಸಂಜೆ ಅಥವಾ ರಾತ್ರಿ ಮಲಗುವ ಮೊದಲು ಜಪಿಸಬಹುದು. ಮುಖ್ಯವಾಗಿ, ಪ್ರತಿದಿನ ಒಂದೇ ಸಮಯದಲ್ಲಿ ಜಪಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ.
ನಿಯಮಿತವಾಗಿ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಶಾಂತ ಮನಸ್ಸು ಸಕಾರಾತ್ಮಕ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮನಸ್ಸನ್ನು ಸದಾ ಸಮತೋಲನದಲ್ಲಿ ಇಡುವುದು ಅತ್ಯಗತ್ಯ.