ಬೆಂಗಳೂರು, ನ. 24: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ಚತುರ್ಥಿ ತಿಥಿ, ಪೂರ್ವಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತಿ ವಿವರಿಸಿದ್ದು ಹೀಗೆ:
ಮೇಷ ರಾಶಿ: ಪೂರ್ವಾಷಾಢ ನಕ್ಷತ್ರದ ಅಧಿಪತಿ ಶುಕ್ರ ಆಗಿದ್ದಾನೆ. ಇವನ ಪ್ರಭಾವ ಎಲ್ಲ ರಾಶಿ ಮೇಲೆ ಬೀರುವ ಸಾಧ್ಯತೆ ಇದೆ. ಇಂದು ಬಹುತೇಕ ಎಲ್ಲ ರಾಶಿಯವರಿಗೆ ಉತ್ತಮ ಫಲ ಸಿಗುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಾಯವಾಗಲಿದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ಸ್ತ್ರೀಯರ ಜತೆ ಗಂಭೀರವಾಗಿ ವ್ಯವಹಾರ ಮಾಡಬೇಕಾಗುತ್ತದೆ. ಇಲ್ಲದೆ ಹೋದರೆ ಮಾನಹಾನಿ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಪ್ರೀತಿ ಪಾತ್ರರಿಂದ ಬಹಳನೇ ಉತ್ತಮ ಸಹಕಾರ ಪಡೆದುಕೊಳ್ಳುತ್ತೀರಿ.
ಕಟಕ ರಾಶಿ: ಕಟಕ ರಾಶಿಯವರಿಗೂ ಇಂದು ಉತ್ತಮ ದಿನವಾಗಿದ್ದು ಸಾಮಾಜಿಕ ಚಟುವಟಿಕೆ ಹಾಗೂ ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ. ಹಾಗೆಯೇ ನಿಮ್ಮ ಶತ್ರುಗಳನ್ನು ಕೂಡ ಹಿಮ್ಮೆಟ್ಟಿಸಬಹುದು.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳ ಅಧ್ಯಯನ ಕೊಠಡಿ ಹೇಗಿರಬೇಕು ಹೀಗಿರಲಿ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಿದೆ. ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ. ಪ್ರೀತಿ ಪಾತ್ರರಿಂದ ಬೇಕಾದಂತಹ ಪ್ರತಿಕ್ರಿಯೆಗಳು ಕೂಡ ನಿಮಗೆ ಸಿಗುವುದಿಲ್ಲ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಿದೆ. ಆದರೂ ಕೂಡ ಕೋರ್ಟ್, ಕಚೇರಿ ವ್ಯವಹಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ತಲೆನೋವು ಇದ್ದೇ ಇರಲಿದೆ. ತಾಯಿಯ ಆರೋಗ್ಯ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಪತ್ರಿಕೋದ್ಯಮ, ಮಾಸ್ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಹಾಗೂ ಲಾಭದಾಯಕ ದಿನವಾಗಲಿದೆ. ನಿಮ್ಮ ಆತ್ಮವಿಶ್ವಾಸದೊಂದಿಗೆ ಕೆಲಸ ಕಾರ್ಯಗಳನ್ನು ಪರಿಪೂರ್ಣ ಮಾಡಿಕೊಳ್ಳಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ನೆಮ್ಮದಿ ಸಿಗಲಿದೆ. ನಿಮ್ಮ ಕುಟುಂಬದ ಜತೆಗೂ ಖುಷಿಯಾಗಿ ದಿನವನ್ನು ಕಳೆಯುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ನೋವೆಲ್ಲ ಮಾಯವಾಗಲಿದೆ. ಮುಂದಿನ ಕೆಲಸ ಕಾರ್ಯಗಳಿಗೆ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರಗಳಲ್ಲಿ ಯಾವುದೇ ನಿರ್ಧಾರ ಬೇಡ. ನಿಮ್ಮಲ್ಲಿ ಭಾವುಕತೆ ಕೂಡ ಇಂದು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಮುಖ್ಯವಾದ ಮೀಟಿಂಗ್, ಇಮೇಲ್ ಕಳುಹಿಸಲು ಹೋಗಬೇಡಿ.
ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಮನಸ್ಸಿಗೆ ಖುಷಿ ಸಿಗಲಿದೆ. ಅತೀ ಹೆಚ್ಚಿನ ಸಂತಸದ ದಿನ ನಿಮ್ಮದಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕೆಲಸ ಕಾರ್ಯಗಳು ಇಂದು ಮುಖ್ಯವಾಗುತ್ತವೆ. ಹಾಗಾಗಿ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ಹೆಚ್ಚಾಗಿ ಇರುತ್ತವೆ. ಅದರ ಜತೆ ಮನೆಯವರ ಬಗ್ಗೆಯೂ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ.