Vastu Tips: ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳ ಅಧ್ಯಯನ ಕೊಠಡಿ ಹೇಗಿರಬೇಕು ಹೀಗಿರಲಿ
Study Room Vastu Tips: nimmau ಮಕ್ಕಳು ಓದುತ್ತಿಲ್ಲವೆಂದು ಚಿಂತೆ ಮಾಡಬೇಡಿ. ಬದಲಾಗಿ, ಈ ವಾಸ್ತು ಪರಿಹಾರಗಳನ್ನು ಮಾಡಿ. ಈ ವಾಸ್ತು ಟಿಪ್ಸ್‌ಗಳಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಾಸ್ತು ಪ್ರಕಾರ ಮಕ್ಕಳು ಓದುವ ಕೋಣೆ ಹೇಗಿರಬೇಕು..? ಮಕ್ಕಳು ಓದುವಂತೆ ಮಾಡುವುದು ಹೇಗೆ.? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ -
ಬೆಂಗಳೂರು: ಈಗ ಎಲ್ಲಿ ನೋಡಿದರೂ, ಕೇಳಿದರೂ ಈ ಹೆತ್ತವರದು ಒಂದೇ ಗೋಳು ನನ್ನ ಮಕ್ಕಳು ಓದುವುದಿಲ್ಲ, ಬರೆಯುವುದಿಲ್ಲ ಎನ್ನುವುದೇ ಆಗಿದೆ. ಇದಕ್ಕೆ ನಾನಾ ಸರ್ಕಸ್ ಮಾಡುತ್ತಾರೆ. ಹರಕೆಯನ್ನೂ ಹೊರುತ್ತಾರೆ. ಆದ್ರೆ ನಿಮಗೆ ಗೊತ್ತಾ, ನಿಮ್ಮ ಮಕ್ಕಳು ಓದಲು ಕುಳಿತುಕೊಳ್ಳುವ ಜಾಗದಲ್ಲಿ ವಾಸ್ತು ದೋಷ ಇದ್ದರೂ ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳುತ್ತಾರೆ. ಮಕ್ಕಳು ವಿದ್ಯಾಭ್ಯಾಸದತ್ತ ಗಮನ ಹರಿಸದಿರಲು ಮನೆಯಲ್ಲಿರುವ ವಾಸ್ತುವೂ (Vastu) ಕಾರಣವಾಗಿರಬಹುದು.
ಹೀಗಿದ್ದಾಗ ಮಕ್ಕಳು ನಿಜವಾಗಿಯೂ ಓದುವ ಕಡೆಗೆ ಕಮನ ಕೊಡುವುದಿಲ್ಲ. ಪೋಷಕರ ಒತ್ತಾಯದಿಂದ ಬುಕ್ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಓದಿದ್ದು ತಲೆಯೊಳಕ್ಕೆ ಹೋಗುವುದೇ ಇಲ್ಲ. ಮಕ್ಕಳಲ್ಲಿನ ಈ ಸಮಸ್ಯೆಗಳು ಅನೇಕ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.
ಮನೆಯಲ್ಲಿ ವಾಸ್ತು ಇಲ್ಲದಿದ್ದರೆ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು ಮಾತು ಕೇಳುತ್ತಿಲ್ಲ, ಓದಿನ ಕಡೆ ಗಮನ ಹರಿಸುತ್ತಿಲ್ಲ ಎಂದು ಪಾಲಕರು ದೂರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮಗುವಿನ ಓದುವ ಕೋಣೆಯ ದಿಕ್ಕನ್ನು ಪರಿಶೀಲಿಸಿ. ಮಕ್ಕಳ ಭವಿಷ್ಯವನ್ನು ಸುಧಾರಿಸಲು ವಾಸ್ತು ಶಾಸ್ತ್ರವು ಕೆಲವು ಸರಳ ಪರಿಹಾರಗಳನ್ನು ಒದಗಿಸುತ್ತದೆ. ಅವುಗಳನ್ನು ಅನುಸರಿಸಿದರೆ ನಿಮ್ಮ ಮಕ್ಕಳ ಓದಿನಲ್ಲಿ ಅಗ್ರಸ್ಥಾನಕ್ಕೆ ತಲುಪುತ್ತಾರೆ.
ಸೂರ್ಯ ಮುಳುಗಿದ ನಂತರ ಮಾಡುವ ಈ ಕೆಲಸಗಳು ನಿಮ್ಮ ಮನೆಗೆ ದಾರಿದ್ರ್ಯ ತರಲಿವೆ
ಹಾಗಾದ್ರೆ ಬನ್ನಿ ಮಕ್ಕಳು ಓದಲು ಕುಳಿತುಕೊಳ್ಳುವ ರೂಮ್ ಹೇಗಿರಬೇಕು? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಓದುವ ಕೋಣೆಯ ದಿಕ್ಕು ಹೀಗಿರಬೇಕು?
ಓದುವ ಕೋಣೆ ಯ ದಿಕ್ಕು ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಇದರಿಂದ ಓದಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ವಿಷಯದ ಜ್ಞಾನವನ್ನು ಹೆಚ್ಚಿಸುತ್ತದೆ. ಕೋಣೆಯ ಬಾಗಿಲುಗಳು ಸಹ ಹೀಗಿರಬೇಕು. ಇನ್ನು, ಶೌಚಾಲಯದ ಬಳಿ ಓದುವ ಕೋಣೆ ಇರಬಾರದು. ಅಧ್ಯಯನದ ಸಮಯದಲ್ಲಿ ಪುಸ್ತಕಗಳ ಮೇಲೆ ಕನ್ನಡಿಗಳ ಪ್ರತಿಫಲನವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ನಿಮ್ಮ ಮಕ್ಕಳ ಮೇಲೆ ಅಧ್ಯಯನದ ಒತ್ತಡವನ್ನು ಹೆಚ್ಚಿಸುತ್ತದೆ.
ಬಣ್ಣ ಯಾವುದಿರಬೇಕು?
ಮಕ್ಕಳು ಸ್ಟಡಿ ಮಾಡುವ ರೂಂನ ಬಣ್ಣ ವಾಸ್ತು ಪ್ರಕಾರವೇ ಇರಬೇಕು. ಈ ಕೊಠಡಿಯ ಬಣ್ಣ ಯಾವಾಗಲೂ ತಿಳಿ ಬಣ್ಣದಿಂದ ಕೂಡಿರಬೇಕು. ತಿಳಿ ಹಳದಿ, ತಿಳಿ ಗುಲಾಬಿ, ತಿಳಿ ಹಸಿರು ಬಣ್ಣಗಳು ಒಳ್ಳೆಯದು. ಈ ಬಣ್ಣಗಳು ಓದುವ ಕೋಣೆಯಲ್ಲಿದ್ದರೆ ಗುರಿ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಇದರ ಹೊರತಾಗಿ ಮಕ್ಕಳ ಓದುವ ಕೋಣೆಗೆ ಸೂರ್ಯ ಬೆಳಕು ಪ್ರವೇಶಿಸುವಂತೆ ಇರಬೇಕು. ಜೊತೆಗೆ ಸರಸ್ವತಿ ದೇವಿಯ ಫೋಟೊವನ್ನುು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮಕ್ಕಳು ಓದುವಾಗ ಟೇಬಲ್ ಮೇಲೆ ಒಂದು ಲೋಟ ನೀರು ಕೂಡ ಇಟ್ಟಿರಬೇಕು. ಈ ಕೊಠಡಿಯಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು. ಕೊಠಡಿ ಹೆಚ್ಚು ಖಾಲಿ ಮತ್ತು ಶುಚಿಯಾಗಿದ್ದರೆ ಓದಲು ಉತ್ತಮವಾಗಿರುತ್ತದೆ.