ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today November 29th: ಬುಧನ ವಕ್ರ ಸಂಚಾರ: ಈ ನಾಲ್ಕು ರಾಶಿಗಳಿಗೆ ಶುಭಯೋಗ

ನಿತ್ಯ ಭವಿಷ್ಯ ನವೆಂಬರ್‌ 29, 2025: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ನವಮಿ ತಿಥಿ, ಪೂರ್ವಾಭಾದ್ರ ನಕ್ಷತ್ರದ ನವೆಂಬರ್ 29ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ದಿನ ಭವಿಷ್ಯ(ಸಂಗ್ರಹ ಚಿತ್ರ)

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ನವಮಿ ತಿಥಿ, ಪೂರ್ವಾಭಾದ್ರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ (Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ತುಲಾ ರಾಶಿಯಲ್ಲಿ ಇಂದು ಬುಧ ವಕ್ರ ತ್ಯಾಗವನ್ನು ಮಾಡುತ್ತಿದ್ದಾನೆ. ಮೇಷ ರಾಶಿಯವರಿಗೆ ನಿಮ್ಮ ಪಾರ್ಟ್ನರ್ ಶೀಪ್ ವ್ಯವಹಾರದಲ್ಲಿ ಹಾಗೂ ಮಿತೃತ್ವದಲ್ಲಿ ಒಡಕು ಉಂಟಾಗ ಬಹುದು. ಹಾಗೆಯೇ ದಾಂಪತ್ಯದಲ್ಲಿ ತಪ್ಪು ಭಾವನೆ ಮೂಡಬಹುದು. ಮಾತಿನ ಚಕಮಕಿಯಿಂದ ಜಗಳಗಳು ಆಗುವ ಸಾಧ್ಯತೆ ಕೂಡ ಹೆಚ್ಚು ಇರುತ್ತದೆ. ಹಾಗಾಗಿ ಮಾತಿನ ಮೇಲೆ ಹೆಚ್ಚಿನ ನಿಗವನ್ನು ಇರಿಸಬೇಕಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಜಯ ಪ್ರಾಪ್ತಿಯಾಗುತ್ತದೆ.‌ ಸಾಮಾಜಿಕ ಚಟುವಟಿಕೆಯಲ್ಲಿ ಶತ್ರುಗಳನ್ನು ಹಿಮ್ಮೆಟ್ಟಲಿದ್ದೀರಿ‌. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಪ್ರೇಮ, ಪ್ರೀತಿ, ದಾಂಪತ್ಯದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲೂ ಕೂಡ ನೆಮ್ಮದಿಯಿಂದ ವ್ಯವಹಾರ ಮಾಡಲು ಕಷ್ಟಸಾಧ್ಯವಾಗಬಹುದು. ಹಾಗಾಗಿ ಖರ್ಚು ವೆಚ್ಚದ ಬಗ್ಗೆ ಗಮನ ವಹಿಸಿ.‌

ಇದನ್ನು ಓದಿ:Vastu Tips: ವಾಸ್ತು ಶಾಸ್ತ್ರ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದರೆ ಧನ, ಸಂಪತ್ತು ಹಾಳಾಗುತ್ತೆ

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ನೆಮ್ಮದಿ ಪ್ರಾಪ್ತಿ ಯಾಗುತ್ತದೆ. ಸಂಸಾರದಲ್ಲಿ, ಮನೆಯಲ್ಲಿ ಹಾಗೂ ಸ್ನೇಹಿತರ ಜೊತೆ ಉತ್ತಮ ಸೌಹಾರ್ದ ಪ್ರಾಪ್ತಿಯಾಗುತ್ತದೆ. ಕೆಲಸ ಕಾರ್ಯದಲ್ಲೂ ಉತ್ತಮ ಪ್ರತಿಫಲ ಸಿಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಆತ್ಮವಿಶ್ವಾಸ ಕಡಿಮೆ ಯಾಗುತ್ತದೆ. ನಿಮ್ಮ ಮಾತಿನಿಂದಲೇ ತೊಂದರೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಇರುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಮನೆಯಲ್ಲಿ ನೆಮ್ಮದಿ ಹಾಗೂ ಸಂಸಾರದಲ್ಲಿ ಕೂಡ ನೆಮ್ಮದಿ ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ಬಹಳನೇ ಸಂತೋಷ ಸಿಗುವ ದಿನವಾಗಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಮಾತಿನಿಂದಲೇ ಕೆಲಸ ಕೆಡಬಹುದು. ಆದ್ದರಿಂದ ಇಂದು ಹೆಚ್ಚು ಮಾತನ್ನು ಆಡಲೇ ಬಾರದು. ಯಾರ ಬಗ್ಗೆಯೂ ಪ್ರತಿಕ್ರಿಯೆ ನೀಡದೆ ನಿಮ್ಮ ಕೆಲಸ ಕಾರ್ಯದ ಕಡೆ ನಿಗಾ ವಹಿಸಿದರೆ ಉತ್ತಮ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ.‌ ಮುಖ್ಯವಾದ ಯಾವುದೇ ನಿರ್ಧಾಗಳು ಬೇಡ. ಹಾಗಾಗಿ ಯಾವುದೇ ಮೀಟಿಂಗ್ , ಬಿಸೆನೆಸ್ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಇಂದು ಸರಿಯಲ್ಲ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೂ ಅತ್ಯುತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ‌. ಅದೇ ರೀತಿ ಧನಾಗಮನ ಕೂಡ ಆಗಲಿದ್ದು ಗುಂಪು ಕೆಲಸದಲ್ಲಿ ಯಶಸ್ಸು ಜಯ ಪ್ರಾಪ್ತಿಯಾಗುತ್ತದೆ.‌

ಮಕರ ರಾಶಿ: ಮಕರ ರಾಶಿ ಅವರಿಗೆ ಅತೀ ಹೆಚ್ಚಾದ ಆತ್ಮವಿಶ್ವಾಸ ಸಿಗುವಂತಹ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಇಂದು ಯಶಸ್ಸು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬುಧ ನಿಮ್ಮ ದಶಮ ಸ್ಥಾನಕ್ಕೆ ಬಂದಿರುವುದರಿಂದ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ ಸಿಗುತ್ತದೆ.

ಕುಂಭರಾಶಿ: ಕುಂಭರಾಶಿಯವರಿಗೆ ಕ್ಲಿಷ್ಟಕರವಾದ ದಿನವಾಗಿದ್ದು ಯಾವುದೇ ಮುಖ್ಯವಾದ ನಿರ್ಧಾರಗಳನ್ನು ಇಂದು ಮಾಡಬೇಡಿ. ಆದರೂ ಕೂಡ ಭಗವಂತನ ಹಾಗೂ ಹಿರಿಯರ ಆಶೀರ್ವಾದದಿಂದ ಒಳಿತು ಆಗಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಬುಧ ವಕ್ರ ತ್ಯಾಗ ಮಾಡು ವುದರಿಂದ ಮನಸ್ಸಿಗೆ ನೆಮ್ಮದಿ. ನಿಮ್ಮ ಮಾತಿನಿಂದ ಸುಧಾರಣೆ ಕಂಡು ಬರಲಿದ್ದು ಬೇರೆಯವರಿಂದ ಹೆಚ್ಚಿನ ಪ್ರೀತಿ ಅಕ್ಕರೆ ಸಿಗುತ್ತದೆ.