Daily Horoscope: ಶ್ರವಣ ನಕ್ಷತ್ರದ ಅಧಿಪತಿ ಚಂದ್ರನಿಂದ ಈ ರಾಶಿಗೆ ಧನ ಯೋಗ!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ನವಮಿ ತಿಥಿ, ಶ್ರವಣ ನಕ್ಷತ್ರದ ಅಕ್ಟೋಬರ್ 30 ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.
-
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಶ್ರವಣ ನಕ್ಷತ್ರ ಇದ್ದು ಇದರ ಅಧಿಪತಿ ಚಂದ್ರ ಆಗಿದ್ದಾನೆ. ಮೇಷ ರಾಶಿ ಅವ ರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ಭಾವುಕತೆ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಸಣ್ಣ- ಸಣ್ಣ ವಿಚಾರ ಗಳನ್ನು ಕೂಡ ಭಾವುಕತೆಯಿಂದ ತೆಗೆದುಕೊಳ್ಳುವ ಸಾಧ್ಯತೆ ಇದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ತೊಂದರೆ ಇದ್ದರೂ ಹಿರಿಯರು ನಿಮ್ಮನ್ನು ಕ್ಷಮಿಸಬೇಕಾಗುತ್ತದೆ. ಹಾಗಾಗಿ ಗುರು ಹಿರಿಯರ ಜೊತೆ ಅಹಂಕಾರದ ಸ್ವಾಭಾವ ಬಿಟ್ಟು ವಿನಯತೆಯಿಂದ ವರ್ತಿಸಬೇಕಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಸ್ವಲ್ಪ ಕ್ಲೇಷಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಅಷ್ಟೊಂದು ಇರುವುದಿಲ್ಲ. ನಿಮ್ಮ ಪ್ರೀತಿ ಪಾತ್ರರಿಂದ ಬೇಕಾದಂತಹ ಯಾವುದೇ ಪ್ರತಿಕ್ರಿಯೆ ನಿಮಗೆ ಸಿಗುವುದಿಲ್ಲ. ಮನಸ್ಸಿಗೆ ಕಷ್ಟಕರವಾಗಲಿದ್ದು ಧನ್ಯಾಧಿಗಳನ್ನು ಮಾಡಿ ಸಮಯ ಕಳೆಯಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಬಹಳ ಮುಖ್ಯವಾದ ವಿಚಾರದಲ್ಲಿ ಸಂತೋಷ ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದಲೂ ಸಹಕಾರ ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಸಾಮಾಜಿಕ ಚಟುವಟಿಕೆಗಳಲ್ಲಿ ಜಯ ಪ್ರಾಪ್ತಿ ಯಾಗಲಿದೆ. ಹಿಂದೆ ಇದ್ದಂತಹ ತೊಂದರೆಗಳು ಬಗೆಹರಿದು ಖುಷಿಯನ್ನು ಕಾಣುತ್ತೀರಿ. ಉತ್ತಮವಾಗಿ ಇಂದು ದಿನವನ್ನು ಕಳೆಯಲಿದ್ದೀರಿ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನ ವಾಗಿದೆ. ನೀವು ಮಾಡದಂತಹ ಆಪಾದನೆಗೆ ಇಂದು ಗುರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರೀತಿ ಪಾತ್ರರಿಂದ ಬಹಳ ಸಮಾ ಧಾನ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ಮಕ್ಕಳಿಗೆ ಪೋಷಕರ ಅವಶ್ಯಕತೆ ಇಂದು ಜಾಸ್ತಿಯಾಗಿ ಇರುತ್ತದೆ.
ಇದನ್ನು ಓದಿ:Vastu Tips: ಚಪಾತಿ ತಯಾರಿಸುವಾಗ ಲೆಕ್ಕ ಮಾಡಬಾರದು ಯಾಕೆ ಗೊತ್ತೇ?
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಕೋರ್ಟ್ ,ಕಛೇರಿ ವ್ಯವಹಾರದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಅಮ್ಮನ ಆರೋಗ್ಯ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮಾಸ್ ಮೀಡಿಯಾ, ಪತ್ರಿಕೋದ್ಯಮದಲ್ಲಿ ಇದ್ದೀರಿ ಅಂತವರಿಗೆ ಉತ್ತಮ ದಿನವಾಗಿದೆ. ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರು ನಿಮ್ಮ ಸಂಸಾರದಲ್ಲಿ ಇಂದು ಹೆಚ್ಚಿನ ನೆಮ್ಮದಿ ಸಿಗಲಿದೆ. ನೀವು ಅಂದುಕೊಂಡಂತಹ ಕೆಲಸಗಳು ನಿಮ್ಮ ಸಂಸಾರದಲ್ಲಿ ಸಿಗಲಿದ್ದು, ನೆಮ್ಮದಿ ಕಾಣಲಿದ್ದೀರಿ
ಮಕರ ರಾಶಿ: ಮಕರ ರಾಶಿ ಅವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಬಂದಿರುವುದರಿಂದ ಅತೀ ಹೆಚ್ಚಿನ ನೆಮ್ಮದಿ ಸಿಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ತೊಂದರೆ ಪರಿಹಾರವಾಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಮಾಡಲು ಹೋಗಬೇಡಿ. ಯಾವುದೇ ನಿಮ್ಮ ಪರವಾಗಿ ಇಂದು ನಡೆಯುವುದಿಲ್ಲ.
ಮೀನ ರಾಶಿ: ಮೀನ ರಾಶಿ ಅವರಿಗೆ ಅತ್ಯುತ್ತಮ ವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿ ಯಾಗಲಿದ್ದು ಗುಂಪುಗಳಿಂದ ಯಶಸ್ಸು ಸಿಗಲಿದೆ. ಮಿತ್ರರಿಂದ ನೆಮ್ಮದಿ ಇದ್ದು ಧನ ಆಗಮನ ಕೂಡ ಆಗಲಿದೆ.