ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಬುಧವಾರ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ಹೆಚ್ಚು ಸಂತುಷ್ಟನಾಗುತ್ತಾನೆ..!

ಹಿಂದೂಗಳಲ್ಲಿ ವಾರದ ಏಳು ದಿನಗಳೂ ಒಂದೊಂದು ದೇವರಿಗೆ ಮೀಸಲಾಗಿವೆ. ಆಯಾ ದಿನ ಆಯಾ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಹೆಚ್ಚು ಕೃಪೆಗೆ ಪಾತ್ರರಾಗಿ ವಿಶೇಷ ಫಲಗಳನ್ನು ಪಡೆಯಬಹುದು. ನೀವೂ ಲಂಬೋದರ ಗಜಾನನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಬುಧವಾರದಂದು, ಈ ವಸ್ತುಗಳನ್ನು ಅರ್ಪಿಸಿ ಗಣಪತಿಯನ್ನು ಒಲಿಸಿಕೊಳ್ಳಬಹುದು. ಈ ಕೆಲವೊಂದು ಕ್ರಮಗಳೊಂದಿಗೆ ಗಣೇಶನನ್ನು ಆರಾಧಿಸುವುದರಿಂದ ಭಕ್ತರ ಎಲ್ಲಾ ಆಸೆಗಳನ್ನು ಗಣೇಶನು ನೆರವೇರಿಸುತ್ತಾನೆ.

ಗಣೇಶ(ಸಂಗ್ರಹ ಚಿತ್ರ)

ಹಿಂದೂ ಧರ್ಮದಲ್ಲಿ(Hindu Dharma) ವಾರದ ಏಳು ದಿನ ಒಂದೊಂದು ದೇವರ ಪೂಜೆಗೆ ಮೀಸಡಿಲಾಗಿದೆ. ಸೂರ್ಯ, ಶಿವ, ಆಂಜನೇಯ, ರಾಘವೇಂದ್ರ, ಲಕ್ಷ್ಮೀ ದೇವಿ, ಶನಿ ಹೀಗೆ ವಾರದ ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವ ಮೂಲಕ ದೇವರ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ(Astro Tips) ಪ್ರಕಾರ ಪ್ರತಿಯೊಂದು ದಿನದ ಪೂಜೆಗೂ ಒಂದೊಂದು ವಿಶೇಷತೆ ಹಾಗೂ ಪ್ರಾಮುಖ್ಯತೆ ಇದೆ. ಅಂತೆಯೇ, ಬುಧವಾರ ಗಣೇಶ ಸ್ವಾಮಿಯ(Lord Ganesha) ಪೂಜೆಗೆ ಸೂಕ್ತವಾದ ದಿನವಾಗಿದ್ದು, ವಿಘ್ನನಿವಾರಕನಾದ ಗಣೇಶನಿಗೆ ಈ ದಿನವನ್ನು ಅರ್ಪಿಸಲಾಗಿದೆ. ಬುಧವಾರ ಗಣೇಶನನ್ನು ಪೂಜಿಸುವಾಗ "ಓಂ ಗಣೇಶಾಯ ನಮಃ" ಮಂತ್ರವನ್ನು ಪಠಿಸುತ್ತಾ ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಬೇಕು. ಹೀಗೆ ವಿಘ್ನ ನಿವಾರಕನಾಗಿರುವ ಗಣಪನನ್ನು ಪೂಜಿಸುವುದರಿಂದ ಭಕ್ತರ ಧುಃಖ, ನೋವುಗಳು ಪರಿಹಾರಗೊಳ್ಳುತ್ತದೆ. ನೀವೂ ಲಂಬೋದರ ಗಜಾನನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಬುಧವಾರದಂದು, ಈ ವಸ್ತುಗಳನ್ನು ಅರ್ಪಿಸಿ ಗಣಪತಿಯನ್ನು ಒಲಿಸಿಕೊಳ್ಳಬಹುದು. ಈ ಕೆಲವೊಂದು ಕ್ರಮಗಳೊಂದಿಗೆ ಗಣೇಶನನ್ನು ಆರಾಧಿಸುವುದರಿಂದ ಭಕ್ತರ ಎಲ್ಲಾ ಆಸೆಗಳನ್ನು ಗಣೇಶನು ನೆರವೇರಿಸುತ್ತಾನೆ.

ಹಾಗಾದ್ರೆ ಬುಧವಾರ ಅನುಸರಿಸಬೇಕಾದ ಆ ಕ್ರಮಗಳು ಯಾವುವು..? ಯಾವ ವಸ್ತುಗಳನ್ನು ಅರ್ಪಿಸಿದ್ದರೆ ಗಣಪ ಸಂತುಷ್ಟಗೊಳ್ಳುತ್ತಾನೆ ಎಂಬಿತ್ಯಾದಿ ಇಲ್ಲಿದೆ.

ಬೆಲ್ಲ ಮತ್ತು ತುಪ್ಪದ ನೈವೇದ್ಯ

ಬುಧವಾರದಂದು ಗಣಪತಿಗೆ ಬೆಲ್ಲ ಮತ್ತು ಹಸುವಿನ ತುಪ್ಪದಿಂದ ಮಾಡಿದ ನೈವೇದ್ಯವನ್ನು ಅರ್ಪಿಸಿ. ಈ ಕ್ರಮವನ್ನು ಅನುಸರಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರಗೊಳ್ಳುತ್ತದೆ ಎಂದು ನಂಬಲಾಗಿದೆ. ಜೊತೆಗೆ ಬಡತನವು ದೂರ ಆಗಲಿದ್ದು. ಬುಧವಾರದಂದು ಈ ಕೆಲಸಗಳನ್ನು ಮಾಡಿದರೆ ಖಂಡಿತ ಫಲ ಸಿಗುವುದು. ಇದರೊಂದಿಗೆ ಬುಧವಾರದಂದು ಗಣೇಶ ದೇವಸ್ಥಾನಕ್ಕೆ ಹೋಗಿ 21 ಬೆಲ್ಲದ ಅಚ್ಚನ್ನು ಮತ್ತು ಗಣೇಶನಿಗೆ ಪ್ರಿಯವಾದ ದುರ್ವಾವನ್ನು ಅರ್ಪಿಸಬೇಕು. ಇದರಿಂದ ಗಣೇಶನು ಸಂತೋಷಗೊಂಡು ನಿಮ್ಮೆಲ್ಲಾ ಸಮಸ್ಯೆಗಳನ್ನು ಈಡೇರಿಸುವನು.

ಈ ಸುದ್ದಿಯನ್ನು ಓದಿ: Vastu Tips: ಡ್ರೀಮ್ ಕ್ಯಾಚರ್ ಮನೆಯಲ್ಲಿದ್ದರೆ ಹಣಕ್ಕೆ ಕೊರತೆಯೇ ಇರುವುದಿಲ್ಲ!

ಸಿಂಧೂರ

ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ಸಿಂಧೂರವೂ ಒಂದಾಗಿದ್ದು, ಬುಧವಾರ ಇದನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠವೆಂದು ನಂಬಲಾಗಿದೆ. ಸಿಂದೂರವನ್ನು ಶುಭ ಮತ್ತು ಮಂಗಳದ ಸಂಕೇತವೆಂದು ಪರಿಗಣಿಸಲಾಗಿದ್ದು, ಈ ಕ್ರಮವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ಸಿಗುತ್ತದೆ.

ಆನೆಗೆ ಮೇವನ್ನು ನೀಡಿ

ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳಿದ್ದರೆ, ಸಮಸ್ಯೆಗಳಿಂದ ನೀವು ಬೇಸತ್ತು ಹೋಗಿದ್ದರೆ ಬುಧವಾರದಂದು ಆನೆಗೆ ಹಸಿರು ಮೇವನ್ನು ನೀಡಬೇಕು. ಆನೆಯನ್ನು ಗಣೇಶನ ಪ್ರತಿರೂಪವೆಂದು ಪರಿಗಣಿಸಲಾಗುವುದರಿಂದ ಆನೆಯನ್ನು ಪೂಜಿಸಿ ಅದರಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಆನೆಗೆ ಹಸಿರು ಮೇವನ್ನು ನೀಡಿದ ನಂತರ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುವಂತೆ ಆತನನ್ನು ಪ್ರಾರ್ಥಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ನೀವು ನಿಮ್ಮೆಲ್ಲಾ ಸಮಸ್ಯೆಗಳಿಂದ ಹೊರಬರುವಿರಿ.

ಬಾಳೆಹಣ್ಣು

ಗಣೇಶನಿಗೆ ಹಣ್ಣುಗಳಲ್ಲಿ ಬಾಳೆಹಣ್ಣು ಅವನಿಗೆ ಅತ್ಯಂತ ಪ್ರಿಯವಾಗಿದ್ದು, ಗಣಪತಿಗೆ ಜೋಡಿ ಬಾಳೆಹಣ್ಣನ್ನು ಅರ್ಪಿಸಬೇಕು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಇದನ್ನು ಮಾಡುವುದರಿಂದ ಬುಧಗ್ರಹದ ದೋಷ ನಿವಾರಣೆಗೊಳ್ಳಲಿದ್ದು, ಅಪಾರ ಆಶೀರ್ವಾದವನ್ನು ಪಡೆದುಕೊಳ್ಳಬಹುದು.