ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Solar Eclipse 2025: ಮಹಾಲಯ ಅಮಾವಾಸ್ಯೆಯಂದೇ ಸೂರ್ಯ ಗ್ರಹಣ; ತಪ್ಪದೇ ಈ ರೂಲ್ಸ್ ಪಾಲಿಸಿ

ಈ ವರ್ಷದ ಕೊನೆಯ ಹಾಗೂ ಎರಡನೇ ಸೂರ್ಯಗ್ರಹಣವು ಸೆಪ್ಟೆಂಬರ್ 21ರಂದು ಅಂದ್ರೆ ಇಂದು ಸಂಭವಿಸಲಿದೆ. ಜ್ಯೋತಿಷ್ಯದ ಪ್ರಕಾರ ಈ ಸೂರ್ಯಗ್ರಹಣವು 21ರ ರಾತ್ರಿ 10.59ಕ್ಕೆ ಆರಂಭವಾಗಿ ಸೆಪ್ಟೆಂಬರ್ 22ರ ಮುಂಜಾನೆ 3.23ಕ್ಕೆ ಅಂತ್ಯವಾಗಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಇದರ ಸೂತಕ ಅವಧಿಯು ಭಾರತಕ್ಕೆ ಮಾನ್ಯವಾಗುವುದಿಲ್ಲ.

ಇಂದು ವರ್ಷದ ಕೊನೆಯ ಸೂರ್ಯ ಗ್ರಹಣ

-

Profile Sushmitha Jain Sep 21, 2025 7:00 AM

ಬೆಂಗಳೂರು: ಈ ವರ್ಷದ ಕೊನೆಯ ಸೂರ್ಯಗ್ರಹಣವು ಇಂದು (ಸೆ. 21) ಸಂಭವಿಸಲಿದೆ. ಈ ಖಗೋಳ ವಿದ್ಯಮಾನವನ್ನು ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಜ್ಯೋತಿಷಿಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಮತ್ತು ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಆವರಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

ಈ ವರ್ಷದ ಕೊನೆಯ ಹಾಗೂ ಎರಡನೇ ಸೂರ್ಯಗ್ರಹಣವು (Solar Eclipse) ಸೆಪ್ಟೆಂಬರ್ (September) 21ರಂದು ಅಂದ್ರೆ ಇಂದು ಸಂಭವಿಸಲಿದೆ. ಜ್ಯೋತಿಷ್ಯದ (Astrology) ಪ್ರಕಾರ ಈ ಸೂರ್ಯಗ್ರಹಣವು ರಾತ್ರಿ 10.59ಕ್ಕೆ ಆರಂಭವಾಗಿ ಸೆಪ್ಟೆಂಬರ್ 22ರ ಮುಂಜಾನೆ 3.23ಕ್ಕೆ ಅಂತ್ಯವಾಗಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಇದರ ಸೂತಕ ಅವಧಿಯು ಭಾರತಕ್ಕೆ ಮಾನ್ಯವಾಗುವುದಿಲ್ಲ. ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಸಾಗರ ಮತ್ತು ಅಟ್ಲಾಂಟಿಕ್ ಸಾಗರದ ಪ್ರದೇಶಗಳಲ್ಲಿ ಈ ಕೊನೆಯ ಸೂರ್ಯ ಗ್ರಹಣ ಪ್ರಭಾವ ಬೀರಲಿದೆ.

ಈ ಬಾರಿಯ ಸೂರ್ಯ ಗ್ರಹಣ ಬಹಳ ವಿಶೇಷವಾಗಿದ್ದು, ಇಂದೇ ಮಹಾಲಯ ಅಮಾವಾಸ್ಯೆ (Mahalaya Amavasya) ಬರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. ಆದರೆ ಚಂದ್ರಗ್ರಹಣವು ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ.

ಹಿಂದೂ ಧರ್ಮದ ಪ್ರಕಾರ ಸೂರ್ಯಗ್ರಹಣವು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಮಹತ್ವವನ್ನು ಹೊಂದಿದೆ. ಈ ಆಧಾರದ ಮೇಲೆ ಸೂರ್ಯಗ್ರಹಣವು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಅಲ್ಲದೇ ಸೂರ್ಯ ಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದ್ದು, ಸೂರ್ಯ ಗ್ರಹಣದ ಸಮಯದಲ್ಲಿ ದೇವರ ಮಂತ್ರಗಳನ್ನು, ದೇವರ ನಾಮವನ್ನು ಪಠಿಸಬೇಕು. 

ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಅಲ್ಲದೆ ಗ್ರಹಣದ ದುಷ್ಪರಿಣಾಮಗಳನ್ನು ತಡೆಗಟ್ಟಲು ದರ್ಭೆ ಹುಲ್ಲು ಅಥವಾ ತುಳಸಿ ಎಲೆಗಳನ್ನು ಆಹಾರಗಳಲ್ಲಿ ಮತ್ತು ನೀರಿನಲ್ಲಿ ಹಾಕಲಾಗುತ್ತದೆ. ಗ್ರಹಣದ ಸಮಯದಲ್ಲಿ ಅನೇಕರು ನೀರನ್ನು ಕೂಡ ಕುಡಿಯುವುದಿಲ್ಲ. 

ಇವುಗಳನ್ನು ದಾನ ಮಾಡಿ

ಸೂರ್ಯ ಗ್ರಹಣದಂದು ಗೋಧಿ, ಕೆಂಪು ಬಟ್ಟೆ, ಕೆಂಪು ಹಣ್ಣುಗಳು, ಕೆಂಪು ಹೂವುಗಳನ್ನು ದಾನ ಮಾಡಿ. ಇವುಗಳು ಸೂರ್ಯನಿಗೆ ಸಂಬಂಧಿಸಿದ ವಸ್ತುಗಳಾಗಿದ್ದು, ಗ್ರಹಣ ಮುಗಿದ ನಂತರವೇ ಅಡುಗೆ ಅಥವಾ ಆಹಾರ ಸೇವಿಸಬೇಕು. ಆಹಾರಕ್ಕೆ ಅದರಲ್ಲಿ ತುಳಸಿ ಎಲೆಗಳನ್ನು ಹಾಕಿ. ಗ್ರಹಣದ ಸಮಯದಲ್ಲಿ, ಯಾವುದೇ ಆಹಾರವನ್ನು ಸೇವಿಸದಿರುವುದು ಉತ್ತಮ. ಇನ್ನು ಸೂರ್ಯಗ್ರಹಣ ಮುಗಿದ ತಕ್ಷಣ, ಗಂಗಾಜಲದಿಂದ ದೇವರ ಮನೆಯನ್ನು ಒಳಗೊಂಡತೆ ಇಡೀ ಮನೆಯನ್ನು ಸ್ವಚ್ಛಗೊಳಿಸಿ. 

ಗರ್ಭಿಣಿಯರು ಸೂರ್ಯಗ್ರಹಣದ ಸಮಯದಲ್ಲಿ ಮನೆಯೊಳಗೆ ಇರಬೇಕು. ಏಕೆಂದರೆ ಈ ಸಮಯದಲ್ಲಿ ಹೊರಗೆ ಹೋಗುವುದು ತಾಯಿ ಮತ್ತು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ನಂಬಿಕೆಗಳ ಪ್ರಕಾರ, ಗ್ರಹಣದ ನೆರಳು ಕೂಡ ಹುಟ್ಟುವ ಮಗುವಿಗೆ ಸ್ಪರ್ಶಿಸದಂತೆ ತಡೆಯಬೇಕು. ಗರ್ಭಿಣಿಯರು ಸೂರ್ಯಗ್ರಹಣವನ್ನು ನೇರವಾಗಿ ನೋಡಬಾರದು. ಇದನ್ನು ನೋಡುವುದರಿಂದ ಅವರ ಕಣ್ಣು ಮತ್ತು  ಆರೋಗ್ಯಕ್ಕೆ ಹಾನಿಯಾಗುತ್ತದೆ.