IND vs PAK: ಇಂದು 'ಸೂಪರ್ ಫೋರ್ ಸಂಡೇ'; ಬದ್ಧ ಎದುರಾಳಿ ಭಾರತ-ಪಾಕ್ ಮತ್ತೆ ಕಣಕ್ಕೆ
ಒಮಾನ್ ವಿರುದ್ಧದ ಪಂದ್ಯದಲ್ಲಿ ಭಾರತ ಸಣ್ಣ ಅಂತರದ ಗೆಲುವು ಸಾಧಿಸಿತ್ತು. ಅಂದಹಾಗೆ ಇದು ಭಾರತ-ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯದ ಭವಿಷ್ಯವೂ ಅಲ್ಲ, ಮೇಲುಗೈ ಮಾನದಂಡವೂ ಅಲ್ಲ. ಭಾರತ-ಪಾಕ್ ಪಂದ್ಯವೆಂದರೆ ಅದು 'ಡಿಫರೆಂಟ್ ಬಾಲ್ ಗೇಮ್'. ಇಲ್ಲಿನ ರೋಮಾಂಚನಕ್ಕೆ ಕೊನೆ ಇಲ್ಲ.

-

ದುಬೈ: ಏಷ್ಯಾ ಕಪ್(Asia Cup 2025) ಕ್ರಿಕೆಟ್‌ನಲ್ಲಿ ಸಾಂಪ್ರಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ(IND vs PAK) ನಡುವಿನ ದ್ವಿತೀಯ ಸುತ್ತನ ಕಾದಾಟಕ್ಕೆ ಅಖಾಡ ಸಜ್ಜಾಗಿದೆ. ಇಂದು ದುಬೈಯಲ್ಲಿ ಈ ಮುಖಾಮುಖಿ ನಡೆಯಲಿದ್ದು, ಕ್ರಿಕೆಟ್ ಪ್ರೇಮಗಳ ಚುಟುಕು ಕ್ರಿಕೆಟ್‌ನ ಭಾರೀ ರೋಮಾಂಚನವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಉಭಯ ತಂಡಗಳು ಕಳೆದ ಭಾನುವಾರವೂ ಎದುರಾಗಿದ್ದವು. ಅದು 'ಎ' ವಿಭಾಗದ ಲೀಗ್ ಪಂಯವಾಗಿತ್ತು. 128 ರನ್ ಗುರಿ ಪಡೆದ ಸೂರ್ಯಕುಮಾರ್ ಯಾದವ್ ಬಳಗ 7 ವಕೆಟ್ ಗೆಲುವು ಸಾಧಿಸಿತ್ತು. ಇಂದು ನಡೆಯುವುದು ಸೂಪರ್ ಫೋರ್ ಮುಖಾಮುಖಿ. ಭಾರತ ಮೊದಲ ಪಂಯವನ್ನು ಗೆದ್ದ ಉತ್ಸಾಹದಲ್ಲಿದ್ದರೆ, ಪಾಕಿಸ್ತಾನ ಸೇಡಿಗಾಗಿ ಹಪಹಪಿಸುತ್ತಿದೆ.
ಒಮಾನ್ ವಿರುದ್ಧದ ಪಂದ್ಯದಲ್ಲಿ ಭಾರತ ಸಣ್ಣ ಅಂತರದ ಗೆಲುವು ಸಾಧಿಸಿತ್ತು. ಅಂದಹಾಗೆ ಇದು ಭಾರತ-ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯದ ಭವಿಷ್ಯವೂ ಅಲ್ಲ, ಮೇಲುಗೈ ಮಾನದಂಡವೂ ಅಲ್ಲ. ಭಾರತ-ಪಾಕ್ ಪಂದ್ಯವೆಂದರೆ ಅದು 'ಡಿಫರೆಂಟ್ ಬಾಲ್ ಗೇಮ್'. ಇಲ್ಲಿನ ರೋಮಾಂಚನಕ್ಕೆ ಕೊನೆ ಇಲ್ಲ.
ಒಮಾನ್ ವಿರುದ್ಧದ ಔಪಚಾರಿಕ ಪಂದ್ಯಕ್ಕೆ ವಿಶ್ರಾಂತಿ ನೀಡಿದ್ದ ಜಸ್‌ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಮತ್ತೆ ತಂಡಕ್ಕೆ ವಾಪಸ್ ಆಗಲಿದ್ದಾರೆ. ಹೀಗಾಗಿ ಹರ್ಷಿತ್ ರಾಣ ಮತ್ತು ಅರ್ಶ್‌ದೀಪ್ ಸಿಂಗ್ ಜಾಗ ಬಿಡಬೇಕಿದೆ. ಒಮಾನ್ ಎದುರಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಫೀಲ್ಡಿಂಗ್ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದರು. ಹೀಗಾಗಿ ಅಕ್ಷರ್ ಪಾಕ್ ವಿರುದ್ಧ ಪಂದ್ಯ ಆಡುವ ಬಗ್ಗೆ ಅನುಮಾನವಿದೆ. ಒಂದೊಮ್ಮೆ ಅಕ್ಷರ್ ಹೊರಗುಳಿದರೆ ಹೆಚ್ಚುವರಿ ಬ್ಯಾಟಿಂಗ್ ನಿಟ್ಟಿನಲ್ಲಿ ರಿಂಕು ಸಿಂಗ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಬಹುದು.
ಇದನ್ನೂ ಓದಿ Asia Cup 2025: ಪಾಕ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ