ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಪೂಜೆ ವೇಳೆ ಗಂಟೆ ಬಾರಿಸುವುದರಿಂದ ಏನು ಪ್ರಯೋಜನ?

ಹಿಂದೂ ಸಂಪ್ರದಾಯದಲ್ಲಿ ಪೂಜೆ ವೇಳೆ ಗಂಟೆ ಬಾರಿಸುವ ಪದ್ಧತಿ ಇದೆ. ಇದು ಕೇವಲ ಒಂದು ಆಚರಣೆ ಮಾತ್ರವಲ್ಲ ಹಲವು ಕಾರಣಗಳನ್ನು ಒಳಗೊಂಡಿದೆ. ಈ ಪದ್ಧತಿಯನ್ನು ಕೇವಲ ದೇವಾಲಯದಲ್ಲಿ ಮಾತ್ರವಲ್ಲ ಮನೆಯಲ್ಲೂ ಆಚರಿಸಬೇಕು. ಇದರಿಂದ ಮನೆಗೆ ಸಾಕಷ್ಟು ಪ್ರಯೋಜನಗಳಿವೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಪೂಜೆ ವೇಳೆ ಗಂಟೆ ಏಕೆ ಬಾರಿಸಬೇಕು?

-

ಬೆಂಗಳೂರು: ಸಾಮಾನ್ಯವಾಗಿ ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವ ಆಚರಣೆ ಇದೆ. ಇದನ್ನು ಕೇವಲ ದೇವಾಲಯ ಮಾತ್ರವಲ್ಲ ಮನೆಯಲ್ಲೂ(Vastu for home) ಮಾಡಬೇಕು. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ (vastu shastra). ಹೆಚ್ಚಿನವರು ಪೂಜೆಯ ಸಮಯದಲ್ಲಿ ಗಂಟೆ ಬಾರಿಸಿರಬಹುದು. ಆದರೆ ಇದರ ಹಿಂದಿನ ಕಾರಣ ತಿಳಿದಿದೆಯೇ? ಇದರ ಬಗ್ಗೆ ವಾಸ್ತು (Vastu tips) ಶಾಸ್ತ್ರ ಹೇಳುವುದೇನು ಎಂಬುದರ ಕುರಿತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಹೇಳುವುದು ಹೀಗೆ.

ಹಿಂದೂ ಸಂಪ್ರದಾಯದಲ್ಲಿ ಪೂಜಾ ವೇಳೆ ಗಂಟೆ ಬಾರಿಸುವುದು ಅನಾದಿ ಕಾಲದಿಂದಲೂ ನಡೆದು ಬಂದಿರುವ ಒಂದು ಆಚರಣೆ. ಮನೆ, ದೇವಾಲಯಗಳಲ್ಲಿ ಪ್ರತಿ ಪೂಜೆಯು ಗಂಟೆಯ ಶಬ್ದದೊಂದಿಗೆ ಪ್ರಾರಂಭವಾಗುತ್ತದೆ. ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ ಇದರೊಂದಿಗೆ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಅಂಶಗಳು ಒಳಗೊಂಡಿವೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಪೂಜೆಯ ವೇಳೆ ಅಂದರೆ ಬೆಳಗ್ಗೆ, ಸಂಜೆ ಪ್ರತಿನಿತ್ಯ ಗಂಟೆ ಬಾರಿಸುವುದರಿಂದ ಉತ್ಪತ್ತಿಯಾಗುವ ಶಬ್ದವು ಪರಿಸರಕ್ಕೆ ಶಾಂತಿ ಮತ್ತು ಶಕ್ತಿಯನ್ನು ತರುತ್ತದೆ. ಇದು ಮನೆಯಾದ್ಯಂತ ಪ್ರತಿಧ್ವನಿಸುವ ಧ್ವನಿ ಕಂಪನಗಳನ್ನು ಸೃಷ್ಟಿಸುತ್ತದೆ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಶಾಂತ ಮತ್ತು ಸಕಾರಾತ್ಮಕತೆ ಉಳಿಯುತ್ತದೆ.

ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದರಿಂದ ಮನಸ್ಸಿನ ಸ್ಥಿರತೆಗೆ ಸಹಾಯ ಮಾಡುತ್ತದೆ. ಏಕಾಗ್ರತೆಯನ್ನು ವೃದ್ಧಿಸಲೂ ಇದು ಸಹಕಾರಿ. ಗಂಟೆಯ ಕಂಪನಗಳು ಮೆದುಳನ್ನು ಸಕ್ರಿಯಗೊಳಿಸುತ್ತವೆ. ಇದರಿಂದ ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಶ್ರದ್ಧೆ ಮತ್ತು ಭಕ್ತಿಯನ್ನು ಹೊಂದಬಹುದು. ಅದಕ್ಕಾಗಿಯೇ ಪೂಜೆಯ ಆರಂಭ ಮತ್ತು ಕೊನೆಯಲ್ಲಿ ಗಂಟೆಗಳನ್ನು ಬಾರಿಸಲಾಗುತ್ತದೆ.

ನಿರಂತರ ಉದ್ವಿಗ್ನತೆ, ವಿವಾದಗಳು ಅಥವಾ ನಕಾರಾತ್ಮಕ ಭಾವನೆಗಳಿಂದ ಮನೆ ಪ್ರಭಾವಿತವಾಗಿದ್ದರೆ ನಿಯಮಿತವಾಗಿ ಗಂಟೆಯನ್ನು ಬಾರಿಸುವುದು ಮನೆಯ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಸಂಘರ್ಷ ಮತ್ತು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಮನೆಯಲ್ಲಿ ಶಾಂತಿ ಸ್ಥಾಪಿಸಲು ಉತ್ತಮ ಪರಿಹಾರವಾಗಿದೆ.

ಇದನ್ನೂ ಓದಿ: Vastu tips: ಗಡಿಯಾರದಿಂದ ಬದಲಾಗುವುದು ನಿಮ್ಮ ಭವಿಷ್ಯ

ಯಾವ ಗಂಟೆ ಒಳ್ಳೆಯದು ?

ಹಿತ್ತಾಳೆ ಅಥವಾ ಕಂಚಿನಿಂದ ತಯಾರಿಸಿದ ಗಂಟೆಗಳನ್ನು ಮನೆ, ದೇವಾಲಯದಲ್ಲಿ ಪೂಜೆಯ ವೇಳೆ ಬಾರಿಸಲು ಸೂಕ್ತ. ಇದು ಉತ್ಪಾದಿಸುವ ಶಬ್ದವು ಸಕಾರಾತ್ಮಕ ಕಂಪನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹರಡುತ್ತದೆ. ಗಂಟೆಯ ಸದ್ದು ಕೇವಲ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಮಾತ್ರ ನೀಡುವುದಿಲ್ಲ. ಇದು ದೇವರಿಗೆ ಆಹ್ವಾನವನ್ನೂ ಕೊಡುತ್ತದೆ. ಇದರಿಂದ ನಮ್ಮ ಪ್ರಾರ್ಥನೆಗಳು ದೇವರ ಗಮನವನ್ನು ಸೆಳೆಯುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.