Vastu Tips: ಹಣಕಾಸಿನ ತೊಂದರೆಯನ್ನು ದೂರ ಮಾಡುತ್ತದೆ ನವಿಲು
ಹಣವಿದ್ದರೆ ಮಾತ್ರ ಜೀವನ ಎನ್ನುವಂತ ಕಾಲವಿದು. ಹೀಗಾಗಿಯೇ ಬಹುತೇಕ ಎಲ್ಲರೂ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯನ್ನು ಸದಾ ಮಾಡುತ್ತಿರುತ್ತಾರೆ. ಹಣಕಾಸಿನ ತೊಂದರೆಗಳು ಎದುರಾದರೆ ಬದುಕೇ ಬೇಡ ಎನ್ನುವಷ್ಟು ನಿರಾಶರಾಗುತ್ತಾರೆ. ಇದಕ್ಕಾಗಿಯೇ ಹಣ ಮಾಡುವುದು ಹೇಗೆ, ಇರುವ ಹಣವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವ ಮಾರ್ಗದರ್ಶನಗಳನ್ನು ಬಲ್ಲವರಿಂದ ಕೇಳುತ್ತಿರುತ್ತಾರೆ.


ಈಗಿನ ಕಾಲದಲ್ಲಿ ಎಲ್ಲರೂ ಹಣದ ಹಿಂದೆ ಓಡುತ್ತಾರೆ. ಆದರೆ ಎಷ್ಟು ಜನರಿಗೆ ಇದು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಬದುಕಲು ಮಾತ್ರ ಹಣ ಇಂದು ಅತ್ಯವಶ್ಯಕ ಸಂಪತ್ತು ಎನ್ನುವಂತಾಗಿದೆ. ಜೀವನವನ್ನು ಆರಾಮದಾಯಕವಾಗಿ ಮತ್ತು ಹೆಚ್ಚು ಸುಗಮವಾಗಿ ಸಾಗಿಸಬೇಕಾದರೆ ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಹಣ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಹಣಕಾಸಿನ ತೊಂದರೆಯಂತೂ ಆಗುತ್ತದೆ. ಆದರೆ ಇದಕ್ಕೆ ಪರಿಹಾರವೂ ಇದೆ. ಬದುಕಿನಲ್ಲಿ ಹಣದ ಸಮಸ್ಯೆ ಬಾರದೇ ಇರಲು ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಹಿಂದೂ ಸಂಸ್ಕೃತಿಯ ಪ್ರಕಾರ ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗಿದೆ. ಸರಿಯಾದ ವಾಸ್ತು ಸಲಹೆಗಳೊಂದಿಗೆ ಕುಬೇರನನ್ನು ಸೆಳೆದರೆ ಜೀವನದಲ್ಲಿ ಖಂಡಿತಾ ಹಣದ ಸಮಸ್ಯೆ ಬರಲಾರದು. ಇದರಿಂದ ಹೇರಳವಾಗಿ ಸಂಪತ್ತನ್ನು ಆಕರ್ಷಿಸಬಹುದು. ಕುಬೇರನು ಸಂತೋಷವಾಗಿದ್ದರೆ ಎಂದಿಗೂ ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು. ಬದುಕಿನಲ್ಲಿ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿದೆ ಕೆಲವೊಂದು ಸರಳ ವಾಸ್ತು ಪರಿಹಾರ.

ಬೆಳ್ಳಿಯ ನವಿಲಿನಿಂದ ಏನು ಪ್ರಯೋಜನ ?
ನವಿಲನ್ನು ಅತ್ಯಂತ ಸುಂದರ ಪಕ್ಷಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ನವಿಲಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇದನ್ನು ಲಕ್ಷ್ಮಿ ಮತ್ತು ಸರಸ್ವತಿ ದೇವರೊಂದಿಗೆ ಪೂಜಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲಿನ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ನೃತ್ಯ ಮಾಡುವ ಭಂಗಿಯಲ್ಲಿರುವ ಬೆಳ್ಳಿ ನವಿಲನ್ನು ಇರಿಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಅಲ್ಲದೇ ಇದು ನಮ್ಮ ಚೇತನವನ್ನು ಜಾಗೃತಗೊಳಿಸುತ್ತದೆ.
ಬೆಳ್ಳಿ ನವಿಲಿನ ವಿಗ್ರಹ ಮನೆಯಲ್ಲಿದ್ದರೆ ವಾಸ್ತು ದೋಷಗಳನ್ನು ಕೂಡ ನಿವಾರಿಸಬಹುದು. ವೈವಾಹಿಕ ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಇದು ದೂರ ಮಾಡುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ತುಂಬುತ್ತದೆ. ಎಲ್ಲಾ ನಕಾರಾತ್ಮಕ ಶಕ್ತಿಯೂ ನಿವಾರಣೆಯಾಗುತ್ತದೆ.
ಇದನ್ನೂ ಓದಿ: Vastu Tips: ಸಹಿಯ ಕೆಳಗೆ ನೀವು ಹಾಕುವ ಗೆರೆ ಸರಿಯಾಗಿದೆಯೇ ?
ಎಲ್ಲಿ ಇಡಬೇಕು?
ವಾಸ್ತು ಪ್ರಕಾರ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳಿ ನವಿಲನ್ನು ತಮ್ಮ ಕಚೇರಿ ಅಥವಾ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಎಂದಿಗೂ ಹಣದ ಕೊರತೆಯಾಗದು.
ಬೆಳ್ಳಿ ನವಿಲನ್ನು ಇಡುವುದರ ಜೊತೆಗೆ ನಗದು ಲಾಕರ್ ಅನ್ನು ಮನೆಯ ದಕ್ಷಿಣ ಅಥವಾ ನೈಋತ್ಯ ಗೋಡೆಯಲ್ಲಿ ಇರಿಸಿ. ಅದು ಉತ್ತರ ದಿಕ್ಕಿನತ್ತ ತೆರೆಯುವಂತಿರಬೇಕು. ಉತ್ತರ ದಿಕ್ಕನ್ನು ಕುಬೇರ ದೇವನ ದಿಕ್ಕು ಎಂದು ಪರಿಗಣಿಸಲಾಗಿದೆ. ನಗದು ಲಾಕರ್ ಅನ್ನು ಉತ್ತರದಲ್ಲಿ ತೆರೆಯುವುದರಿಂದ ಕುಬೇರ ದೇವರು ಅದನ್ನು ಖಾಲಿ ಮಾಡಲು ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.