ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ಉತ್ತರಭಾದ್ರಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ನಿಮಗೆ ಅದೃಷ್ಟದ ಬೆಂಬಲ ಸಿಗಲಿದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ. ಇಂದು ಗುರುಬಲದ ಯೋಗವು ನಿಮಗಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕುಟುಂಬದ ಜೊತೆ ಸಂತೋಷದ ಕ್ಷಣವನ್ನು ಕಾಣುತ್ತೀರಿ. ಆದರೆ ಇಂದು ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ಮಾತಿನ ಮೂಲಕ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ. ಅದೇ ರೀತಿ ಸಂಬಂಧ ಹಾಗೂ ವ್ಯವಹಾರದಲ್ಲಿ ಯಶಸ್ಸು ಕಾಣುತ್ತೀರಿ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಆದಾಯದಲ್ಲಿ ಲಾಭದಾಯಕವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಆರ್ಥಿಕ ವ್ಯವಹಾರದಲ್ಲಿ ಯಶಸ್ಸಿನ ಸುರಿಮಳೆ ನಿಮ್ಮದಾಗುತ್ತದೆ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಪ್ರೀತಿ ಹಾಗೂ ಮಕ್ಕಳ ವಿಚಾರದಲ್ಲಿ ಖುಷಿಯ ದಿನ ನಿಮ್ಮದಾಗುತ್ತದೆ. ಆದರೆ ಹೂಡಿಕೆಯಲ್ಲಿ ಎಚ್ಚರ ವಹಿಸಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮನೆ, ವಾಹನ ಹಾಗೂ ಆಸ್ತಿ ಖರೀದಿ ವಿಚಾರದಲ್ಲಿ ಲಾಭವಾಗುತ್ತದೆ. ಆದರೆ ಇಂದು ತಾಯಿಯ ಆರೋಗ್ಯದ ಕಡೆ ಗಮನ ವಹಿಸುವುದು ಅಗತ್ಯವಾಗಿರುತ್ತದೆ.
Vastu Tips: ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಅನುಕೂಲಕರವಾದ ದಿನವಾಗಿದೆ. ಕುಟುಂಬದ ಜವಾಬ್ದಾರಿಯನ್ನು ಇಂದು ನೀವು ಯಶಸ್ವಿಯಾಗಿ ನಿಭಾಯಿಸಬೇಕಾಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಹಣಕಾಸು ಹಾಗೂ ಕುಟುಂಬ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಇಂದು ಖರ್ಚನ್ನು ನಿಭಾಯಿಸುವುದು ಉತ್ತಮ
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಆರ್ಥಿಕ ಪ್ರಗತಿ ಸುಧಾರಿಸುವ ದಿನವಾಗಿದೆ. ಆತ್ಮವಿಶ್ವಾಸದಿಂದ ಇಂದು ನಿರ್ಧಾರ ಕೈಗೊಂಡರೆ ಉತ್ತಮ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಆರ್ಥಿಕವಾಗಿ ಲಾಭ ಕಂಡರೂ ಆರೋಗ್ಯದ ಕಡೆ ಗಮನ ವಹಿಸಬೇಕಾಗುತ್ತದೆ.
ಕುಂಭ ರಾಶಿ: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಸೃಜನಶೀಲ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆಧ್ಯಾತ್ಮಿಕವಾಗಿ ಇಂದು ಆಸಕ್ತಿ ಹೆಚ್ಚಬಹುದು.