ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vastu Tips: ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?

ಫೆಂಗ್‌ಶೂಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಸಾಕುಪ್ರಾಣಿಗಳ ವಾಸಸ್ಥಳದ ದಿಕ್ಕು ಅವುಗಳ ಆರೋಗ್ಯ ಮತ್ತು ಚೈತನ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ನಾಯಿ, ಹಕ್ಕಿ, ಮೀನು ಹಾಗೂ ಹಸುಗಳಿಗೆ ಸೂಕ್ತ ದಿಕ್ಕಿನಲ್ಲಿ ಗೂಡು ಅಥವಾ ವಾಸಸ್ಥಳವನ್ನು ವ್ಯವಸ್ಥೆ ಮಾಡಿದರೆ ಮನೆಯಲ್ಲೂ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

ಸಾಕುಪ್ರಾಣಿಗಳಿಗೆ ಈ ದಿಕ್ಕುಗಳು ಶುಭ..!

ವಾಸ್ತು ಶಾಸ್ತ್ರ -

Profile
Sushmitha Jain Jul 14, 2026 8:00 AM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು(Pets) ಮನೆಯ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ಆರೋಗ್ಯ, ಆಹಾರ ಮತ್ತು ಆರೈಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಜೊತೆಗೆ, ಅವು ವಾಸಿಸುವ ಸ್ಥಳದ ದಿಕ್ಕು ಮತ್ತು ಪರಿಸರವೂ ಅವುಗಳ ನೆಮ್ಮದಿ ಹಾಗೂ ಚೈತನ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಫೆಂಗ್‌ಶೂಯಿ ಮತ್ತು ವಾಸ್ತು ಶಾಸ್ತ್ರದಲ್ಲಿ(Vastu Shastra) ಉಲ್ಲೇಖಿಸಲಾಗಿದೆ. ವಾಸ್ತು ತತ್ವಗಳ ಪ್ರಕಾರ, ಸಾಕುಪ್ರಾಣಿಗಳ ಗೂಡು ಅಥವಾ ವಾಸ ಸ್ಥಳವನ್ನು ಸರಿಯಾದ ದಿಕ್ಕಿನಲ್ಲಿ ವ್ಯವಸ್ಥೆ ಮಾಡಿದರೆ ಅವು ಆರೋಗ್ಯವಾಗಿರುವುದರ ಜೊತೆಗೆ ಮನೆಯಲ್ಲೂ ಸಕಾರಾತ್ಮಕ ಶಕ್ತಿ, ನೆಮ್ಮದಿ ಮತ್ತು ಶುಭ ವಾತಾವರಣ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ನಾಯಿ, ಹಕ್ಕಿ, ಮೀನು ಹಾಗೂ ಹಸುಗಳಂತಹ ಸಾಕುಪ್ರಾಣಿಗಳಿಗೆ ವಿಭಿನ್ನ ದಿಕ್ಕುಗಳನ್ನು ಶುಭಕರವೆಂದು ಪರಿಗಣಿಸಲಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಯಾವ ಪ್ರಾಣಿಗೆ ಯಾವ ದಿಕ್ಕು ಸೂಕ್ತ ಮತ್ತು ಅದರ ಹಿಂದಿರುವ ವಾಸ್ತು ನಂಬಿಕೆಗಳೇನು ಎಂಬುದನ್ನು ತಿಳಿಯೋಣ.

ನಾಯಿಯ ಹಾಸಿಗೆ ಯಾವ ದಿಕ್ಕಿನಲ್ಲಿರಬೇಕು?

ಫೆಂಗ್‌ಶೂಯಿ ಪ್ರಕಾರ ನಾಯಿಯ ಹಾಸಿಗೆ ಅಥವಾ ಗೂಡನ್ನು ಉತ್ತರ, ಪೂರ್ವ ಅಥವಾ ವಾಯವ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ಈ ದಿಕ್ಕಿನಲ್ಲಿ ನಾಯಿಗಳು ನೆಮ್ಮದಿಯಿಂದ ಇದ್ದು ಆರೋಗ್ಯವಾಗಿರುತ್ತವೆ ಎಂದು ನಂಬಲಾಗಿದೆ. ಆಗಾಗ ಸ್ಥಳ ಬದಲಾಯಿಸುವುದನ್ನು ತಪ್ಪಿಸುವುದು ಉತ್ತಮ. ಕಪ್ಪು ಬಣ್ಣದ ನಾಯಿಯನ್ನು ಸಾಕುವುದು ರಾಹು, ಕೇತು ಹಾಗೂ ಶನಿಯ ಅಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆಯೂ ಇದೆ.

ಹಕ್ಕಿಗಳ ಪಂಜರಕ್ಕೆ ಸೂಕ್ತ ದಿಕ್ಕು

ಮನೆಯಲ್ಲಿ ಪಕ್ಷಿಗಳ ಚಿಲಿಪಿಲಿ ಧ್ವನಿ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲವ್‌ ಬರ್ಡ್ಸ್‌ ಸೇರಿದಂತೆ ಯಾವುದೇ ಪಕ್ಷಿಗಳ ಪಂಜರವನ್ನು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಅವು ಚುರುಕಾಗಿದ್ದು ಆರೋಗ್ಯದಿಂದಿರುತ್ತವೆ. ಪಕ್ಷಿಗಳಿಗೆ ನಿಯಮಿತವಾಗಿ ಆಹಾರ ನೀಡುವುದರಿಂದ ಪುಣ್ಯವೂ ಲಭಿಸುತ್ತದೆ ಎಂಬ ನಂಬಿಕೆಯಿದೆ.

Vastu Tips: ಜೇಡ್‌ ಸಸ್ಯವನ್ನು ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿ! ಫೆಂಗ್‌ ಶೂಯಿ ಹೇಳುವ ವಾಸ್ತು ನಿಯಮ ಇದು

ಅಕ್ವೇರಿಯಂ ಎಲ್ಲಿರಬೇಕು?

ಮನೆಯಲ್ಲಿ ಮೀನುಗಳನ್ನು ಸಾಕುತ್ತಿದ್ದರೆ ಅಕ್ವೇರಿಯಂ ಅನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ಈ ದಿಕ್ಕಿನಲ್ಲಿ ಇಟ್ಟರೆ ಮೀನುಗಳು ಆರೋಗ್ಯವಾಗಿದ್ದು, ಮನೆಯಲ್ಲೂ ಶಾಂತಿ ಹಾಗೂ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಅಕ್ವೇರಿಯಂ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಮಾನಸಿಕ ಒತ್ತಡವನ್ನೂ ನಿವಾರಿಸಲು ಸಹಕಾರಿಯಾಗಿದೆ.

ಹಸುವಿನ ಕೊಟ್ಟಿಗೆಗೆ ಈ ದಿಕ್ಕು ಶುಭ

ಹಸುವಿನ ಕೊಟ್ಟಿಗೆಯನ್ನು ಪೂರ್ವ ಅಥವಾ ವಾಯವ್ಯ ದಿಕ್ಕಿನಲ್ಲಿ ನಿರ್ಮಿಸುವುದು ವಾಸ್ತು ಪ್ರಕಾರ ಉತ್ತಮ. ಕೊಟ್ಟಿಗೆಯ ಬಾಗಿಲು ಹಾಗೂ ಹಸುವಿನ ಮುಖವೂ ವಾಯವ್ಯ ದಿಕ್ಕಿನತ್ತ ಇರುವಂತೆ ನೋಡಿಕೊಳ್ಳಬೇಕು. ಕೊಟ್ಟಿಗೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಮುಖ್ಯ. ಅಲ್ಲದೆ ತುಳಸಿ ಅಥವಾ ಸುಗಂಧಭರಿತ ಬಿಳಿ ಹೂವಿನ ಗಿಡಗಳನ್ನು ನೆಟ್ಟರೆ ಪರಿಸರದ ಶುಭಶಕ್ತಿ ಹೆಚ್ಚುತ್ತದೆ ಹಾಗೂ ಹಸುಗಳ ಆರೋಗ್ಯಕ್ಕೂ ಅನುಕೂಲವಾಗುತ್ತದೆ ಎಂದು ನಂಬಲಾಗಿದೆ