ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ,ಅಕ್ಟೋಬರ್ 14, 2026: ಹೊಸ ವ್ಯವಹಾರದಲ್ಲಿ ಲಾಭದ ಮುನ್ಸೂಚನೆ!

Horoscope Today October 14th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಚತುರ್ಥಿ ತಿಥಿ, ಅನುರಾಧ ನಕ್ಷತ್ರದ ಅಕ್ಟೋಬರ್‌ 14ನೇ ತಾರೀಖಿನ ಬುಧವಾರದ ಈ ದಿನ ನವರಾತ್ರಿಯ ನಾಲ್ಕನೆ ದಿನ, ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಅನುರಾಧ  ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಪಾರ್ಟ್ನರ್‌ಶಿಪ್‌ ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಆದರೆ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಇಂದು ಒಳಿತಲ್ಲ.

ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಹೆಚ್ಚಿನ ಯಶಸ್ಸಿನ ದಿನವಾಗಿದೆ.ಗಜಕೇಸರಿ ಯೋಗವೂ ಇಂದು ನಿಮಗಿದೆ. ಕಾರ್ಯಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಜಯವನ್ನು ಕಾಣುತ್ತೀರಿ.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿ‌ಕ ಚಟುವಟಿಕೆಗಳಲ್ಲಿ ಯಶಸ್ಸು ಕಾಣುತ್ತೀರಿ‌. ಅದೇ ರೀತಿ ಶತ್ರುಗಳು ಕೂಡ ನಿಮ್ಮನ್ನು ಹಿಮ್ಮೆಟ್ಟಬಹುದು.

ಕಟಕರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ನಿಮ್ಮ ಮಾತುಕತೆಯಲ್ಲಿ ತೊಂದರೆ ಎದುರಾಗಬಹುದು. ಪ್ರೇಮ, ಪ್ರೀತಿ ಪ್ರಕರಣದಲ್ಲಿ ಕೂಡ ಬೇಸರ ಉಂಟಾಗಬಹುದು.

‌ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ನೆಮ್ಮದಿ, ವಾಹನ ಖರೀದಿಯಲ್ಲಿ ಶುಭ ಸೂಚನೆ ಇದೆ. ಮಾಧ್ಯಮದಲ್ಲಿ ಇರೋರಿಗೆ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.

ಕನ್ಯಾರಾಶಿ: ಈ ದಿನ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಇಂದು ನೆಮ್ಮದಿ ಇದ್ದು ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭದಾಯಕವಾಗಿದೆ.

Vastu Tips: ವೈವಾಹಿಕ ಜೀವನದಲ್ಲಿ ನೆಮ್ಮದಿ ಬೇಕಾ? ಬೆಡ್‌ರೂಂನಲ್ಲಿ ಹೀಗಿರಲಿ ವಾಸ್ತು

ತುಲಾ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಬ್ಯಾಂಕುಗಳಲ್ಲಿ ಕೆಲಸ ಮಾಡೋರಿಗೆ ಹಾಗೂ ಹಣದ ವ್ಯವಹಾರ ಮಾಡೋರಿಗೆ ಉತ್ತಮವಾದ ದಿನವಾಗಿದೆ.

ವೃಶ್ಚಿಕ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ‌. ಮನಸ್ಸಿಗೆ ನಾನಾ ರೀತಿಯ ಯೋಚನೆ ಕಾಡಬಹುದು.

ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಲಾಭ ಸಿಗಬಹುದು‌.

ಮಕರ ರಾಶಿ: ಇಂದು ಉತ್ತಮವಾದ ದಿನ ವಾಗಿದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಜಯ ಕಾಣುತ್ತೀರಿ. ನಿಮ್ಮ ಕನಸುಗಳು ಕೂಡ ಇಂದು ನೆರೆವೇರುತ್ತವೆ.

ಕುಂಭ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಹಿಂದಿನ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ. ಹಿರಿಯರ ಆಶೀರ್ವಾದ ಕೂಡ ನಿಮಗೆ ಸಿಗಬಹುದು.

ಮೀನ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಯಾರ ಸಹಕಾರ ಕೂಡ ಸಿಗದೇ ಇರಬಹುದು. ಯಾವುದೇ ಮುಖ್ಯ ನಿರ್ಧಾರ ಇಂದು ಕೈಗೊಳ್ಳುವುದು ಒಳಿತಲ್ಲ.