ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು, ಮಘೆ ಮಾಸೆ, ಶುಕ್ಷ ಪಕ್ಷದ,ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಕಷ್ಟಕರವಾದ ದಿನವಾಗಿದೆ. ಇಂದು ಹೆಂಗಸರಿಂದ ನಿಮಗೆ ವೈ ಮನಸ್ಸು ಮೂಡುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾಗಾಗಿ ಸಂವಹನ ನಡೆಸುವಾಗ ಜಾಗೃತಿಯಾಗಿ ಇರಬೇಕು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ.ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಇಂದು ಯಶಸ್ಸು ಸಿಗುತ್ತದೆ. ಹೆಚ್ಚಿನ ಗೌರವ ಕೂಡ ನಿಮಗೆ ಸಿಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದೆ. ಶುಕ್ರನ ಗೋಚರ ನಿಮಗೆ ಅನುಕೂಲಕರವಾಗಿದೆ. ಮಿತ್ರರ ಜೊತೆಗೂ ಉತ್ತಮ ಭಾಂದವ್ಯವನ್ನು ನೀವು ಹಂಚಿಕೊಳ್ಳುತ್ತೀರಿ.
Vastu Tips: ಮನೆಯಲ್ಲಿರುವ ಈ ವಸ್ತುಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ
ಕಟಕ ರಾಶಿ: ಕಟಕ ರಾಶಿ ಅವರಿಗೆ ಶುಕ್ರ ಅಸ್ತನಾಗಿ ಇರುವುದರಿಂದ ಒಡಕುಗಳೆಲ್ಲ ಜಾಸ್ತಿ ಯಾಗಬಹುದು. ದಾಂಪತ್ಯ, ಸ್ನೇಹಿತರಲ್ಲಿ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರ ಜೊತೆ ವಿನಮ್ರತೆಯಿಂದ ಇರಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಶುಕ್ರ ಅಸ್ತ ನಾಗಿರುವುದರಿಂದ ಸ್ವಲ್ಪ ಶತ್ರು ಭಾದೆ ಹೆಚ್ಚಾಗಬಹುದು. ಹಾಗಾಗಿ ಇಂದು ತೊಂದರೆಗಳು ಹೆಚ್ಚು ಕಾಡುವ ಸಾಧ್ಯತೆ ಇರುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಬೇರೆ ಯವರಿಂದ ಸುಖ ಸಂತೋಷ ಗಳು ಸಿಗುತ್ತವೆ. ಮಕ್ಕಳ ಜೊತೆ ಬಹಳ ಸಾಮರಸ್ಯವಾಗಿ ಸಮಯ ಕಳೆಯುತ್ತೀರಿ.
ತುಲಾ ರಾಶಿ: ತುಲಾ ರಾಶಿಗೆ ಉತ್ತಮವಾದ ಗೋಚರ ಇರಲಿದೆ ಮನೆಯಲ್ಲಿ,ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ತಾಯಿಯೊಡನೆ ಸುಖವಾದ ಕ್ಷಣವನ್ನು ನೀವು ಕಳೆಯಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕ ದಿನವಾಗಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಎಲ್ಲ ರೀತಿಯಿಂದಲೂ ಸಹಕಾರ ಸಿಗಲಿದ್ದು ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ. ಸಂಸಾರದಲ್ಲಿ ಸುಖಕರವಾದ ವಾತಾವರಣ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು. ಎಲ್ಲ ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ.
ಕುಂಭರಾಶಿ: ಈ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ವಿಚಾರದಲ್ಲಿ ಯಾವುದೇ ನಿರ್ಧಾರಗಳು ಬೇಡ. ಯಾರ ಸಹಕಾರ ನಿಮಗೆ ಸಿಗುವುದಿಲ್ಲ.
ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮವಾದ ಗೋಚರ ಇದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಗುಂಪು ಕೆಲಸದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಿತ್ರರೊಡನೆ ಉತ್ತಮ ಸಮಯ ಕಳೆಯುತ್ತೀರಿ.