ಬೆಂಗಳೂರು: ಗುರುವಾರದ (Thursday) ದಿನದಂದು ಸಾಯಿಬಾಬಾ(Saibaba) ಪೂಜಿಸುವ ದಿನವಾಗಿದೆ. ಬಾಬಾರ ಆಶೀರ್ವಾದವನ್ನು ಪಡೆದುಕೊಳ್ಳಲು ಈ ದಿನ ಅತ್ಯಂತ ಪ್ರಶಸ್ಥವಾದ ದಿನವಾಗಿದೆ. ಈ ಕಾರಣಕ್ಕಾಗಿ ಹೆಚ್ಚಿನ ಜನರು ಗುರುವಾರದ ದಿನದಂದು ಉಪವಾಸ ವ್ರತವನ್ನು ಮಾಡುತ್ತಾರೆ, ಜೊತೆಗೆ ಬಾಬಾರನ್ನು ವಿಶೇಷವಾಗಿ ಪೂಜಿಸುತ್ತಾರೆ. ಗುರುವಾರದ ದಿನದಂದು ಉಪವಾಸ ವ್ರತವನ್ನು ಮಾಡುವುದರಿಂದ, ಸಾಯಿಬಾಬಾರನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಇದಲ್ಲದೇ, ಗುರುವಾರದ ದಿನದಂದು ಬಾಬಾರಿಗೆ ಸಂಬಂಧಿಸಿದ ಕೆಲವೊಂದು ವಿಶೇಷವಾದ ಮಂತ್ರಗಳನ್ನು (Manthra) ಪಠಿಸಬೇಕೆಂದು ಹೇಳಲಾಗಿದೆ. ಈ ಮಂತ್ರಗಳನ್ನು ಪಠಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಪ್ರತಿನಿತ್ಯ ಬಾಬಾರನ್ನು ಪೂಜಿಸಲು ಸಾಧ್ಯವಾಗದಿದ್ದರೂ ಗುರುವಾರದಂದು ಬಾಬಾರನ್ನು ಪೂಜಿಸುವುದರಿಂದ ನಾವು ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬಹುದು. ಸಾಯಿಬಾಬರಂಬ್ ಪವಾಡ ಪುರುಷ ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಇಂದು ಬಾಬಾರನ್ನು ಪೂಜಿಸುವುದರಿಂದ ಸಮಾಜದಲ್ಲಿ ಗೌರವ, ಖ್ಯಾತಿ ಲಭ್ಯವಾಗುತ್ತದೆ. ಜೊತೆಗೆ ಬಾಬಾರನ್ನು ಪೂಜಿಸಲು ಗುರುವಾರ ಅತ್ಯಂತ ಶುಭದಿನವಾಗಿದೆ. ಈ ದಿನ ಬಾಬಾರನ್ನು ಪೂಜಿಸಿದ ನಂತರ ಈ ಮಂತ್ರಗಳನ್ನು ಪಠಿಸಿದರೆ ಅಪೇಕ್ಷಿತ ಆಶಯಗಳು ಈಡೇರುವುದು.
ಹಾಗಾದ್ರೆ ಜ್ಯೋತಿ ಶಾಸ್ತ್ರದ ಪ್ರಕಾರ (Astro Tips) ಗುರುವಾರದಂದು ಸಾಯಿಬಾಬಾರ ಯಾವ ಮಂತ್ರವನ್ನು ಪಠಿಸಬೇಕು? ಆ ಮಂತ್ರಗಳನ್ನು ಜಪಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ನೋಡೋಣ.
1. ಓಂ ಸಾಯಿ ರಾಮ್
ಓಂ ಸಾಯಿ ರಾಮ್
ಓಂ ಸಾಯಿ ರಾಮ್
ಸಾಯಿಬಾಬಾರವರ ಈ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದ್ದು, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡುತ್ತದೆ.
ಈ ಸುದ್ದಿಯನ್ನು ಓದಿ:Vastu Tips: ಅಪ್ಪಿತಪ್ಪಿಯೂ ಈ ಜಾಗಗಳಲ್ಲಿ ರಂಗೋಲಿ ಹಾಕಬೇಡಿ ಎನ್ನುತ್ತದೆ ವಾಸ್ತು; ಯಾಕೆ ಗೊತ್ತೇ?
2. ಓಂ ಶಿರಡಿ ವಾಸಾಯ ವಿದ್ಮಹೇ
ಸಚ್ಚಿದಾನಂದಾಯ ಧೀಮಹಿ
ತನ್ನೋ ಸಾಯಿ ಪ್ರಚೋದಯಾತ್
ಗುರುವಾರದಂದು ಸಾಯಿಬಾಬಾರ ಈ ಮಂತ್ರವನ್ನು ಪಠಿಸುವ ಭಕ್ತನಿಗೆ ಸಂಪತ್ತು, ಕೀರ್ತಿ, ಗೌರವ ಮತ್ತು ಅದೃಷ್ಟ ಸಿಗುತ್ತದೆ ಎನ್ನುವ ನಂಬಿಕೆಯಿದೆ.
3. ಓಂ ಸರ್ವದೇವಾಯ ರೂಪಾಯ ನಮಃ
ನಿಮ್ಮ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ತಪ್ಪದೇ ಗುರುವಾರದಂದು ಸಾಯಿಬಾಬಾರ ಈ ಮಂತ್ರವನ್ನು ಪಠಿಸಿ. ಇದರಿಂದ ಜೀವನದಲ್ಲಿನ ಎಲ್ಲಾ ದುಃಖಗಳನ್ನು ಮತ್ತು ತೊಂದರೆಗಳು ದೂರಾಗಲಿದ್ದು, ಆರ್ಥಿಕ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುವುದು.
ಈ ವಿಧಾನ ಅನುಸರಿಸಿ ಮಂತ್ರವನ್ನು ಪಠಿಸಿ
- ಗುರುವಾರದ ದಿನದಂದು ಮುಂಜಾನೆ ಸ್ನಾನ ಮಾಡಿ ಮೊದಲು ಸಾಯಿಬಾಬಾ ಪೂಜೆಯನ್ನು ಮಾಡಬೇಕು.
- ಪೂಜೆ ಮಾಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಒಂದು ಆಸನವನ್ನು ಹಾಕಿ. ಅದರ ಮೇಲೆ ಕುಳಿತುಕೊಂಡು ಸಾಯಿಬಾಬಾ ದೇವನನ್ನು ಧ್ಯಾನಿಸಬೇಕು.
- ಸಾಯಿಬಾಬಾರ ಧ್ಯಾನವನ್ನು ಮಾಡಿದ ನಂತರ ಬಾಬಾರಿಗೆ ಸಮರ್ಪಿತವಾದ ಈ ಮೇಲಿನ ಮಂತ್ರಗಳನ್ನು ಪಠಿಸಿ.
- ನೀವು ಈ ಮಂತ್ರಗಳನ್ನು ಕನಿಷ್ಠ 108 ಬಾರಿ ಪಠಿಸಬೇಕು.
- ಮಂತ್ರಗಳ ಪಠಣದ ಕೊನೆಯಲ್ಲಿ ಪವಾಡ ಪುರುಷ ಆರತಿಯನ್ನು ಮಾಡಿ, ನೈವೇದ್ಯವನ್ನು ಅರ್ಪಿಸಿ.
ಗುರುವಾರದ ದಿನದಂದು ನೀವು ಈ ಸಾಯಿಬಾಬಾ ಮಂತ್ರಗಳನ್ನು ಪಠಿಸುವುದರಿಂದ ಇಷ್ಟಾರ್ಥಗಳು ಈಡೇರುವುದು. ಜೊತೆಗೆ ಬಾಬಾರ ಆಶೀರ್ವಾದವೂ ದೊರೆಯುತ್ತದೆ. ಹಾಗಾಗಿ ಗುರುವಾರದ ದಿನದಂದು ನೀವು ಈ ರೀತಿ ತಪ್ಪದೇ ಬಾಬಾರ ಮಂತ್ರಗಳನ್ನು ಪಠಿಸಿ.
ಸಾಯಿಬಾಬಾರವರ ಈ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದ್ದು, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡುತ್ತದೆ.