Astro Tips: ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಮಲಗುವ ಮುನ್ನ ಈ ಮಂತ್ರಗಳನ್ನು ಪಠಿಸಿ
ದಿನಪೂರ್ತಿ ದುಡಿದು ಒಮ್ಮೆ ತಲೆಯನ್ನು ದಿಂಬಿನ ಮೇಲಿಟ್ಟು ನೆಮ್ಮದಿಯಾಗಿ ನಿದ್ರೆ ಮಾಡಿದ್ದರೆ ಸಾಕು ಎನಿಸಿ ಬಿಡುತ್ತದೆ. ಬೆಳಗ್ಗೆಯಿಂದ ದಣಿದಿರುವ ದೇಹಕ್ಕೆ ವಿಶ್ರಾಂತಿ ಸಿಗುವುದೇ ಒಂದು ಗಾಢವಾದ ನಿದ್ರೆಯಿಂದ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದ್ರೂ, ಓಡಾಡಿದ್ರೂ ನಿದ್ರೆ ಕಣ್ಣಿಗೆ ಹತ್ತಲ್ಲ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ಪರಿಹಾರ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ದಿನಪೂರ್ತಿ ದುಡಿದು ಒಮ್ಮೆ ತಲೆಯನ್ನು ದಿಂಬಿನ ಮೇಲಿಟ್ಟು ನೆಮ್ಮದಿಯಾಗಿ ನಿದ್ರೆ ಮಾಡಿದ್ದರೆ ಸಾಕು ಎನಿಸುತ್ತದೆ. ಬೆಳಗ್ಗೆಯಿಂದ ದಣಿದಿರುವ ದೇಹಕ್ಕೆ ವಿಶ್ರಾಂತಿ ಸಿಗುವುದೇ ಒಂದು ಗಾಢವಾದ ನಿದ್ರೆಯಿಂದ. ಆದರೆಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ, ಓಡಾಡಿದ್ರೂ ನಿದ್ರೆ ಕಣ್ಣಿಗೆ ಹತ್ತುವುದೇ ಇಲ್ಲ. ಇದಕ್ಕೆ ಕಾರಣ ಆರೋಗ್ಯ ಸಮಸ್ಯೆ ಇರಬಹುದು, ವಾಸ್ತು ದೋಷವಿರಬಹುದು ಅಂತ ನಾವು ಯೋಚಿಸುತ್ತೇವೆ. ಆದರೆ ಇದರ ಹೊರತಾಗಿ ಹಲವು ವಿಷಯವೂ ಇದ್ದು, ಜೋತಿಷ್ಯ ಶಾಸ್ತ್ರ(Astro Tips)ದಲ್ಲಿ ಇಂತಹ ನಿದ್ರಾಹೀನ ಸಮಸ್ಯೆಗೆ ಪರಿಹಾರ ಇದೆ.
ನಿಮಗೂ ಈ ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ನೀವು ರಾತ್ರಿ ಮಲಗುವ ಮುನ್ನ ಈ ಮಂತ್ರ (Mantras)ಗಳನ್ನು ಪಠಿಸಬೇಕು. ಹೀಗೆ ಮಾಡಿದಲ್ಲಿ ಕಣ್ತುಂಬ ನಿದ್ರೆ (Good Sleep) ಆವರಿಸುತ್ತದೆ. ಅಲ್ಲದೇ ಆ ಮಂತ್ರಗಳನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಹಾಗಾದ್ರೆ ರಾತ್ರಿ ಮಲಗುವ ಮುನ್ನ ಯಾವ ಮಂತ್ರವನ್ನು ಪಠಿಸಬೇಕು? ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಮಾಹಿತಿ.
ನೆಮ್ಮದಿ ನಿದ್ರೆಗೆ ಮಂತ್ರ
ನೀವು ರಾತ್ರಿ ಸಮಯದಲ್ಲಿ ಉತ್ತಮ ಮತ್ತು ನೆಮ್ಮದಿ ನಿದ್ರೆಯನ್ನು ಮಾಡಲು ಹೊರಟಿದ್ದರೆ ಮಲಗುವ ಮೊದಲು ''ಹರ ಹರ ಮುಕುಂದೆ'' ಎನ್ನುವ ಶಕ್ತಿಯುತ ಮಂತ್ರವನ್ನು ಪಠಿಸಿ. ಈ ಮಂತ್ರದಿಂದ ನೀವು ಸುಖಕರ ನಿದ್ರೆಯನ್ನು ಹೊಂದುತ್ತೀರಿ. ಶಾಂತಿಯುತ ಮನಸ್ಸಿನಿಂದ ಮಲಗಲು ಬಯಸುವವರು ಈ ಮಂತ್ರವನ್ನು ಪಠಿಸಬೇಕು.
ಕೆಟ್ಟ ಕನಸುಗಳು ಬೀಳದೇ ಇರಲು ಈ ಮಂತ್ರ ಪಠಿಸಿ
ಕೆ್ಟ್ಟ ಕನಸು ಬಿದ್ದರೆ ನಿದ್ದೆ ಹಾರಿ ಹೋಗುತ್ತದೆ. ಹೀಗಾಗಿ ಭಯಾನಕ ಕನಸು ನಿಮ್ಮ ನೆಮ್ಮದಿಗೆ ಭಂಗ ತರದಿರಲು ರಾತ್ರಿ ಮಲಗುವ ಮುನ್ನ ಯಾವ ಮಂತ್ರವನ್ನು ಪಠಿಸಬೇಕು ಎನ್ನುವುದು ಗೊತ್ತೆ? ಕೆಲವರು ಇಂತಹ ಕನಸುಗಳನ್ನು ಶುಭ ಸೂಚನೆಯೆಂದು ಪರಿಗಣಿಸಿದರೆ, ಇನ್ನು ಕೆಲವರು ಅಶುಭ ಸೂಚನೆಯೆಂದು ಹೇಳುತ್ತಾರೆ. ನಿಮಗೂ ಕನಸಿನಲ್ಲಿ ಕೆಟ್ಟ ಆಲೋಚನೆಗಳು ಮೂಡಲು ಪ್ರಾರಂಭಿಸಿದರೆ ಅಥವಾ ಪದೇ ಪದೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ''ಓಂ ಸಾ ತಾ ನಾ ಮಾ'' ಮಂತ್ರವನ್ನು ಪಠಿಸಬೇಕು.
ನಿದ್ರಾಹೀನೆಯಿಂದ ಬಳಲುತ್ತಿದ್ದರೆ ಈ ಮಂತ್ರ
ರಾತ್ರಿ ಮಲಗುವ ಮುನ್ನ ನೀವು ''ಓಂ ಗಂ ಗಣಪತಯೇ ನಮಃ'' ಎನ್ನುವ ಗಣಪತಿ ಮಂತ್ರವನ್ನು ಪಠಿಸುವುದರಿಂದ ನಿದ್ರಾಹೀನೆತೆ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಇದರೊಂದಿಗೆ ಉತ್ತಮ ನಿದ್ರೆಯನ್ನು ಕೂಡ ಪಡೆದುಕೊಳ್ಳುತ್ತೀರಿ. ಇನ್ನೂ ದೇವರ ಪೂಜೆಯನ್ನು, ದೇವರ ನಾಮ ಸ್ಮರಣೆಯನ್ನು ಮಾಡುವುದರಿಂದ, ಮಂತ್ರ - ಸ್ತೋತ್ರಗಳನ್ನು ಪಠಿಸುವುದರಿಂದ ನೀವು ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವುದು ಮಾತ್ರವಲ್ಲದೇ ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಕೂಡ ಹೊಂದುತ್ತೀರಿ. ಅದರಲ್ಲೂ ದೇವರ ಮಂತ್ರಗಳಿಗೆ ವಿಶೇಷವಾದ ಶಕ್ತಿಯಿರುತ್ತದೆ. ದೇವರನ್ನು ಸಂಪರ್ಕಿಸುವ ಉತ್ತಮ ಮಾರ್ಗವೆಂದರೆ ಅದುವೇ ಮಂತ್ರಗಳನ್ನು ಪಠಿಸುವುದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ನಕಾರಾತ್ಮಕತೆಯನ್ನು ಹೋಗಲಾಡಿಸಿಕೊಳ್ಳಲು ಮಂತ್ರಗಳನ್ನು ಪಠಿಸುವುದರಿಂದ ಅದು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ.
ಹಾಗೇ ಮಂತ್ರಗಳನ್ನು ಪಠಿಸುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ದೇವರ ಅನುಗ್ರಹವನ್ನು ಕೂಡ ನೀವು ಪಡೆದುಕೊಳ್ಳಬಹುದು. ಪ್ರಸ್ತುತ ದಿನಗಳಲ್ಲಿ ಅತಿಯಾದ ಕೆಲಸದಿಂದ, ಒತ್ತಡದಿಂದ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಮಂತ್ರಗಳನ್ನು ಪಠಿಸಬೇಕು. ಈ 3 ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ನಿದ್ರೆಯನ್ನು ಹೊಂದುತ್ತೀರಿ. ಇದರೊಂದಿಗೆ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ಮರೆಯದಿರಿ.