ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಾಳೆಯಿಂದ 'ನವರಾತ್ರ ನಮಸ್ಯಾ': ಬೆಂಗಳೂರಿನ ಶಾಖಾ ಮಠದಲ್ಲಿ ಸಕಲ ಸಿದ್ಧತೆ

Sri Raghaveshwara Bharathi Mahaswamiji: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 11 ದಿನಗಳ ಕಾಲ 'ನವರಾತ್ರ ನಮಸ್ಯಾ' ಅಕ್ಟೋಬರ್‌ 11ರಿಂದ ನಡೆಯಲಿದೆ.

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಾಳೆಯಿಂದ 'ನವರಾತ್ರ ನಮಸ್ಯಾ'

-

Profile
Siddalinga Swamy Oct 10, 2026 7:28 PM

ಬೆಂಗಳೂರು, ಅ.10: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ (Sri raghaveshwara Bharathi mahaswamiji) ಸಾನ್ನಿಧ್ಯದಲ್ಲಿ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 11 ದಿನಗಳ ಕಾಲ 'ನವರಾತ್ರ ನಮಸ್ಯಾ' ಅ.11ರಿಂದ ನಡೆಯಲಿದೆ.

ವೈಭವದಿಂದ ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ ನಡೆಯಲಿದ್ದು, ರಾಜರಾಜೇಶ್ವರಿಯ ಉಪಾಸನೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ಉಪವಾಸ ವ್ರತದೊಂದಿಗೆ ಶ್ರೀಗಳವರು, ರಾಜರಾಜೇಶ್ವರಿಗೆ ವಿಶೇಷ ಪೂಜೆಯನ್ನು ಸಮರ್ಪಿಸಲಿದ್ದು, ಶ್ರೀಗಳಿಂದ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ವಿಶಿಷ್ಟವಾದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ವಿಶೇಷವಾಗಿ ಶ್ರೀದುರ್ಗಾ ಮಂಟಪದಲ್ಲಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಶ್ರೀರಾಜರಾಜೇಶ್ವರಿಯ ಮಹಾಪೂಜೆ ನಡೆಯಲಿದೆ.

50 ಸಾವಿರ ಜನರಿಗೆ ಅನ್ನಸಂತರ್ಪಣೆ ನಡೆಯಲಿದ್ದು, 1108 ಸಪ್ತಶತೀ ಪಾರಾಯಣ, ಒಂಭತ್ತು ದಿನ ಒಂಭತ್ತು ವಿಶೇಷ ಹವನಗಳು ನಡೆಯಲಿದ್ದು, ಪ್ರತಿದಿನ ನೂರಾರು ಮಾತೆಯರಿಂದ ಕುಂಕುಮಾರ್ಚನೆ, ವಿಜಯದಶಮಿಯ ದಿನ ಶತಚಂಡಿಕಾ ಮಹಾಯಾಗ ಸಂಪನ್ನವಾಗಲಿದೆ.

500 ಋತ್ವಿಜರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, 50ಕ್ಕೂ ಅಧಿಕ ಖ್ಯಾತ ಕಲಾವಿದರು ಕಲೋಪಾಸನೆಯನ್ನು ಮಾಡಲಿದ್ದಾರೆ. 50 ಭಜನಾ ತಂಡಗಳು ಭಾಗವಹಿಸಲಿದ್ದು, 108 ಮಾತೆಯರಿಂದ ನಾಳೆ ಶ್ರೀಗಳಿಗೆ ವಿಶೇಷವಾದ ಪೂರ್ಣ ಕುಂಭ ಸ್ವಾಗತ ಇರಲಿದೆ. 500ಕ್ಕೂ ಅಧಿಕ ಕಾರ್ಯಕರ್ತರು 11 ದಿನಗಳ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು, ಕಾರ್ಯಕ್ರಮದ ಸಿದ್ಧತೆ ಸಮರೋಪಾದಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಅ.11ರಿಂದ 21ವರೆಗೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ 'ನವರಾತ್ರ ನಮಸ್ಯಾ' ಮಹೋತ್ಸವ

ನವರಾತ್ರಿಯ ಪರ್ವಕಾಲದಲ್ಲಿ ವಿವಿಧ ಆಯಾಮಗಳಲ್ಲಿ ರಾಜರಾಜೇಶ್ವರಿಯ ಉಪಾಸನೆ ನಡೆಯಲಿದ್ದು, ಆಸ್ತಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ದೇವಿಯ ಕೃಪೆಗೆ ಭಾಜನರಾಗುವಂತೆ ನವರಾತ್ರ ನಮಸ್ಯಾ ಸಮಿತಿಯು ಕರೆ ನೀಡಿದೆ.