ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಮಘಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಬಿಸಿನೆಸ್, ವ್ಯವಹಾರದಲ್ಲಿ ಲಾಭ ಸಿಗುವುದಿಲ್ಲ. ಹಣ ಕಾಸಿನ ವಿಚಾರದಲ್ಲಿ ನಿಮಗೆ ತೊಂದರೆಯಾಗಬಹುದು. ಅದೇ ರೀತಿ ಪ್ರೇಮ, ಪ್ರೀತಿ ದಾಂಪತ್ಯದಲ್ಲಿ ಕೂಡ ಇಂದು ತೊಂದರೆಗೆ ಒಳಗಾಗಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಆಸ್ತಿ ಪಾಸ್ತಿ ವಿಚಾರವಾಗಿ ಹಾಗೂ ತಾಯಿಯ ಆರೋಗ್ಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ವಾಗಿದೆ. ಹಿಂದಿನ ದಿನದಲ್ಲಿ ಇದ್ದ ತೊಂದರೆಗಳು ಎಲ್ಲ ಮಯ ವಾಗಲಿದೆ. ನೀವು ಅಂದು ಕೊಂಡ ಕೆಲಸ- ಕಾರ್ಯಗಳು ಪೂರ್ಣವಾಗಲಿದೆ
ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:
ಕಟಕ ರಾಶಿ: ಕಟಕ ರಾಶಿ ಅವರಿಗೆ ಸಂಸಾರದ ತಾಪತ್ರಯಗಳು ಇಂದು ಜಾಸ್ತಿಯಾಗಬಹುದು. ಸರಿಯಾದ ರೀತಿ ಯೋಚಿಸಿ ನೀವು ಕೆಲಸ ಮಾಡಬೇಕಾಗುತ್ತದೆ. ಹಾಗೆಯೇ ಎಲ್ಲರ ಜೊತೆ ಮಾತನಾಡುವಾಗ ಜಾಗೃತಿ ವಹಿಸಿಕೊಳ್ಳಬೇಕು.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಹಿಂದೆ ಇದ್ದ ಸಮಸ್ಯೆಗಳು ಇಂದು ನಿವಾರಣೆಯಾಗಲಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರಗಳನ್ನು ಯಾವುದೇ ರೀತಿಯಲ್ಲಿ ಕೈಗೊಳ್ಳಬೇಡಿ. ಯಾರು ಕೂಡ ನಿಮ್ಮ ಪರವಾಗಿ ಇಂದು ಸಹಕಾರ ನೀಡುವುದಿಲ್ಲ.
ತುಲಾ ರಾಶಿ: ತುಲಾ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಆಗಮನವಾಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ಗೋಚರ ಇರಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ನೋವೆಲ್ಲ ಪರಿಹಾರ ವಾಗುತ್ತದೆ. ಮನೆಯಲ್ಲಿ ಹಾಗೂ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರಗಳು ಯಾವುದೇ ಬೇಡ.ಯಾರ ಸಹಕಾರ ನಿಮಗೆ ಸಿಗುವುದಿಲ್ಲ. ಹಾಗೆಯೇ ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ.
ಕುಂಭರಾಶಿ: ಈ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಇಂದು ಎಲ್ಲರಿಂದ ಸಹಕಾರ ಪ್ರಾಪ್ತಿಯಾಗುತ್ತದೆ. ದಾಂಪತ್ಯ ದಲ್ಲೂ ನೆಮ್ಮದಿ ಇದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಶತ್ರುಗಳು ಹಿಮ್ಮೆಟ್ಟಬಹುದು. ಎಲ್ಲ ಕೆಲಸ ಕಾರ್ಯದಲ್ಲಿ ಜಯ ಸಿಗುತ್ತದೆ.