ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ಮನೆ ಗುಡಿಸುವುದಕ್ಕೆ ಮಾತ್ರವಲ್ಲ ಒರೆಸುವುದಕ್ಕೂ ಇದೆ ವಾಸ್ತು ನಿಯಮ! ಈ ಸಮಯದಲ್ಲಿ ನೆಲ ಒರೆಸಿದ್ರೆ ಅಪಾಯ ತಪ್ಪಿದ್ದಲ್ಲ

ಮನೆ ಕೇವಲ ವಾಸಿಸುವ ಸ್ಥಳವಲ್ಲ; ಅದು ಲಕ್ಷ್ಮೀದೇವಿಯ ವಾಸಸ್ಥಾನವಾಗಿರುವ ಪವಿತ್ರ ಸ್ಥಳವಾಗಿದೆ. ಆದ್ದರಿಂದ ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ, ಅದರಿಂದ ಆರೋಗ್ಯ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳು ಮತ್ತು ದುರದೃಷ್ಟವೂ ಎದುರಾಗಬಹುದು ಎನ್ನಲಾಗುತ್ತದೆ.

ಮನೆ ಒರೆಸುವಾಗಲೂ ಈ ವಾಸ್ತು ನಿಯಮ ಪಾಲಿಸಿ!

ನೆಲ ಒರೆಸುವ ಚಿತ್ರ -

Profile
Sushmitha Jain Feb 6, 2026 10:23 AM

ಬೆಂಗಳೂರು: ಸಾಮಾನ್ಯವಾಗಿ ಪ್ರತಿದಿನ ಮನೆಯನ್ನು ಸ್ವಚ್ಛವಾಗಿ ಇಡುವುದು ನಮ್ಮ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿನ ಕಸ, ಕೊಳೆ ಮತ್ತು ಅಶುದ್ಧತೆಗಳನ್ನು ತೆಗೆದುಹಾಕುವುದರಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಆದರೆ ವಾಸ್ತು ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆ ಕೇವಲ ವಾಸಿಸುವ ಸ್ಥಳವಲ್ಲ; ಅದು ಲಕ್ಷ್ಮೀದೇವಿಯ ವಾಸಸ್ಥಾನವಾಗಿರುವ ಪವಿತ್ರ ಸ್ಥಳವಾಗಿದೆ. ಆದ್ದರಿಂದ ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ, ಅದರಿಂದ ಆರೋಗ್ಯ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳು ಮತ್ತು ದುರಾದೃಷ್ಟವೂ ಎದುರಾಗಬಹುದು ಎನ್ನಲಾಗುತ್ತದೆ.
ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ(Vastu Tips) ಮನೆಯನ್ನು ಒರೆಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ.

ಮನೆಯ ಸದಸ್ಯರು ಹೊರಗೆ ಹೋದ ತಕ್ಷಣ ಒರೆಸಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಸದಸ್ಯರು ಹೊರಗೆ ಹೋದ ಕೂಡಲೇ ನೆಲವನ್ನು ಒರೆಸುವುದು ಶುಭವಲ್ಲ. ಅವರು ಹೊರಟ ನಂತರ ಸ್ವಲ್ಪ ಸಮಯ ಕಾಯಬೇಕು. ಇಲ್ಲದಿದ್ದರೆ, ಆ ವ್ಯಕ್ತಿಗೆ ಆರೋಗ್ಯ ತೊಂದರೆಗಳು ಎದುರಾಗುವ ಸಾಧ್ಯತೆ ಇದ್ದು, ಉದ್ಯೋಗ ಅಥವಾ ವ್ಯವಹಾರದಲ್ಲಿ ಅಡೆತಡೆಗಳು ಉಂಟಾಗಬಹುದು.

ಮನೆ ಒರೆಸಿದ ನೀರನ್ನು ಬಾಗಿಲ ಬಳಿ ಸುರಿಯುವುದು ಅಶುಭ

ಮನೆ ಒರೆಸಿದ ನಂತರ ಉಳಿದ ನೀರನ್ನು ಮನೆಯ ಮುಖ್ಯ ಬಾಗಿಲ ಬಳಿ ಸುರಿಯಬಾರದು. ಬಾಗಿಲು ಲಕ್ಷ್ಮೀದೇವಿಯ ಪ್ರವೇಶದ್ವಾರವೆಂದು ಪರಿಗಣಿಸಲಾಗುತ್ತದೆ. ಅಲ್ಲಿ ಕಸನೀರನ್ನು ಸುರಿಸುವುದರಿಂದ ಧನನಷ್ಟ ಮತ್ತು ಅಶುಭ ಪರಿಣಾಮಗಳು ಉಂಟಾಗುತ್ತವೆ ಎಂದು ವಾಸ್ತು ಶಾಸ್ತ್ರ ಎಚ್ಚರಿಸುತ್ತದೆ.

ಒಡೆದ ಬಕೆಟ್ ಬಳಕೆ ಬೇಡ

ನೆಲವನ್ನು ಒರೆಸಲು ಮುರಿದ ಅಥವಾ ಒಡೆದ ಬಕೆಟ್ ಬಳಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಜೊತೆಗೆ ಕೆಂಪು ಬಣ್ಣದ ಬಕೆಟ್ ಬಳಕೆಯನ್ನೂ ತಪ್ಪಿಸಬೇಕು ಎಂದು ಶಾಸ್ತ್ರ ಹೇಳುತ್ತದೆ.

Vastu Tips: ಸ್ನಾನಗೃಹದಲ್ಲಿ ಇಡುವ ಈ ವಸ್ತುಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಚ್ಚರಿಕೆ!

ಗುರುವಾರ ಒರೆಸುವುದು ಸೂಕ್ತವಲ್ಲ

ವಾಸ್ತು ಶಾಸ್ತ್ರದ ಪ್ರಕಾರ ಗುರುವಾರ ಮನೆಯ ನೆಲವನ್ನು ಒರೆಸಬಾರದು. ಈ ದಿನ ಒರೆಸುವುದರಿಂದ ಗುರು ಗ್ರಹದ ಅಶುಭ ಪರಿಣಾಮ ಬೀರಿ, ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಹೆಚ್ಚಾಗುವ ಸಾಧ್ಯತೆ ಇದೆ.

ಉಪ್ಪಿನ ಬಳಕೆ

ಸಾಮಾನ್ಯ ದಿನಗಳಲ್ಲಿ ನೆಲ ಒರೆಸುವ ನೀರಿಗೆ ಸ್ವಲ್ಪ ಕಲ್ಲು ಉಪ್ಪು ಸೇರಿಸುವುದು ಒಳಿತು. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಆದರೆ ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಉಪ್ಪು ಸೇರಿಸುವುದನ್ನು ತಪ್ಪಿಸಬೇಕು. ಇಲ್ಲವಾದರೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು.

ಒರೆಸುವ ದಿಕ್ಕು ಮುಖ್ಯ

ಮನೆಯ ನೆಲವನ್ನು ಒರೆಸುವಾಗ ದಿಕ್ಕಿನ ಪಾಲನೆಯೂ ಅಗತ್ಯ. ಉತ್ತರ ದಿಕ್ಕಿನಿಂದ ಪ್ರಾರಂಭಿಸಿ ಕ್ರಮೇಣ ಇಡೀ ಮನೆ ಒರೆಸುವುದು ಶುಭಕರವೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಮಧ್ಯಾಹ್ನದ ಸಮಯದಲ್ಲಿ ಮನೆ ಒರೆಸಬಹುದೇ

ಮಧ್ಯಾಹ್ನದ ಹೊತ್ತಿನಲ್ಲಿ ನೆಲ ಒರೆಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಬೆಳಗಿನ ಸಮಯದಲ್ಲೇ ಮನೆಯನ್ನು ಸ್ವಚ್ಛಗೊಳಿಸುವುದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.