ಮುರ್ಷಿದಾಬಾದ್: ಪಕ್ಷ ವಿರೋಧಿ ಹೇಳಿಕೆ ನೀಡಿ ತಿಂಗಳ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷದಿಂದ ಹೊರಹಾಕಲ್ಪಟ್ಟ ಟಿಎಂಸಿ ಶಾಸಕ (TMC MLA) ಹುಮಾಯೂನ್ ಕಬೀರ್ (MLA Humayun Kabir)) ಶನಿವಾರ ಮುರ್ಷಿದಾಬಾದ್‌ನಲ್ಲಿ (Murshidabad) ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದರು. ರಾಜಕೀಯ ಸಮಸ್ಯೆಗಳನ್ನು ಕೋಮುವಾದಿ ವಿಷಯವಾಗಿ ಮಾಡುವ ಆರೋಪದಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಇದೀಗ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿಮಾತನಾಡಿದ ಅವರು, ತಾನು ಅಸಂವಿಧಾನಿಕವಾಗಿ ಏನನ್ನೂ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಮುರ್ಷಿದಾಬಾದ್‌ನಲ್ಲಿ ಶನಿವಾರ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿದ ಟಿಎಂಸಿ ಶಾಸಕ ಹುಮಾಯೂನ್ ಕಬೀರ್, ತಾನು ಸಾಂವಿಧಾನಿಕ ಹಕ್ಕನ್ನು ಚಲಾಯಿಸುತ್ತಿದ್ದೇನೆ. ಅಸಂವಿಧಾನಿಕವಾಗಿ ಏನನ್ನೂ ಮಾಡುತ್ತಿಲ್ಲ. ದೇವಸ್ಥಾನ ಅಥವಾ ಚರ್ಚ್ ಅನ್ನು ಯಾರು ಬೇಕಾದರೂ ನಿರ್ಮಿಸಬಹುದು. ಹೀಗಾಗಿ ನಾನು ಮಸೀದಿ ನಿರ್ಮಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಮದುವೆ ಮೆರವಣಿಗೆ ಮಧ್ಯೆಯೇ ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ ಪತಿ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು
ಯಾವುದೇ ಬೆಲೆ ತೆತ್ತಾದರೂ ಸರಿಯೇ ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಿಸಲಾಗುವುದು. ಬಂಗಾಳದಲ್ಲಿರುವ ಮುಸ್ಲಿಮರು ಒಂದೇ ಒಂದು ಇಟ್ಟಿಗೆಯನ್ನು ಚಲಿಸಲು ಬಿಡುವುದಿಲ್ಲ ಎಂದು ಕಬೀರ್ ಹೇಳಿದರು.
ನಾನು ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದೇನೆ. ಯಾವ ಸಂವಿಧಾನವೂ ಕೂಡ ದೇವಸ್ಥಾನ ಅಥವಾ ಚರ್ಚ್ ನಿರ್ಮಿಸಬಾರದು ಎಂದು ಹೇಳುವುದಿಲ್ಲ. ನಾನು ಮಸೀದಿ ನಿರ್ಮಿಸುತ್ತೇನೆ. ಸುಪ್ರೀಂ ಕೋರ್ಟ್‌ನ ಅಯೋಧ್ಯೆಯ ತೀರ್ಪು ಬಾಬರಿ ಮಸೀದಿಯ ಧ್ವಂಸವನ್ನು ಒಪ್ಪಿಕೊಂಡಿದೆ ಮತ್ತು ತೀರ್ಪಿನಲ್ಲಿ ಯಾವುದೂ ಬೇರೆಡೆ ಮಸೀದಿ ನಿರ್ಮಾಣವನ್ನು ತಡೆಯುವುದಿಲ್ಲ. ನನ್ನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ಸಂವಿಧಾನವು ಮಸೀದಿಯನ್ನು ನಿರ್ಮಿಸಲು ಅವಕಾಶ ನೀಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಅದು ನಮ್ಮ ಹಕ್ಕು ಕೂಡ ಆಗಿದೆ ಎಂದು ಅವರು ತಿಳಿಸಿದರು.
ಬಂಗಾಳದಲ್ಲಿ ನಾಲ್ಕು ಕೋಟಿ ಮುಸ್ಲಿಮರಿದ್ದಾರೆ. ಅವರಿಗೆ ಬಾಬರಿ ಮಸೀದಿ ನಿರ್ಮಿಸುವ ಹಕ್ಕಿಲ್ಲವೇ, ಬಂಗಾಳದ ಮುಸ್ಲಿಮರು ಬಾಬರಿ ಮಸೀದಿ ಎಂಬ ಹೆಸರನ್ನು ಏಕೆ ಮರಳಿ ಪಡೆಯಬಾರದು ಎಂದು ಪ್ರಶ್ನಿಸಿದ ಅವರು, ಮಾಜಿ ಮುಖ್ಯಮಂತ್ರಿಯವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಯಾರಿಗಾದರೂ ಧೈರ್ಯವಿದ್ದರೆ ಅವರು ಮುರ್ಷಿದಾಬಾದ್‌ಗೆ ಬಂದು ಅದನ್ನು ತೋರಿಸಲಿ ಎಂದರು.
ಆಸ್ಪತ್ರೆ, ಅತಿಥಿಗೃಹ ಮತ್ತು ಸಭೆ ಸಭಾಂಗಣವನ್ನು ಒಳಗೊಂಡಿರುವ ಮುರ್ಷಿದಾಬಾದ್ ಬಾಬರಿ ಮಸೀದಿ, ಈ ಯೋಜನೆಗೆ 300 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮೀಸಲಿಡಲಾಗಿದೆ. ಬಾಬರಿ ಮಸೀದಿಯನ್ನು ಇಲ್ಲೇ ನಿರ್ಮಿಸಲಾಗುವುದು ಎಂದು ಅವರು ಪುನರುಚ್ಚರಿಸಿದರು.