ಮದುವೆ ಮೆರವಣಿಗೆ ಮಧ್ಯೆಯೇ ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ ಪತಿ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು
ಮದುವೆ ಸಮಾರಂಭದಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿದ್ದ ಪತ್ನಿಗೆ ಪತಿಯೊಬ್ಬ ಕಪಾಳ ಮೋಕ್ಷ ಮಾಡಿದ ಅಘಾತಕಾರಿ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿ ಆಗಮಿಸಿ ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.
ಮದುವೆ ಸಮಾರಂಭದಲ್ಲೇ ಪತ್ನಿಗೆ ಕಪಾಳಮೋಕ್ಷ ಮಾಡಿದ ಪತಿ -
ದೆಹಲಿ, ಡಿ. 6: ಗಂಡ-ಹೆಂಡತಿ ಅಂದ ಮೇಲೆ ಸಣ್ಣ ಪುಟ್ಟ ಜಗಳಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಇಂತಹ ಸಣ್ಣ ವಿಚಾರದ ಜಗಳವೇ ದೊಡ್ಡದಾಗಿ ಸಮಸ್ಯೆ ಉಂಟಾಗುತ್ತದೆ. ಅಂತಹದ್ದೇ ಘಟನೆಯೊಂದು ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿದ್ದ ಪತ್ನಿಗೆ ಪತಿಯೊಬ್ಬ ಕಪಾಳ ಮೋಕ್ಷ ಮಾಡಿದ ಅಘಾತಕಾರಿ ಘಟನೆ ಇದಾಗಿದೆ. ಮದುವೆ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿ ಪ್ರತ್ಯಕ್ಷಗೊಂಡು ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದ್ದು ಆತನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮದುವೆಯ ಸಂಭ್ರಮದ ವಾತಾವರಣದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಇದರಲ್ಲಿ ವಧುವಿನ ಕಡೆಯ ಅತಿಥಿಗಳೊಂದಿಗೆ ಮಹಿಳೆಯೊಬ್ಬರು ಭಾರೀ ಖುಷಿಯಿಂದ ತನ್ನ ಪಾಡಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ಪತಿ ಹಲ್ಲೆ ನಡೆಸಿದ್ದಾನೆ. ವಿಡಿಯೊದಲ್ಲಿ ಆತ ತನ್ನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಸರಿಯಾಗಿ ಕಪಾಳ ಮೋಕ್ಷ ಮಾಡಿದ್ದಾನೆ. ಈ ದೃಶ್ಯವನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.
ವಿಡಿಯೊ ನೋಡಿ:
ದಿಗ್ಭ್ರಮೆಗೊಂಡ ಆಕೆ ಆರಂಭದಲ್ಲಿ ತಾನು ಕೂಡ ಒದೆಯುವ ಮೂಲಕ ಪ್ರತಿರೋಧ ತೋರುತ್ತಾಳೆ. ಆದರೆ, ನಂತರ ಆತ ಆಕೆಯ ಎದೆಗೆ ಒದೆಯುತ್ತಲೇ ಇರುತ್ತಾನೆ. ವಿಚಿತ್ರವೆಂದರೆ, ಹಿನ್ನೆಲೆಯಲ್ಲಿ ಹಾಡು ಕೇಳಿಸುತ್ತಿದ್ದ ಲಯಕ್ಕೆ ಅನುಗುಣವಾಗಿ ಆತ ಹೊಡೆದಿದ್ದಾನೆ. ಆದರೆ ಈ ಘಟನೆಯ ಆಘಾತ ಕಾರಿ ವಿಚಾರ ಏನಂದರೆ ಈ ದೃಶ್ಯವನ್ನು ಸುತ್ತ ನಿಂತಿದ್ದ ಜನರು ವೀಕ್ಷಣೆ ಮಾಡಿದ್ದಾರೆಯೋ ವಿನಃ, ಯಾರೊಬ್ಬರೂ ಮಧ್ಯ ಪ್ರವೇಶ ಮಾಡಿ ಮಹಿಳೆಯನ್ನು ರಕ್ಷಣೆ ಮಾಡಲು ಮುಂದೆ ಬಂದಿಲ್ಲ. ಆ ವ್ಯಕ್ತಿ ಆಕೆಯನ್ನು ಮುಂದಕ್ಕೆ ತಳ್ಳುತ್ತಾ, ಹೊಡೆಯುತ್ತಾ ಹೊರ ಹೋಗುವವರೆಗೂ ಹಲ್ಲೆ ಮುಂದುವರಿಸಿದ್ದಾನೆ. ಅನೇಕ ಬಳಕೆದಾರರು ಇದನ್ನು ಕೌಟುಂಬಿಕ ದೌರ್ಜನ್ಯ"ಎಂದು ಬರೆದುಕೊಂಡಿದ್ದಾರೆ.
ಶಾಲೆಯಲ್ಲಿ ಚಿಕ್ಕ ಮಕ್ಕಳಿಂದ ಇಟ್ಟಿಗೆ ಹೊರಿಸಿದ ಶಿಕ್ಷಕಿ: ನೆಟ್ಟಿಗರಿಂದ ಆಕ್ರೋಶ
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಈ ರೀತಿಯಾಗಿ ಹಲ್ಲೆ ನಡೆಯುತ್ತಿದ್ದರೂ ಮಧ್ಯ ಪ್ರವೇಶಿಸದ ಜನರ ವರ್ತನೆಯ ಬಗ್ಗೆ ಟೀಕೆ ಮಾಡಿದ್ದಾರೆ. ನೆಟ್ಟಿಗರೊಬ್ಬರು ಪತ್ನಿ ಸ್ಟೆಪ್ ನೋಡಿ ಆತನಿಗೆ ಶಾಕ್ ಆಗಿರಬೇಕು ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಆತ ಹಾಡಿನ ಲಯಕ್ಕೆ ತಕ್ಕಂತೆ ಎದೆಮೇಲೆ ಹೊಡೆದಿದದ್ದಾನೆ. ಇಂತಹ ಕಟುಕರು ಸಮಾಜದಲ್ಲಿ ಇದ್ದರಾ? ಎಂದು ಪ್ರತಿಕ್ರಿಯೆ ನೀಡಿದ್ದಾರೆ.