ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Deepavali 2026: ನಗರೀಕರಣದ ನೆರಳಿನಲ್ಲಿ ಕಣ್ಮರೆಯಾಗುತ್ತಿರುವ ‘ಹಂಡೆ ಶೃಂಗಾರ’ ಸಂಪ್ರದಾಯ

Diwali 2026: ಆಧುನಿಕತೆ ಬೆಳೆದಂತೆ ನಮ್ಮ ಸಂಪ್ರದಾಯ, ಆಚಾರ-ವಿಚಾರ ಬದಲಾಗುತ್ತದೆ. ಅದಕ್ಕೆ ಉತ್ತಮ ಉದಾಹರಣೆ ದೀಪಾವಳಿ. ಕರಾವಳಿ ಹಾಗೂ ಮಲೆನಾಡಿನ ಸಾಂಪ್ರದಾಯಿಕ ದೀಪಾವಳಿ ಆಚರಣೆಗಳೇ ಸಾಕ್ಷಿ. ಸ್ನಾನಕ್ಕೆ ಉಪಯೋಗಿಸುವ ತಾಮ್ರದ ಹಂಡೆ, ಕೊಡಕ್ಕೆ ಶೇಡಿ ಹಾಗೂ ಕೆಮ್ಮಣ್ಣಿನಿಂದ ಚಿತ್ತಾರ ಬಿಡಿಸಿ, ಅದರ ಸುತ್ತಲೂ ಪ್ರಕೃತಿದತ್ತವಾಗಿ ಸಿಗುವ "ಹಿಂಡ್ಲ ಕಾಯಿ ಬಳ್ಳಿ" ಮತ್ತು ಚಂಡುಹೂವಿನ ಮಾಲೆಯನ್ನು ಸುತ್ತಿ ಅಲಂಕರಿಸುವುದು ತಲತಲಾಂತರದ ಪವಿತ್ರ ಸಂಪ್ರದಾಯವಿತ್ತು.

ನಗರೀಕರಣದ ನೆರಳಿನಲ್ಲಿ ‘ಹಂಡೆ ಶೃಂಗಾರ’ ಸಂಪ್ರದಾಯ ಕಣ್ಮರೆ

-

Ramesh Ballamoole
Ramesh Ballamoole Nov 7, 2026 8:00 AM
  • ನಾರಾಯಣ ನಾಯ್ಕ

ಹೊನ್ನಾವರ: ಆಧುನಿಕತೆ ಮತ್ತು ನಗರೀಕರಣದ ಅಬ್ಬರಕ್ಕೆ ಸಿಲುಕಿ ನಮ್ಮ ಗ್ರಾಮೀಣ ಆಚರಣೆಗಳು ಹಾಗೂ ಪ್ರಕೃತಿಯೊಂದಿಗಿನ ನಂಟು ಕಣ್ಮರೆಯಾಗುತ್ತಿರುವುದಕ್ಕೆ ಕರಾವಳಿ ಹಾಗೂ ಮಲೆನಾಡಿನ ಸಾಂಪ್ರದಾಯಿಕ ದೀಪಾವಳಿ ಆಚರಣೆಗಳೇ ಸಾಕ್ಷಿ. ದೀಪಾವಳಿಯ ನೀರು ತುಂಬುವ ಹಬ್ಬದ ದಿನದಂದು ಸ್ನಾನಕ್ಕೆ ಉಪಯೋಗಿಸುವ ತಾಮ್ರದ ಹಂಡೆ, ಕೊಡಕ್ಕೆ ಶೇಡಿ ಹಾಗೂ ಕೆಮ್ಮಣ್ಣಿನಿಂದ ಚಿತ್ತಾರ ಬಿಡಿಸಿ, ಅದರ ಸುತ್ತಲೂ ಪ್ರಕೃತಿದತ್ತವಾಗಿ ಸಿಗುವ "ಹಿಂಡ್ಲ ಕಾಯಿ ಬಳ್ಳಿ" ಮತ್ತು ಚಂಡುಹೂವಿನ ಮಾಲೆಯನ್ನು ಸುತ್ತಿ ಅಲಂಕರಿಸುವುದು ತಲತಲಾಂತರದ ಪವಿತ್ರ ಸಂಪ್ರದಾಯವಾಗಿದೆ.

ಕೆಲವು ದಶಕಗಳ ಹಿಂದೆ ದೀಪಾವಳಿ ಬಂತೆಂದರೆ ಮನೆಯ ಸುತ್ತಮುತ್ತಲಿನ ಪೊದೆ ಹಾಗೂ ಬೇಲಿಗಳಲ್ಲಿ ತಾನಾಗಿಯೇ ಬೆಳೆಯುತ್ತಿದ್ದ "ಹಿಂಡ್ಲ ಕಾಯಿ" ಬಳ್ಳಿಯನ್ನು ನೆರೆಹೊರೆಯವರೆಲ್ಲರೂ ಒಟ್ಟಾಗಿ ಹುಡುಕಿ ತರುವುದೇ ಒಂದು ಸಂಭ್ರಮವಾಗಿತ್ತು.ಹಾಗೂ ಇದರ ಔಷಧೀಯ ಗುಣಗಳ ಅರಿವು ಅವರಲ್ಲಿತ್ತು. ಹಿರಿಯರು ಹಂಡೆಗೆ ಚಿತ್ತಾರ ಬಿಡಿಸುತ್ತಿದ್ದರು. ಪ್ರಕೃತಿದತ್ತವಾಗಿ ಸಿಗುವ ವಸ್ತುಗಳನ್ನು ಪರಸ್ಪರ ಹಂಚಿಕೊಂಡು ಆಚರಿಸುತ್ತಿದ್ದ ಅಂದಿನ ಹಬ್ಬಗಳು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಇಡೀ ಸಮುದಾಯವನ್ನು ಒಗ್ಗೂಡಿಸುವ ಬಾಂಧವ್ಯದ ಸಂಕೇತವಾಗಿತ್ತು.

ಆದರೆ ಇಂದು ಪರಿಸರ ಬದಲಾವಣೆ ಮತ್ತು ನಗರೀಕರಣದ ವೇಗದಿಂದಾಗಿ "ಹಿಂಡ್ಲ ಕಾಯಿ" ಬಳ್ಳಿಯಂತಹ ಸಸ್ಯಗಳು ಮನೆಯಂಗಳದಲ್ಲಿ ಸಿಗುವುದು ಅಪರೂಪವಾಗಿದೆ. ಇಂದಿನ ಪೀಳಿಗೆಗೆ ಬಳ್ಳಿಯನ್ನು ಪ್ರಕೃತಿಯಲ್ಲಿ ಹುಡುಕುವ ನೈಸರ್ಗಿಕ ಅನುಭವವೇ ಇಲ್ಲದಂತಾಗಿದ್ದು, ಹಿಂದೆ ಪ್ರೀತಿ - ಬಾಂಧವ್ಯದ ಸಂಕೇತವಾಗಿದ್ದ ಈ ಆಚರಣೆ ಇಂದು ಮಾರುಕಟ್ಟೆಯಲ್ಲಿ ಹಣ ಕೊಟ್ಟು ಹಿಂಡ್ಲ ಕಾಯಿಯ ಬಳ್ಳಿಯನ್ನು ಖರೀದಿಸುವ ಆರ್ಥಿಕ ವಹಿವಾಟಾಗಿ ಬದಲಾಗಿದೆ.

ಹಬ್ಬಗಳು ಪ್ರಕೃತಿಯೊಂದಿಗಿನ ಮನುಷ್ಯನ ನಂಟು ಮತ್ತು ಸಾಮಾಜಿಕ ಮೌಲ್ಯಗಳನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ನಮ್ಮ ಮೂಲ ಸಂಸ್ಕೃತಿಯ ಅರಿವು ಮೂಡಿಸಲಿ.

(ಲೇಖಕರು ಸಹ ಶಿಕ್ಷಕರು ಮಾರ್ ಥೋಮಾ ಆಂಗ್ಲ ಮಾಧ್ಯಮ ಶಾಲೆ, ಹೊನ್ನಾವರ)