ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today January 21st: ಕುಜನ ಪ್ರಭಾವ: ಈ ರಾಶಿಯವರಿಗೆ ಇಂದು ದಾಂಪತ್ಯದಲ್ಲಿ ಬಿರುಕು!

ನಿತ್ಯ ಭವಿಷ್ಯ ಜನವರಿ 21, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ,ತೃತೀಯ ತಿಥಿ ದನಿಷ್ಠ ನಕ್ಷತ್ರದ ಜನವರಿ 22ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಸಂಗ್ರಹ ಚಿತ್ರ

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾ ಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷದ, ದನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ದನಿಷ್ಠ ನಕ್ಷತ್ರ ಇದ್ದು ಇದರ ಅಧಿಪತಿ ಕುಜ ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಮಿತ್ರರಿಂದ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಎಲ್ಲರಿಂದಲೂ ಹೊಗಳಿಕೆಯನ್ನು ಪಡೆದು ಕೊಳ್ಳಬಹುದು. ಕೆಲಸ ಕಾರ್ಯದಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:



ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.‌ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ನೋವು ಮಯವಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ನೀವು ಮಾಡಿದ ಕೆಲಸಗಳು ಸರಿ ಇಲ್ಲ ಎನ್ನುವ ಟೀಕೆಗಳು ಕೇಳಿಬರಬಹುದು. ಹಾಗಾಗಿ ಮನಸ್ಸಿಗೆ ನೋವು ಉಂಟಾಗಬಹುದು.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ದಾಂಪತ್ಯದಲ್ಲಿ ಒಳಿತು, ಮಿತ್ರ ರಿಂದಲೂ ಖುಷಿ ಸಿಗಬಹುದು. ಅತೀ ಒಳಿತಿನ ದಿನ ನಿಮ್ಮದು ಆಗುತ್ತದೆ.

Vastu tips: ಫ್ರಿಡ್ಜ್ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾಗಿದ್ದು ಶತ್ರು ದ್ವಂಸ ಆಗಬಹುದು. ಎಲ್ಲರಿಂದಲೂ ಇಂದು ಗೆಲುವನ್ನು ನೀವು ಸಾಧಿಸಬಹುದು

ತುಲಾ ರಾಶಿ: ತುಲಾ ರಾಶಿಗೆ ಕಷ್ಟಕರವಾದ ದಿನವಾಗಿದೆ.‌ ಹಣಕಾಸಿನ ವಿಚಾರವಾಗಿ ನಿಮಗೆ ಯೋಚನೆ ಕಾಡಬಹುದು. ಬಹಳ ತಾಳ್ಮೆಯಿಂದ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳಬೇಕು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಕೋರ್ಟ್, ಕಛೇರಿ ವ್ಯವಹಾರ ಅದೇ ರೀತಿ ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಕಷ್ಟಕರವಾದ ದಿನವಾಗಿದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಮಾಧ್ಯಮ, ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭದಾಯಕವಾಗಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಸಂಸಾರದಲ್ಲಿ ನೆಮ್ಮದಿ ಇರಲಿದ್ದು ಸುಖದಾಯಕವಾಗಿ ದಿನವನ್ನು ಕಳೆಯಲಿದ್ದೀರಿ

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾ್ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಕ್ಲೇಷ ಮಾಯವಾಗುತ್ತದೆ‌

ಮೀನ ರಾಶಿ: ಮೀನ ರಾಶಿ ಅವರಿಗೆ ಕಷ್ಟಕರವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇಲ್ಲದೆ ಮಾನಸಿಕ ನೋವು ಕಾಡಬಹುದು. ದಾಂಪತ್ಯದಲ್ಲಿ ಕೂಡ ಕಲಹ ಬರಬಹುದು.