ಬೆಂಗಳೂರು: ದಿನ ಪ್ರಾರಂಭ ಚೆನ್ನಾಗಿದ್ದರೆ ಅಂದಿನ ಇಡೀ ದಿನ ಖುಷಿಯಾಗಿ ಆರಾಮವಾಗಿ ಇರುತ್ತದೆ. ಜೊತೆಗೆ ಎಲ್ಲಾ ಕೆಲಸಗಳೂ ಸಂಪೂರ್ಣಗೊಳ್ಳುತ್ತದೆ. ಈ ಬಗ್ಗೆ ಹಿಂದೂ ಧರ್ಮ(Hindu Dharma) ಗ್ರಂಥಗಳಲ್ಲಿ ಉಲ್ಲೇಖ ಮಾಡಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಜೋತಿಷ್ಯ ಶಾಸ್ತ್ರ,ದಲ್ಲಿ(Astro Tips)ತಿಳಿಸಿದ್ದು, ಇದರೊಂದಿಗೆ ಬೆಳಿಗ್ಗೆ ಎದ್ದ ಕೂಡಲೇ ಎಂತಹ ವಸ್ತುಗಳನ್ನು ನೋಡ ಬಹುದು ಹಾಗೂ ನೋಡಬಾರದು ಎಂಬುದನ್ನು ಹೇಳಲಾಗಿದೆ.
ಹೌದು ಮುಂಜಾನೆ ಎದ್ದು ಕೆಲ ವಸ್ತುಗಳನ್ನು ನೋಡುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದ್ದು, ಇವುಗಳನ್ನು ನೋಡುವ ಮೂಲಕ ನಾವು ನಮ್ಮ ದಿನವನ್ನು ಆರಂಭಿಸಿದರೆ ಅದು ನಮಗೆ ನಕಾರಾತ್ಮಕ(Negative Energy)ಫಲ ನೀಡುತ್ತವೆ.
ಹಾಗಾದ್ರೆ ಬೆಳಿಗ್ಗೆ ಎದ್ದು ಯಾವ ವಸ್ತುಗಳು ನೋಡಬಾರದು...? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನೇಳುತ್ತಿದೆ ಎಂಬ ಮಾಹಿತಿ ಇಲ್ಲಿದೆ.
ಎಂಜಲು ಪಾತ್ರೆ
ಕೆಲವರು ರಾತ್ರಿ ಊಟ ಹಾಗೂ ಅಡುಗೆ ಮನೆ ಕೆಲಸ ಆದಮೇಲೆ ತಿಂದ ಪಾತ್ರೆಗಳನೆಲ್ಲ ಹಾಗೇ ಇಡುತ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಹೀಗೆ ಎಂಜಲು ಹಾಗೂ ಮುಸುರೆ ಪಾತ್ರೆಗಳನ್ನು ತೊಳೆಯದೇ ಹಾಗೇ ಇಡುವುದು ಅಶುವವಾಗಿದೆ. ಹೀಗೆ ಮಾಡುವುದರಿಂದ ಮನೆಗೆ ಬಡತನ ಬರುತ್ತದೆ ಎಂದು ಹೇಳಲಾಗಿದೆ. ಕೆಲವರು ಅನಿವಾರ್ಯ ಕಾರಣಗಳಿಂದ ಹೀಗೆ ಮಾಡುತ್ತಾರೆ. ಆದರೆ ಈ ತಪ್ಪು ನಿಮ್ಮ ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರಲಿದ್ದು, ಮನೆಯಲ್ಲಿ ಅಶಾಂತಿ ಮೂಡಿಸುತ್ತದೆ.
ಹಾಳಾದ ಗಡಿಯಾರ
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಬೆಳಿಗ್ಗೆ ಎದ್ದ ಕೂಡಲೇ ಮನೆಯಲ್ಲಿ ಹಾಳಾದ ಅಥವಾ ಕೆಟ್ಟು ನಿಂತ ಗಡಿಯಾರ ಇದ್ದರೆ ಅದನ್ನು ನೋಡುವುದು ಒಳ್ಳೆಯದಲ್ಲ. ಇದರಿಂದ ಅಶುಭದ ಫಲಗಳು ಸಿಗುತ್ತದೆ.
ಕನ್ನಡಿ ನೋಡಬೇಡಿ
ನಮ್ಮಲ್ಲಿ ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಅಭ್ಯಾಸವಿದೆ. ಈ ರೀತಿ ಮಾಡೋದಕ್ಕೆ ಹೋಗಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು. ಇದರಿಂದ ಅಶುಭವಾಗುತ್ತಂತೆ. ಅದರ ಬದಲಾಗಿ ಎದ್ದ ತಕ್ಷಣ ಎರಡು ಕೈಗಳನ್ನು ಉಜ್ಜಿ ನಿಮ್ಮ ಕೈಯನ್ನು ನೀವು ನೋಡಿಕೊಳ್ಳಿ.
ನೆರಳು
ಜ್ಯೋತಿ ಶಾಸ್ತ್ರದ ಪ್ರಕಾರ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನೆರಳನ್ನು ನೋಡಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಬೆಳಗ್ಗೆ ಸೂರ್ಯ ಹುಟ್ಟುವ ಸಮಯದಲ್ಲಿ ನೀವು ನಿಮ್ಮ ನೆರಳು ಪೂರ್ವ ದಿಕ್ಕಿನಲ್ಲಿರೋದನ್ನು ಗಮನಿಸಿರುತ್ತೀರಿ. ರಾಹು ದೋಷ ಇದ್ದರೆ ಹೀಗಾಗುತ್ತೆ ಎಂದು ನಂಬಲಾಗಿದೆ.
ಒಡೆದ ಪಾತ್ರೆ
ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿರೋ ಒಡೆದ ಅಥವಾ ಬಿರುಕು ಬಿಟ್ಟ ಪಾತ್ರೆಯನ್ನು ನೋಡಬೇಡಿ. ಇದರಿಂದ ಕೆಟ್ಟದಾಗಲಿದ್ದು. ಆ ದಿನ ಪೂರ್ತಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮುರಿದ ಪಾತ್ರೆ ನಿಮ್ಮ ಕಣ್ಣೆದುರು ಇರದಂತೆ ಎಚ್ಚರ ವಹಿಸಿದ್ರೆ ಒಳ್ಳೆಯದು.