ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾ ಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷದ, ಉತ್ತರಭಾದ್ರಾ ಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಉತ್ತರ ಭಾದ್ರಾಪದ ನಕ್ಷತ್ರ ಇದ್ದು ಇದರ ಅಧಿಪತಿ ಶನಿ, ಹಾಗಾಗಿ ಹೆಚ್ಚಿನ ವರಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಮನಸ್ಸಿಗೆ ಕ್ಲೇಷ ತರುವ ದಿನವಾಗಿದೆ. ಮುಖ್ಯವಾದ ವಿಚಾರದಲ್ಲಿ ತೊಂದರೆ ಆಗಬಹುದು. ಮನಸ್ಸಿಗೆ ಅತೀ ಹೆಚ್ಚಿನ ಬೇಸರ ಉಂಟಾಗಬಹುದು. ಮಿತ್ರತ್ವದಲ್ಲಿ ಒಡಕು ಕೂಡ ಉಂಟಾಗಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿಯಾಗಲಿದ್ದು ಅಂದು ಕೊಂಡ ಕೆಲಸಗಳು ಪೂರ್ಣಗೊಳ್ಳಲಿದೆ. ಆದರೆ ತಾಳ್ಮೆಯಿಂದ ಇರುವುದು ಮುಖ್ಯ ವಾಗುತ್ತದೆ.
Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ನೆಮ್ಮದಿ ಸಿಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಉತ್ತಮ ಫಲಗಳು ನಿಮಗೆ ಪ್ರಾಪ್ತಿ ಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಧಾನವಾಗಿ ನಿಮ್ಮ ಸಮಸ್ಯೆಗಳು ದೂರ ಸರಿಯುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಬೇಕಾದಂತಹ ಕೆಲಸದಲ್ಲಿ ನೆಮ್ಮದಿ ಸಿಗುವುದಿಲ್ಲ.ಸುಲಭವಾಗಿ ಯಾವುದೇ ಕೆಲಸಗಳು ಇಂದು ಪೂರ್ಣಗೊಳ್ಳುವುದಿಲ್ಲ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾಗಿದ್ದು ಅನೂಕೂಲಕವಾಗಿದೆ. ಪ್ರೀತಿ ಪಾತ್ರರಿಂದ ಬೇಕದಂತಹ ಫಲಗಳು ನಿಮಗೆ ಸಿಗಬಹುದು. ಆದರೆ ಇಂದು ವಿವೇಕವಾಗಿ ಮಾತುಗಳನ್ನು ಆಡಬೇಕಾಗುತ್ತದೆ
ತುಲಾ ರಾಶಿ: ತುಲಾ ರಾಶಿಗೆ ಒಳ್ಳೆಯ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ .ಬೆಳಗ್ಗೆಯಿಂದ ಕಿರಿ ಕಿರಿ ಇದ್ದರೂ ಸಂಜೆಯ ಸಮಯಕ್ಕೆ ನೆಮ್ಮದಿ ಸಿಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದರೂ ಬಿಸೆನೆಸ್ ವ್ಯವಹಾರದಲ್ಲಿ ಉತ್ತಮ ದಿನ ಅಲ್ಲ. ಮಕ್ಕಳಜೊತೆ ಬಹಳ ತಾಳ್ಮೆಯಿಂದ ಇರಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಅತ್ಯುತ್ತಮ ದಿನವಾಗಿದೆ. ಆದರೂ ಕೂಡ ರಿಯಲ್ ಎಸ್ಟೇಟ್, ಕೋರ್ಟ್, ಕಛೇರಿ ವ್ಯವಹಾರದಲ್ಲಿ ,ತಾಯಿಯ ಆರೋಗ್ಯ ಬಗ್ಗೆ ತೊಂದರೆ ಕಾಡಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಬಂಧು ಬಾಂಧವರು ಜೊತೆ ಉತ್ತಮವಾಗಿ ದಿನ ಕಳೆಯುತ್ತೀರಿ. ಬಳಿಕ ಸ್ನೇಹಿತರ ಜೊತೆ ಖುಷಿಯಿಂದ ದಿನ ಕಳೆಯುತ್ತೀರಿ.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮ ಲವಾದ ದಿನವಾಗಿದ್ದು ಪ್ರೀತಿ ಪಾತ್ರರ ಜೊತೆ ಸಮಯ ಕಳೆಯುತ್ತಿರಿ. ಎಲ್ಲರ ಜೊತೆ ನೆಮ್ಮದಿಯಿಂದ ಸಮಯ ಕಳೆಯುತ್ತೀರಿ
ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮ ದಿನವಾಗಿದೆ ..ಹಿಂದಿನ ದಿನದಲ್ಲಿ ಇದ್ದ ಕ್ಲೇಷ ಮಾಯವಾಗಲಿದೆ. ಮುಂದೆ ಏನು ಮಾಡಬೇಕೆಂದು ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.