ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today January 25th: ಬುಧನಿಂದ ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅಡೆತಡೆ ಸಾಧ್ಯತೆ!

ನಿತ್ಯ ಭವಿಷ್ಯ ಜನವರಿ 25, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಸಪ್ತಮಿ ತಿಥಿ, ರೇವತಿ ನಕ್ಷತ್ರದ ಜನವರಿ 25ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಸಂಗ್ರಹ ಚಿತ್ರ

ಬೆಂಗಳೂರು: ಇಂದು ವಿಶ್ವವಸುನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷದ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ರೇವತಿ ನಕ್ಷತ್ರ ಇದ್ದು ಇದರ ಅಧಿಪತಿ ಬುಧ ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಬುಧ ಮೀನ‌ರಾಶಿಯಲ್ಲಿ ನೀಚ ಸ್ಥಾನವನ್ನು ತಲುಪುವುದರಿಂದ ಹೆಚ್ಚಿನ ರಾಶಿಗೆ ಪರಿಣಾಮ ಬೀರುತ್ತದೆ. ಮೇಷ ರಾಶಿಯವರಿಗೆ ಮನಸ್ಸಿಗೆ ಕ್ಷೇಷ ತರುವ ದಿನವಾಗಿದೆ‌ ಮಾತುಕತೆಯಲಿ‌ ಅಡೆತಡೆ ಬರಬಹುದು. ಹಾಗಾಗಿ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲು ಹೋಗಬೇಡಿ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಮಿತ್ರರ ಜೊತೆ ಮಾತುಕತೆ ಕಡಿಮೆ ಆಗಬಹುದು. ಆದರೂ ಇಷ್ಟಾರ್ಥ ಸಿದ್ದಿಯಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಾರ್ಯ‌ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಮಾತು ಕಮ್ಮಿ ಎನ್ನುವ ಕಿವಿಮಾತು ಬರಬಹುದು. ಉತ್ತಮವಾಗಿ ಕೆಲಸ ಕಾರ್ಯವನ್ನು ನಿಭಾಯಿಸುತ್ತೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಲಿದ್ದು ನಿಮ್ಮ ಪಾಡಿಗೆ ನೀವು ಇರಬೇಕಾಗುತ್ತದೆ. ಬೇರೆಯವರೊಂದಿಗೆ ಅಷ್ಟಾಗಿ ನೀವು ಬೆರೆಯುವುದಿಲ್ಲ.

Vastu Tips: ಮೊಬೈಲ್ ಹಿಂದಿನ ಕವರ್‌ನಲ್ಲಿ ಹಣ ಇಡುತ್ತೀರಾ? ಈ ಬಗ್ಗೆ ವಾಸ್ತು ಹೇಳೋದು ಏನು ಗೊತ್ತಾ?

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ನೆಮ್ಮದಿ ತರುವ ದಿನವಾಗಿದೆ. ನಿಮ್ಮ ಪ್ರೀತಿ ಪಾತ್ರರಿಂದ ಕೇಳುವ ಒರಟು ಮಾತುಗಳು ಇಂದು ತಪ್ಪಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾಗಿದ್ದು ಅನೂಕೂಲಕ‌ವಾಗಿದೆ‌. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮಾತಿನಿಂದ ಆಗುವ ತೊಂದರೆಯನ್ನು ನೀವು ಬಗೆಹರಿಸಿಕೊಳ್ಳುತ್ತೀರಿ.

ತುಲಾ ರಾಶಿ: ತುಲಾ ರಾಶಿಗೆ ಒಳ್ಳೆಯ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಆತ್ಮವಿಶ್ವಾಸ ಜಾಸ್ತಿಯಾಗಬಹುದು. ಆದರೂ ಕೂಡ ಮಾತಿನಿಂದ ಏನನ್ನು ಗೆಲ್ಲಲು ಸಾಧ್ಯ ಆಗುವುದಿಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗುತ್ತದೆ. ಈ ಹಿಂದೆ ಇದ್ದಂತಹ ನೋವು ಕಷ್ಟಗಳು ಪರಿಹಾರ ಆಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಇಂದು ಮಾತಿನಲ್ಲಿ ನಿಗಾ ಇರಿಸಿದರೆ ನಿಮಗೆ ಉತ್ತಮವಾಗಲಿದೆ.‌ ಇದರಿಂದ ಯಶಸ್ಸು ಅನ್ನು ಕಾಣಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿ‌ನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಮಯವಾಗಿ ಪ್ರಗತಿಯನ್ನು ಕಾಣುತ್ತೀರಿ.

ಕುಂಭರಾಶಿ: ಈ ರಾಶಿಯವರಿಗೆ ಸಂಸಾರಿಕ‌ ಚಟುವಟಿಕೆಗಳಲ್ಲಿ ಜವಾಬ್ದಾರಿ ಹೆಚ್ಚಾಗಿ ಇರುತ್ತದೆ.ಆದರೂ ಕೂಡ ಇಂದು ಮಾತುಕತೆ ಕಡಿಮೆ ಮಾಡುವುದರಿಂದ ನೆಮ್ಮದಿ ಜಾಸ್ತಿ ಯಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮ ದಿನವಾಗಿದೆ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಹಿಂದಿನ ದಿನದಲ್ಲಿ ಇದ್ದ ಎಲ್ಲ ತೊಂದರೆಗಳು ಇಂದು ಬಗೆಹರಿಯಲಿದೆ.