ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ-ಫೆಬ್ರವರಿ 20, 2026: ಶನಿಯ ಪ್ರಭಾವದಿಂದ ಇಂದು ಕೈ ಸೇರಲಿದೆ ಸಕಲೈಶ್ವರ್ಯ

Horoscope Today February 20: ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಶುಕ್ಷ ಪಕ್ಷ, ತೃತೀಯ ತಿಥಿ, ಉತ್ತರ ಭಾದ್ರಾಪದ ನಕ್ಷತ್ರದ ಫೆಬ್ರವರಿ 20ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು, ಫೆ. 20: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಉತ್ತರ ಬಾಧ್ರಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಇಂದು ಉತ್ತರ ಬಾಧ್ರಪದ ನಕ್ಷತ್ರ ಇದ್ದು ಅಧಿಪತಿ ಶನಿ ಆಗಿದ್ದಾನೆ. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಉತ್ತಮ ದಿನವಾಗಲಿದೆ. ಮಧ್ಯಾಹ್ನ ಬಳಿಕ ‌ತೊಂದರೆ ಎದುರಾಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮಿತ್ರರ ಜತೆ ಖುಷಿಯಾಗಿ ದಿನ ಕಳೆಯುತ್ತೀರಿ. ಧನಾಗಮನ ಕೂಡ ಆಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಅದೃಷ್ಟ ಪರೀಕ್ಷೆ ನಡೆಯುತ್ತಿರುತ್ತದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿಯಶಸ್ಸು ಪ್ರಾಪ್ತಿಯಾಗುತ್ತದೆ.

ಕಟಕ ರಾಶಿ: ಕಟಕ ರಾಶಿಯವರ ಮನಸ್ಸಿನಲ್ಲಿ ಮಧ್ಯಾಹ್ನವರೆಗೂ ಸ್ವಲ್ಪ ಕ್ಷೇಷ ಇರಲಿದೆ. ಮಧ್ಯಾಹ್ನ ಬಳಿಕ ಅದೃಷ್ಟದ ಬಾಗಿಲು ತೆರೆಯಲಿದೆ. ಇಂದು ಹಿರಿಯರ ಹಾಗೂ ಭಗವಂತನ ಆಶೀರ್ವಾದ ಬಹಳ ಮುಖ್ಯವಾಗುತ್ತದೆ.

ಸಿಂಹ ರಾಶಿ: ಮಧ್ಯಾಹ್ನವರೆಗೂ ಸಿಂಹ ರಾಶಿಯವರು ಬಯಸಿದಂತೆ ನಡೆಯುತ್ತದೆ. ಮಧ್ಯಾಹ್ನ ಬಳಿಕ ಮುಖ್ಯವಾದ ಸಂಬಂಧದಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಧ್ಯಾಹ್ನ ನಂತರ ಪ್ರೀತಿ ಪಾತ್ರರ ಜತೆ ಮಧುರವಾದ ಕ್ಷಣಗಳನ್ನು ನೀವು ಅನುಭವಿಸಬಹುದು.

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ ವರೆಗೂ ನಾನಾ ರೀತಿಯ ಯೋಚನೆಗಳು ಕಾಡಬಹುದು. ಅದೇ ರೀತಿ ಮನಸ್ಸಿಗೆ ಅತೀ ಹೆಚ್ಚಿನ ನೋವು ಇರಬಹುದು. ಸಂಜೆಯ ಸಮಯಕ್ಕೆ ಇದೆಲ್ಲ ಬಗೆಹರಿದು ಜಯ ಪ್ರಾಪ್ತಿಯಾಗುತ್ತದೆ.

ಅಡುಗೆಮನೆಯಲ್ಲಿ ಯಾವ ದಿಕ್ಕಿಗೆ ಪಾತ್ರೆಗಳನ್ನು ಇಟ್ಟರೆ ಒಳ್ಳೆಯದು ಗೊತ್ತಾ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಕ್ಷೇಷ ಇರುತ್ತದೆ. ಜವಾಬ್ದಾರಿಗಳು ಜಾಸ್ತಿಯಾಗುವ ಸಾಧ್ಯತೆ ಇದೆ. ಮಧ್ಯಾಹ್ನ ಬಳಿಕ ಮಕ್ಕಳ ಜವಾಬ್ದಾರಿಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಆದರೆ ನಿಮ್ಮ ಬುದ್ಧಿಶಕ್ತಿಯಿಂದ ಎಲ್ಲವನ್ನು ನೀವು ನಿಭಾಯಿಸಬೇಕಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ದಿನ ಬಹಳ ಚೆನ್ನಾಗಿದೆ. ಸಾಮಾಜಿಕ ಚಟುವಟಿಕೆಗಳು, ಮಾಧ್ಯಮ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಆದರೆ ಸಂಜೆಯ ಸಮಯಕ್ಕೆ ಸಂಸಾರದ ತಾಪತ್ರಯಗಳು ಜಾಸ್ತಿಯಾಗುತ್ತವೆ.

ಮಕರ ರಾಶಿ: ಮಕರ ರಾಶಿಯವರು ಮಧ್ಯಾಹ್ನವರೆಗೂ ಕುಟುಂಬದ ಜತೆ ಬಹಳ ಚೆನ್ನಾಗಿಯೇ ದಿನ ಕಳೆಯುತ್ತಾರೆ. ಮಧ್ಯಾಹ್ನ ಬಳಿಕ ಬಂಧು- ಮಿತ್ರರು ಸಹೋದರರ ಜತೆ ನೆಮ್ಮದಿ ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಮನಸ್ಸಿಗೆ ಏನೋ ಒಂದು ತೊಂದರೆ ಬರಬಹುದು. ಮಧ್ಯಾಹ್ನ ಬಳಿಕ ಕುಟುಂಬದ ಮೂಲಕ ನೆಮ್ಮದಿ ‌ಸಿಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಸಮಸ್ಯೆ ಎದುರಾಗುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮುಂದಿನ ದಿನದ ಬಗ್ಗೆ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.