ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಕಷ್ಟಕರವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮಿತ್ರತ್ವದಲ್ಲಿ ಖುಷಿ ಸಿಕ್ಕರೂ ಕೆಲವೊಂದು ವಿಚಾರದಲ್ಲಿ ಬೇಸರ ಉಂಟಾಗಬಹುದು. ಮಕ್ಕಳಿಂದ ಇಂದು ತೊಂದರೆ ಎದುರಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಹಾಗೂ ಸಂಸಾರದಲ್ಲೂ ಸಂತೋಷ ಹಾಗೂ ಸೌಹಾರ್ದ ಪ್ರಾಪ್ತಿಯಾಗುತ್ತದೆ. ವ್ಯವಹಾರದಲ್ಲೂ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಬಂಧು- ಬಾಂಧವರಿಂದ ಅಕ್ಕರೆ ಪ್ರಾಪ್ತಿಯಾಗುತ್ತದೆ. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದಲ್ಲಿ ಇರೋರಿಗೆ ಬಹಳಷ್ಟು ಲಾಭದಾಯಕವಾಗಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿನಲ್ಲಿ ನೆಮ್ಮದಿಯ ದಿನವಾಗಿದೆ. ಬಹಳ ಖುಷಿಯಾದ ವಾತಾವರಣವನ್ನು ಎಲ್ಲರಲ್ಲೂ ಇಂದು ನೋಡಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಿತ್ರರು ಇಂದು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಆತ್ಮವಿಶ್ವಾಸ ಕೂಡ ಇಂದು ಚೆನ್ನಾಗಿ ಇರುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯ ನಿರ್ಧಾರವನ್ನು ಇಂದು ಕೈಗೊಳ್ಳಲು ಹೋಗಬೇಡಿ. ಹೆಂಗಸರಿಂದ ಇಂದು ಸ್ವಲ್ಪ ತೊಂದರೆಯನ್ನು ನೀವು ಎದುರಿಸಬೇಕಾಗಿ ಬರಬಹುದು.
Vastu tips: ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ನಿಯಮ ತಪ್ಪಿದ್ರೆ ಸಮಸ್ಯೆಗಳು ಕಾಡೋದು ಖಂಡಿತಾ!
ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಲಾಭ ಆಗಬಹುದು. ಮಿತ್ರರಿಂದ ಹೆಚ್ಚಿನ ಖುಷಿ ನಿಮಗಿಂದು ಸಿಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕಾಗಿ ಬರಬಹುದು. ಆದರೆ ಸಹೋದ್ಯೋಗಿಗಳ ಜೊತೆಗೆ ವಾಗ್ವಾದ ಉಂಟಾಗಬಹುದು
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಎಲ್ಲರ ಸಹಕಾರ ನಿಮಗೆ ಸಿಗಲಿದ್ದು ಆರ್ಥಿಕ ವ್ಯವಹಾರದಲ್ಲೂ ಯಶಸ್ಸು ಸಿಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಹಿಂಸೆ ಆಗಲಿದ್ದು ನಾನಾ ರೀತಿಯ ಯೋಚನೆಗಳು ಕಾಡಬಹುದು.
ಕುಂಭ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಎಲ್ಲ ಕಡೆಯಿಂದಲೂ ಜಯ ಪ್ರಾಪ್ತಿಯಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಶತ್ರು ನಾಶ ಹಾಗೂ ಧ್ವಂಸವಾಗಲಿದೆ. ಆದರೆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕಾಗುತ್ತದೆ.