ಬೆಂಗಳೂರು: ಗುರುವಾರ (Thursday) ವಿಷ್ಣು (Lord Vishnu) ಸಮರ್ಪಿಸಲಾಗಿದ್ದು, ಗುರು ಗ್ರಹಕ್ಕೂ ಈ ದಿನ ಸಂಬಂಧಪಟ್ಟದಾಗಿದೆ. ಗುರು ಗ್ರಹವೂ ಉದ್ಯೋಗ ಮತ್ತು ವಿವೇಚನೆಯ ಅಧಿಪತಿ ಎಂದು ಹೇಳಲಾಗುತ್ತದೆ. ಈ ದಿನದಂದು ವಿಷ್ಣುವನ್ನು ಪೂಜಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಬಹುದಾಗಿದ್ದು, ನಿಮ್ಮ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಜ್ಯೋತಿಷ್ಯ ಶಾಸ್ತ್ರ(Astro Tips)ದಲ್ಲಿ ವಿಷ್ಣು ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ಲಕ್ಷ್ಮೀ ವಾಸ ಮಾಡುತ್ತಾಳೆ ಎಂಬ ನಂಬಿಕೆ ಇದ್ದು, ಆ ಮನೆಯಲ್ಲಿ ಸದಾ ಕಾಲ ಸಂತೋಷ-ನೆಮ್ಮದಿ ಇರುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ವಿಷ್ಣುವನ್ನು ನಿಯಮನುಸಾರ ಪೂಜಿಸುವುದರೊಂದಿಗೆ, ಉಪವಾಸ ವ್ರತಗಳನ್ನು ಆಚರಿಸುವುದರಿಂದ ಅತ್ಯಂತ ಪುಣ್ಯಫಲಗಳು ಲಭಿಸುತ್ತವೆ. ಇದರಿಂದ ಭಕ್ತರ ಮನೋಭಿಲಾಷೆಗಳು ಪೂರ್ಣಗೊಳ್ಳುತ್ತವೆ ಮತ್ತು ಸಂಕಷ್ಟಗಳು ದೂರವಾಗುತ್ತವೆ.
ಈ ದಿನದಂದ ವಿಷ್ಣುವನ್ನು ಪೂಜಿಸುವುದರ ಜತೆಗೆ ಕೆಲ ಪರಿಹಾರ ಕ್ರಮಗಳನ್ನು ಪಾಲಿಸುವುದು ಮಂಗಳಕರವೆಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವಾರ ಈ ಕೆಲಸಗಳನ್ನು ಮಾಡಿದರೆ ಗುರುವಿನ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಗುರುವಾರ ಭಗವಾನ್ ವಿಷ್ಣುವನ್ನು ಮೆಚ್ಚಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು? ವಿಷ್ಣುವನ್ನು ಹೇಗೆ ಪೂಜಿಸಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಡ್ರೀಮ್ ಕ್ಯಾಚರ್ ಮನೆಯಲ್ಲಿದ್ದರೆ ಹಣಕ್ಕೆ ಕೊರತೆಯೇ ಇರುವುದಿಲ್ಲ!
ಸಂತೋಷ - ಸಂಪತ್ತು ಹೆಚ್ಚಿಸುವ ಅರಳಿ ಎಲೆ
ಗುರುವಾರ ಅರಳಿ ಎಲೆಯನ್ನು ತಂದು ಶುದ್ಧಗೊಳಿಸಿ, ಅದರ ಮೇಲೆ ಕುಂಕುಮದಿಂದ ‘ಓಂ ಶ್ರೀಂ ಹ್ರೀಂ ಶ್ರೀಂ ನಮಃ’ ಎಂಬ ಮಂತ್ರವನ್ನು ಬರೆಯಿರಿ. ಮಂತ್ರ ಬರೆದ ಬಳಿಕ ಆ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಬೇಕು. ಜತೆಗೆ ಪರ್ಸ್‌ನಲ್ಲಿ ಲಕ್ಷ್ಮಿ ದೇವಿಯ ಮುಖ ಹೊಂದಿರುವ ಬೆಳ್ಳಿಯ ನಾಣ್ಯವನ್ನು ಇಡುವುದು ಶುಭಕರವೆಂದು ನಂಬಲಾಗಿದೆ. ಹೀಗೆ ಮಾಡಿದರೆ ಲಕ್ಷ್ಮೀ ದೇವಿಯ ಹಾಗೂ ವಿಷ್ಣುವಿನ ಕೃಪಾಶೀರ್ವಾದ ದೊರೆತು, ಕುಟುಂಬದ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಜತೆಗೆ ಸಂಪತ್ತು ಕೂಡ ವೃದ್ದಿಸುತ್ತದೆ.
ಸಕಾರಾತ್ಮಕ ಶಕ್ತಿ ವೃದ್ಧಿಸುವ ಬಾಳೆಗಿಡ
ಗುರುವಾರದ ಮುಂಜಾನೆ ಎದ್ದು ಸ್ನಾನ ಮಾಡಿ ಶುದ್ಧರಾದ ಬಳಿಕೆ ಬಾಳೆ ಗಿಡವನ್ನು ಪೂಜಿಸಬೇಕು. ಬಾಳೆ ಗಿಡದಲ್ಲಿ ವಿಷ್ಣು ದೇವರು ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಅಂದು ಗಿಡಕ್ಕೆ ನೀರನ್ನು ಅರ್ಪಿಸಿ, ಅದರ ಬಳಿ ತುಪ್ಪದ ದೀಪವನ್ನು ಹಚ್ಚಿಡಬೇಕು. ಗುರುವಾರದ ಪವಿತ್ರವಾದ ಈ ಬಾಳೆ ಗಿಡವನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ.
ಕುಬೇರನ ಯಂತ್ರ
ಸಂಪತ್ತಿನ ದೇವರಾದ ಕುಬೇರನ ಯಂತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ನಂಬಲಾಗಿದೆ. ಕುಬೇರನ ಕೃಪೆಯಿಂದ ಹಣದ ಕೊರತೆ ದೂರವಾಗಿ, ಧನ ಸಮೃದ್ಧಿ ದೊರೆಯುತ್ತದೆ. ನೀವು ಸಾಲಬಾಧೆಗೊಳಗಾಗಿದ್ದರೆ ಅಥವಾ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪರ್ಸ್‌ನಲ್ಲಿ ತಾಮ್ರದ ಹಾಳೆಯಲ್ಲಿ ಬರೆಯಲಾದ ಕುಬೇರ ಯಂತ್ರ ಅಥವಾ ಶ್ರೀಯಂತ್ರವನ್ನು ಇರಿಸಿಕೊಳ್ಳಬಹುದು. ಜತೆಗೆ ಪರ್ಸ್‌ನಲ್ಲಿ ಕವಡೆ, ಅರಿಶಿನ ಅಥವಾ ಕುಂಕುಮ ಇಡುವುದೂ ಶುಭಕರವೆಂದು ಪರಿಗಣಿಸಲಾಗಿದೆ.