Astro Tips: ಮಂಗಳವಾರ ಆಂಜನೇಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ
Astro Tips For Hanuman Pooja: ಜೋತಿಷ್ಯ ಶಾಸ್ತ್ರ ಪ್ರಕಾರ ಮಂಗಳವಾರದಂದು ಆಂಜನೇಯನ ಪೂಜೆಗೆ ವಿಶೇಷ ಮಹತ್ವವಿದೆ. ಆಂಜನೇಯನ ಅನುಗ್ರಹ ಪಡೆಯಲು ಈ ದಿನ ಪ್ರಶಸ್ತ. ಹನುಮಾನ್ ಚಾಲೀಸಾವನ್ನು ಪರಿಸುವ ಮೂಲಕ ವಾಯು ಪುತ್ರನ ಕೃಪೆಗೆ ಪಾತ್ರರಾಗಬಹುದಾಗಿದ್ದು, ಆತನ ಆಶೀರ್ವಾದ ಪಡೆಯಲು ಇರುವ ಸುಲಭವಾದ ಮಾರ್ಗಗಳಲ್ಲಿ ಇದು ಒಂದು. ಹನುಮಾನ್ ಚಾಲೀಸಾ ಜತೆಗೆ ಸುಂದರಕಾಂಡವನ್ನು ಪಠಿಸುವುದರಿಂದ ನಿಮ್ಮೆಲ್ಲ ಇಷ್ಟಾರ್ಥ ಈಡೇರುತ್ತದೆ.
ಆಂಜನೇಯ -
ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಮಂಗಳವಾರಕ್ಕೆ (Tuesday) ವಿಶೇಷ ಮಹತ್ವವಿದೆ. ಮಂಗಳವಾರವನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹಿಂದೂಗಳು ಹನುಮಂತನನ್ನು (Hanuman) ಪೂಜಿಸುತ್ತಾರೆ. ಈ ದಿನದಂದು ಹನುಮನನ್ನು ಆರಾಧಿಸುವುದರಿಂದ ಎಲ್ಲ ದುಃಖಗಳನ್ನು, ನೋವುಗಳನ್ನು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅಲ್ಲದೇ ಹನುಮಂತ ಶಕ್ತಿ, ಧೈರ್ಯ, ಸಂತೋಷ, ಆರೋಗ್ಯವನ್ನು ಕರುಣಿಸುವ ದೇವರು ಎಂಬ ನಂಬಿಕೆಯೂ ಇದ್ದು, ಅದರಲ್ಲೂ ಜೋತಿಷ್ಯ ಶಾಸ್ತ್ರ (Astro Tips) ಪ್ರಕಾರ ಮಂಗಳವಾರ ಮತ್ತು ಶನಿವಾರ ಆಂಜನೇಯನ ಪೂಜೆಗೆ ಬಲು ಉತ್ತಮ ಎಂಬ ನಂಬಿಕೆ ಇದೆ. ಅಲ್ಲದೆ ಮಂಗಳವಾರ ಹನುಮಂತನ ಪೂಜೆಗೆ ತುಂಬಾ ಶ್ರೇಷ್ಠ ದಿನವಾಗಿದೆ. ಮಂಗಳವಾರದಂದು ಹನುಮಂತನ ಆರಾಧನೆ ಹೇಗೆ ಮಾಡಬೇಕು? ಸಂಕಷ್ಟ ನಿವಾರಣೆಗೆ ಯಾವೆಲ್ಲ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಪೂಜಾ ಸಾಮಗ್ರಿಗಳು
ಕೆಂಪು ಬಟ್ಟೆ, ನೀರಿನ ಕಲಶ, ಪಂಚಾಮೃತ, ಗಂಗಾಜಲ, ಸಿಂಧೂರ, ಕೆಂಪು ಹೂವುಗಳು, ಮಾಲೆಗಳು, ಹುರಿದ ಬೇಳೆ, ಬೆಲ್ಲ, ವೀಳ್ಯದೆಲೆ, ತೆಂಗಿನಕಾಯಿ, ಬಾಳೆಹಣ್ಣು, ಸಾಸಿವೆ ಎಣ್ಣೆ, ಮಲ್ಲಿಗೆ ಎಣ್ಣೆ, ತುಪ್ಪ, ತುಳಸಿ ಎಲೆಗಳು, ದೀಪಗಳು, ಧೂಪ, ಧೂಪದ್ರವ್ಯ ಮತ್ತು ಕರ್ಪೂರ ಇತ್ಯಾದಿ.
ಈ ರೀತಿ ಪೂಜೆ ಮಾಡಿ
ಜೋತಿಷ್ಯ ಶಾಸ್ತ್ರ ಪ್ರಕಾರ, ಮಂಗಳವಾರ ಆಂಜನೇಯನ ಪೂಜೆಗೆ ವಿಶೇಷ ಮಹತ್ವವಿದ್ದು, ಆತನ ಅನುಗ್ರಹ ಪಡೆಯಲು ಈ ದಿನ ಹೆಚ್ಚು ಪ್ರಶಸ್ತ. ಹನುಮಾನ್ ಚಾಲೀಸಾವನ್ನು ಪರಿಸುವ ಮೂಲಕ ವಾಯು ಪುತ್ರನ ಕೃಪೆಗೆ ಪಾತ್ರರಾಗಬಹುದಾಗಿದ್ದು, ಆತನ ಆಶೀರ್ವಾದ ಪಡೆಯಲು ಇರುವ ಸುಲಭವಾದ ಮಾರ್ಗಗಳಲ್ಲಿ ಇದು ಒಂದು. ಅಲ್ಲದೇ ಹನುಮಾನ್ ಚಾಲೀಸಾದ ಜತೆಗೆ ಸುಂದರಕಾಂಡವನ್ನು ಪಠಿಸುವುದರಿಂದ ನಿಮ್ಮೆಲ್ಲ ಇಷ್ಟಾರ್ಥಗಳು ಈಡೇರುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳ ಅಧ್ಯಯನ ಕೊಠಡಿ ಹೇಗಿರಬೇಕು ಹೀಗಿರಲಿ
ಅದಕ್ಕೆ ನೀವು ಮಾಡಬೇಕಿರೋದು ಇಷ್ಟೇ...
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿಯಾಗಿ ಆಂಜನೇಯನಿಗೆ ಪ್ರಿಯವಾದ ಕೆಂಪು ಅಥವಾ ಹಳದಿ ಬಟ್ಟೆಯನ್ನು ಧರಿಸಿ. ನಂತರ ಭಕ್ತಿ ಭಾವದ ಮನಸ್ಸಿನಿಂದ ದೇವರ ಕೋಣೆಗೆ ಹೋಗಿ ನಮಸ್ಕರಿಸಿ.
ಅನಂತರ ಗಣಪತಿಯನ್ನು ಸ್ಮರಿಸಿ. ಬಳಿಕ ಹನುಮಂತನನ್ನು ಮೆಚ್ಚಿಸಲು ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ. ದೀಪ ಹಚ್ಚುವಾಗ 'ಓಂ ಶ್ರೀ ರಾಮದೂತ ಹನುಮತೇ ನಮಃ ದೀಪಂ ದರ್ಶಯಾಮಿ' ಮಂತ್ರ ಹೇಳಿಕೊಳ್ಳಿ.
ಬಳಿಕ ಸಿಂಧೂರವನ್ನು ಅರ್ಪಿಸಿ. ಬಳಿಕ, ಸಾಸಿವೆ ಎಣ್ಣೆ, ತೆಂಗಿನಕಾಯಿ ಮತ್ತು 21 ವೀಳ್ಯದೆಲೆಗಳಿರುವ ಹಾರವನ್ನು ಹನುಮನಿಗೆ ಅರ್ಪಿಸಿ. ಜತೆಗೆ, ದಾಸವಾಳ ಮತ್ತು ಗುಲಾಬಿ ಹೂಗಳನ್ನು ನೀಡಿ. ಕೊನೆಯಲ್ಲಿ ಲಡ್ಡು, ಬಾಳೆಹಣ್ಣು, ಪೇರಲೆ ಹಣ್ಣು ಇತ್ಯಾದಿಯನ್ನು ನೈವೇದ್ಯ ಮಾಡಿ.
ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ
- ಕಪ್ಪು ಅಥವಾ ಬಿಳಿ ಬಟ್ಟೆಗಳನ್ನು ಧರಿಸಿದ ಆಂಜನೇಯನ ಪೂಜೆ ಬೇಡ.
- ಉಪವಾಸ ಮಾಡಿದರೆ ತೊಂದರೆಯಿಲ್ಲ, ಉಪವಾಸ ಮಾಡದಿದ್ದರೆ ಹನುಮಾನ್ ಜಯಂತಿಯಂದು ಉಪ್ಪು ತಿನ್ನುವುದು ಬೇಡ.
- ಕೋಪದಲ್ಲಿ ಆಂಜನೇಯನ ಪೂಜೆ ಬೇಡ.
- ಈ ದಿನ ಮದ್ಯ ಸೇವನೆ ಮಾಡಕೂಡದು. ಎಲ್ಲ ಚಟಗಳಿಂದ ದೂರವುಳಿಯಬೇಕು.
- ಸ್ನಾನ ಮಾಡದೇ ಕೊಳಕು ಬಟ್ಟೆಯಲ್ಲಿ ಪೂಜೆ ಮಾಡಬಾರದು.