ಬೆಂಗಳೂರು, ಮೇ 25: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಉತ್ತರ ಫಾಲ್ಗುಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಉತ್ತರ ಫಾಲ್ಗುಣಿ ನಕ್ಷತ್ರದ ಅಧಿಪತಿ ರವಿ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಮಾತಿನಿಂದ ಅನೇಕ ತೊಂದರೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ಶತ್ರು ನಾಶವಾಗಲಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಸಂಸಾರದ ತಾಪತ್ರಯಗಳು ಹೆಚ್ಚಿರಲಿದೆ. ಮಧ್ಯಾಹ್ನ ಬಳಿಕ ನಿಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಜಯ ಸಾಧಿಸಬಹುದು.
ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತಿರುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರು ಹಾಗೂ ಮನೆಯವರ ಜತೆ ಜಗಳ ಉಂಟಾಗಬಹುದು. ಕೋರ್ಟ್, ಕಚೇರಿ ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು
ಕಟಕ ರಾಶಿ: ಕಟಕ ರಾಶಿಯವರು ಮಧ್ಯಾಹ್ನವರೆಗೂ ಕುಟುಂಬದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಮಧ್ಯಾಹ್ನ ಬಳಿಕ ಬಂಧು ಬಾಂಧವರ ಜತೆ ಉತ್ತಮ ಸಮಯ ಕಳೆಯಬಹುದು.
ಸಿಂಹ ರಾಶಿ: ಸಿಂಹ ರಾಶಿಯವರು ಮಧ್ಯಾಹ್ನವರೆಗೂ ವೈಯಕ್ತಿಕ ವಿಚಾರವಾಗಿಯೇ ಯೋಚನೆ ಮಾಡಬೇಕಾಗುತ್ತದೆ. ಮಧ್ಯಾಹ್ನ ಬಳಿಕ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಕಷ್ಟ ಎದುರಾಗಲಿದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರ ಜತೆ ಸಮಯ ಕಳೆಯಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಜವಾಬ್ದಾರಿ ಜಾಸ್ತಿಯಾಗಬಹುದು. ಮಿತ್ರತ್ವದಲ್ಲಿ ಒಡಕು ಕೂಡ ಉಂಟಾಗಬಹುದು, ಎಚ್ಚರ.
ವಾಸ್ತು ಪ್ರಕಾರ ಮನೆಯ ಯಾವ ಕೋಣೆಗೆ ಯಾವ ಬಣ್ಣ ಸೂಕ್ತ?
ವೃಶ್ಚಿಕ ರಾಶಿ: ಈ ರಾಶಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದ ಜವಾಬ್ದಾರಿ ಜಾಸ್ತಿಯಾಗುತ್ತದೆ. ಮಧ್ಯಾಹ್ನ ಬಳಿಕ ನಿಮಗೆ ಧನ ಲಾಭ ಉಂಟಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಭಾಗ್ಯ ಸ್ಥಾನದಲ್ಲಿ ಏರುಪೇರು ಆಗಬಹುದು. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಒಮ್ಮಲೆ ಯಶಸ್ಸು ಸಿಗುತ್ತದೆ. ಹೂಡಿಕೆಗೂ ಉತ್ತಮ ಸಮಯ.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನದಲ್ಲಿ ತೊಂದರೆ ಹೆಚ್ಚಾಗಿಯೇ ಕಾಡುತ್ತದೆ. ಮಧ್ಯಾಹ್ನ ಬಳಿಕ ಹಿರಿಯರಿಂದ ಆಶೀರ್ವಾದ ಪ್ರಾಪ್ತಿಯಾಗುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತದೆ. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರ ಜತೆ ಮನಸ್ತಾಪ ಉಂಟಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಸಾಮಾಜಿಕ ಚಟುವಟಿಕೆಯಲ್ಲಿ ಬ್ಯುಸಿ ಇರುತ್ತೀರಿ. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರ ಜತೆ ಸಮಯ ಕಳೆಯಲಿದ್ದೀರಿ.