ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಜೂನ್ 7, 2026: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅತೀ ದೊಡ್ಡ ಬದಲಾವಣೆ ಸಾಧ್ಯ!

Horoscope Today June 7th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಶತಬಿಷಾ ನಕ್ಷತ್ರದ, ಜೂನ್ 7ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ,ಸಪ್ತಮಿ ತಿಥಿ, ಶತಬಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಮೇಷ ರಾಶಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಎಲ್ಲರ ಸಹಕಾರ ಪ್ರಾಪ್ತಿಯಾಗುತ್ತದೆ.‌ ಅದೇ ರೀತಿ ಅತೀ ಹೆಚ್ಚಿನ ಧನ ಆಗಮನ ಆಗುವ ಸಾಧ್ಯತೆ ಇಂದು ಇರುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಇಂದು ಅತೀ ಒಳ್ಳೆಯ ಬದಲಾವಣೆ ಕಂಡು ಬರುತ್ತದೆ. ಇತರರಿಂದ ನಿಮಗೆ ಗೌರವ ಹೆಚ್ಚಾಗುವ ಸೂಚನೆಗಳು ಕೂಡ ಇರುತ್ತವೆ‌

ಮಿಥುನ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ಹಿರಿಯರಿಂದ ಬಹಳ ದೊಡ್ಡ ಬದಲಾವಣೆ ಇಂದು ಆಗುತ್ತದೆ. ಅದೇ ರೀತಿ ದೊಡ್ಡವರ ಆಶೀರ್ವಾದದಿಂದ ನೀವು ಅಂದು ಕೊಂಡ ಕೆಲಸಗಳು ಪೂರ್ಣ ಗೊಳ್ಳುತ್ತವೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಬಹಳಷ್ಟು ಬೇಸರವಾಗುವ ದಿನ ನಿಮ್ಮದು ಆಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ಇಂದು ಕೆಡುಕು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಬೇರೆಯವರಿಂದ ಉತ್ತಮ ಸಹಕಾರ ಪ್ರಾಪ್ತಿಯಾಗುತ್ತದೆ‌. ಬಿಸೆನೆಸ್ ವ್ಯವಹಾರದಲ್ಲೂ ಇಂದು ನಿಮಗೆ ಯಶಸ್ಸು ಸಿಗುತ್ತದೆ.

Vastu Tips: ಸ್ನಾನದ ನಂತರ ಈ ತಪ್ಪುಗಳನ್ನು ಮಾಡಬೇಡಿ ಅನ್ನುತ್ತದೆ ವಾಸ್ತು ಶಾಸ್ತ್ರ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಆರೋಗ್ಯದಲ್ಲಿ ಬಹಳ ದೊಡ್ಡ ಸುಧಾರಣೆ ಕಂಡು ಬರುತ್ತದೆ. ಆದರೂ ಕೂಡ ನೀವು ಕೆಲವೊಂದು ವಿಚಾರದಲ್ಲಿ ಜಾಗರೂಕತೆಯಿಂದ ಇರಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ನಿಮಗೆ ನಷ್ಟ ವಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇಂದು ಹಣ ವ್ಯಯವಾಗುವ ಸಾಧ್ಯತೆ ಕೂಡ ಇರುತ್ತದೆ.

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಅತೀ ದುಖ:ಕರವಾದ ದಿನವಾಗಿದೆ. ಕೋರ್ಟ್ ಕಛೇರಿ ವ್ಯವಹಾರದಲ್ಲಿ ಇಂದು ನಷ್ಟವಾಗುವ ಸಾಧ್ಯತೆ ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮಾಧ್ಯಮ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋರಿಗೆ ಲಾಭ ದಾಯಕದಿನವಾಗಿದೆ. ಅಣ್ಣ- ತಮ್ಮಂದಿರಿಂದ ಮನಸ್ಸಿಗೆ ನೆಮ್ಮದಿ

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಕುಟುಂಬದಲ್ಲಿ ಸಂತೋಷದಾಯಕ ವಾತಾವರಣ ಇರುತ್ತದೆ‌

ಕುಂಭರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಯವಾಗುತ್ತದೆ. ಮುಂದಿನ‌ ದಿನದ ಬಗ್ಗೆ ಸರಿಯಾದ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ ‌

ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ನಿಮಗೆ ತಿಳಿಯದಂತೆ ಕೆಲವು ಘಟನೆಗಳು ನಡೆಯಬಹುದು‌. ಆದರೆ ಭಗವಂತನ ಆಶೀರ್ವಾದದಿಂದ ಎಲ್ಲವನ್ನು ನೀವು ಗಳಿಸಬಹುದು.