ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Tips: ಸ್ನಾನದ ನಂತರ ಈ ತಪ್ಪುಗಳನ್ನು ಮಾಡಬೇಡಿ ಅನ್ನುತ್ತದೆ ವಾಸ್ತು ಶಾಸ್ತ್ರ

ಸ್ನಾನದ ನಂತರ ಮಾಡುವ ಕೆಲವು ಸಾಮಾನ್ಯ ಅಭ್ಯಾಸಗಳು ವಾಸ್ತು ಪ್ರಕಾರ ಅಶುಭ ಪರಿಣಾಮಗಳನ್ನು ಉಂಟುಮಾಡಬಹುದು. ಕನ್ನಡಿಯಲ್ಲಿ ತಕ್ಷಣ ನೋಡುವುದು, ಕಸ ಗುಡಿಸುವುದು, ತಾಮಸಿಕ ಆಹಾರ ಸೇವನೆ ಮತ್ತು ಮಲಗುವಂತಹ ಅಭ್ಯಾಸಗಳನ್ನು ತಪ್ಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ.

ಸ್ನಾನದ ನಂತರ ಈ ತಪ್ಪುಗಳು ಬೇಡ!

ವಾಸ್ತು ಶಾಸ್ತ್ರ -

Profile
Sushmitha Jain Mar 29, 2026 8:43 AM

ಬೆಂಗಳೂರು: ವಾಸ್ತು ಶಾಸ್ತ್ರವು (Vastu Tips) ವ್ಯಕ್ತಿಯ ಜೀವನದ ಮೇಲೆ ಪರಿಸರದ ಪ್ರಭಾವವನ್ನು ವಿವರಿಸುವ ಮಹತ್ವದ ಶಾಸ್ತ್ರವಾಗಿದೆ. ಜ್ಯೋತಿಷ್ಯದಂತೆ ಇದು ಕೂಡ ವ್ಯಕ್ತಿಯ ಭವಿಷ್ಯ ಮತ್ತು ಜೀವನದ ದಿಕ್ಕನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮನೆ ನಿರ್ಮಾಣ, ವಸ್ತುಗಳ ಅಳವಡಿಕೆ ಮತ್ತು ದಿಕ್ಕುಗಳ ಪ್ರಭಾವದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಬಹುದು ಎಂದು ವಾಸ್ತು ಹೇಳುತ್ತದೆ. ವಿಶೇಷವಾಗಿ, ದಿನಚರಿಯಲ್ಲಿನ ಕೆಲವು ಅಭ್ಯಾಸಗಳು ಕೂಡ ಜೀವನದ ಮೇಲೆ ಪರಿಣಾಮ ಬೀರುತ್ತವೆ.

ಅದರಲ್ಲೂ ಸ್ನಾನ ಮಾಡಿದ ನಂತರ ನಾವು ಮಾಡುವ ಕೆಲ ಕಾರ್ಯಗಳು ಶುಭಕರವಲ್ಲ ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ. ಸಾಮಾನ್ಯವಾಗಿ ಜನರು ಸ್ನಾನದ ಬಳಿಕ ತಮ್ಮ ದಿನದ ಕೆಲಸಗಳನ್ನು ಪ್ರಾರಂಭಿಸುತ್ತಾರೆ. ಆದರೆ ಕೆಲವೊಂದು ಅಭ್ಯಾಸಗಳು ಅಜಾಗರೂಕವಾಗಿ ನಕಾರಾತ್ಮಕ ಪರಿಣಾಮಗಳನ್ನುಂಟುಮಾಡಬಹುದು. ಹೀಗಾಗಿ, ಸ್ನಾನವಾದ ತಕ್ಷಣ ಯಾವ ಕಾರ್ಯಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಚಿಕ್ಕ ಚಿಕ್ಕ ಬದಲಾವಣೆಗಳು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ, ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡಲು ಸಹಾಯಕವಾಗಬಹುದು.

ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ ಸಲಹೆಯಂತೆ(Vastu Tips) ಸ್ನಾನದ ನಂತರ ಮಾಡಬಾರದ ಪ್ರಮುಖ ತಪ್ಪುಗಳು ಯಾವುವು ಎಂದು ನೋಡೋಣ:

ಕನ್ನಡಿಯನ್ನು ತಕ್ಷಣ ನೋಡುವುದು:

ಸ್ನಾನ ಮಾಡಿದ ತಕ್ಷಣ ಕನ್ನಡಿಯನ್ನು ನೋಡುವುದು ಬಹಳ ಸಾಮಾನ್ಯ ಅಭ್ಯಾಸ. ಆದರೆ ವಾಸ್ತು ಪ್ರಕಾರ ಇದು ಶುಭಕರವಲ್ಲ. ಸ್ನಾನದ ನಂತರ ಮೊದಲು ದೇವರ ದರ್ಶನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. ನಂತರ ಕನ್ನಡಿಯಲ್ಲಿ ಮುಖ ನೋಡಬಹುದು. ತಕ್ಷಣ ಕನ್ನಡಿಯನ್ನು ನೋಡಿದರೆ ಚಂದ್ರ ಮತ್ತು ಶುಕ್ರ ಗ್ರಹಗಳ ನಕಾರಾತ್ಮಕ ಪರಿಣಾಮಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ. ಇದರಿಂದ ಜೀವನದಲ್ಲಿ ಪ್ರಗತಿ ನಿಧಾನವಾಗಿ, ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಮನೆ ಗುಡಿಸುವುದು

ಸ್ನಾನವಾದ ನಂತರ ಮನೆಯಲ್ಲಿನ ಕಸವನ್ನು ಸ್ವೀಪ್ ಮಾಡುವುದೂ ಒಳ್ಳೆಯದು ಅಲ್ಲ. ಈ ಅಭ್ಯಾಸದಿಂದ ಮನೆಯ ಶುದ್ಧತೆ ಮತ್ತು ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗುತ್ತದೆ. ಇದರಿಂದ ಆರ್ಥಿಕ ಅಡೆತಡೆಗಳು ಹಾಗೂ ಕುಟುಂಬದಲ್ಲಿ ಅಸಮಾಧಾನ ಉಂಟಾಗಬಹುದು. ಆದ್ದರಿಂದ ಯಾವುದೇ ಕೆಲಸ ಮಾಡುವಾಗ ಶುದ್ಧತೆಗೆ ಮಹತ್ವ ನೀಡುವುದು ಅಗತ್ಯ.

ತಾಮಸಿಕ ಆಹಾರ ಸೇವನೆ:

ಹಾಗೆಯೇ ಸ್ನಾನದ ನಂತರ ತಕ್ಷಣ ತಾಮಸಿಕ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಮಾಂಸಾಹಾರ, ಹಳಸಿದ ಅಥವಾ ಹೆಚ್ಚು ಪ್ರೊಸೆಸ್ಡ್ ಆಹಾರ ದೇಹದಲ್ಲಿ ಆಲಸ್ಯವನ್ನು ಹೆಚ್ಚಿಸುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಕೂಡ ಈ ಸಂದರ್ಭದಲ್ಲಿ ಸೇವಿಸುವುದನ್ನು ವಾಸ್ತು ನಿರುತ್ಸಾಹಿಸುತ್ತದೆ. ಇವು ರಾಹು-ಕೇತುಗಳ ಪ್ರಭಾವವನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ಇದೆ.

Vastu Tips: ಅಡುಗೆಮನೆಯ ವಾಸ್ತು ನಿಯಮಗಳು: ಆರೋಗ್ಯ, ಸಮೃದ್ಧಿಗೆ ಈ ಸರಳ ಟಿಪ್ಸ್ ಪಾಲಿಸಿ

ತಕ್ಷಣ ಮಲಗುವುದು:

ಸ್ನಾನವಾದ ತಕ್ಷಣ ಮಲಗುವ ಅಭ್ಯಾಸವೂ ಉತ್ತಮವಲ್ಲ. ವಿಶೇಷವಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ದೇಹದ ಶಕ್ತಿಯ ಹರಿವನ್ನು ಕುಂದಿಸಿ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ಚಂದ್ರ ಮತ್ತು ಗುರುವಿನ ಕೆಟ್ಟ ಪರಿಣಾಮಗಳನ್ನೂ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಮನೆ ಅಥವಾ ಅಡುಗೆಮನೆ ಸ್ವಚ್ಛಗೊಳಿಸುವುದು:

ಇನ್ನು ಕೆಲವರು ಸ್ನಾನದ ನಂತರ ಮನೆ ಅಥವಾ ಅಡುಗೆಮನೆಯನ್ನು ಸ್ವಚ್ಛಗೊಳಿಸುವ ಅಭ್ಯಾಸ ಹೊಂದಿರುತ್ತಾರೆ. ಪಾತ್ರೆ ತೊಳೆಯುವುದು ಅಥವಾ ಮನೆ ಶುಚಿಗೊಳಿಸುವುದು ಕೂಡ ಆ ಸಮಯದಲ್ಲಿ ತಪ್ಪಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, ಸ್ನಾನದ ನಂತರ ಈ ರೀತಿಯ ಕೆಲವು ಅಭ್ಯಾಸಗಳನ್ನು ಬದಲಾಯಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಜೀವನದಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.