ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಮಂಗಳವಾರ ಸಂಕಟಮೋಚನ ಹನುಮಂತನ ಈ ಮಂತ್ರಗಳನ್ನ ಪಠಿಸಿದ್ರೆ ಶನಿ ದೋಷ ನಿವಾರಣೆಯಾಗುತ್ತದೆ

ಹಿಂದೂ ಧರ್ಮದ ಪುರಾಣಗಳ ಪ್ರಕಾರ ಹನುಮಂತನು ಎಂಟು ಚಿರಂಜೀವಿಗಳಲ್ಲಿ ಒಬ್ಬನಾಗಿದ್ದು, ಈ ದಿನ ಅವನನ್ನು ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಹನುಮಾನ್ ಪೂಜೆ ಹಾಗೂ ಮಂತ್ರ ಪಠಣದಿಂದ ನಕಾರಾತ್ಮಕ ಶಕ್ತಿಗಳ ನಿವಾರಣೆ, ಆರೋಗ್ಯ ಸುಧಾರಣೆ ಮತ್ತು ಶನಿಗ್ರಹದ ವಕ್ರ ದೃಷ್ಟಿಯಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ

ಹನುಮಾನ್

ಬೆಂಗಳೂರು: ಆಂಜನೇಯ (Anjaneya) ಸ್ವಾಮಿ ಧೈರ್ಯ, ಭಕ್ತಿ ಹಾಗೂ ನಿಷ್ಠೆಯ ಪ್ರತೀಕವಾಗಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಹನುಮಂತನ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮಂಗಳವಾರವನ್ನು ಭಗವಾನ್ ರಾಮನ ಮಹಾನ್ ಭಕ್ತನಾದ ಆಂಜನೇಯ ಸ್ವಾಮಿಗೆ ಸಮರ್ಪಿಸಲಾಗಿದೆ. ಹಿಂದೂ ಧರ್ಮದ(Hindu Religion) ಪುರಾಣಗಳ ಪ್ರಕಾರ ಹನುಮಂತನು ಎಂಟು ಚಿರಂಜೀವಿಗಳಲ್ಲಿ ಒಬ್ಬನಾಗಿದ್ದು, ಈ ದಿನ ಅವನನ್ನು ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಹನುಮಾನ್ ಪೂಜೆ ಹಾಗೂ ಮಂತ್ರ ಪಠಣದಿಂದ ನಕಾರಾತ್ಮಕ ಶಕ್ತಿಗಳ ನಿವಾರಣೆ, ಆರೋಗ್ಯ ಸುಧಾರಣೆ ಮತ್ತು ಶನಿಗ್ರಹದ ವಕ್ರ ದೃಷ್ಟಿಯಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಹಾಗಾದರೆ, ಜ್ಯೋತಿಷ್ಯ ಶಾಸ್ತ್ರ (Astro Tips) ಪ್ರಕಾರ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಲು ಯಾವ ಮಂತ್ರಗಳನ್ನು(Manthra) ಪಠಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹನುಮಾನ್ ಗಾಯತ್ರಿ ಮಂತ್ರ

ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ
ತನ್ನೋ ಹನುಮಾನ್ ಪ್ರಚೋದಯಾತ್

ಈ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಭಯ, ಆತಂಕವನ್ನು ದೂರಮಾಡಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಗೂ ಮಾನಸಿಕ ಬಲವನ್ನು ಹೆಚ್ಚಿಸುವಲ್ಲಿ ಇದು ಸಹಾಯಕವಾಗಿದೆ.

ಹನುಮಾನ್ ಮೂಲ ಮಂತ್ರ

ಓಂ ಶ್ರೀ ಹನುಮತೇ ನಮಃ

ಹನುಮಾನ್ ಮಂತ್ರಗಳಲ್ಲಿ ಇದು ಬಹಳ
ಸರಳ ಮಂತ್ರವಾಗಿದ್ದು, ಅತ್ಯಂತ ಶಕ್ತಿಶಾಲಿಯಾಗಿರುವ ಈ ಮಂತ್ರವನ್ನು ಪ್ರತಿದಿನ ಪಠಿಸಿದ್ದರೆ ಯಶಸ್ಸು ಸಿಗಲಿದೆ. ಜೊತೆಗೆ ಆರೋಗ್ಯ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಈ ಮಂತ್ರವನ್ನು ಜಪಿಸುವುದು ಉತ್ತಮ ಎಂದು ನಂಬಲಾಗಿದೆ.

Astro Tips: ನಿಮ್ಮ ಮನೆಯಲ್ಲಿ ತುಳಸಿ ಇದ್ಯಾ, ಹಾಗಾದ್ರೆ ಪ್ರತಿದಿನ ಹೀಗೆ ಮಾಡಿ; ಮನೆಯ ಸಂಪತ್ತು ವೃದ್ಧಿಯಾಗಲು ಶುರುವಾಗುತ್ತೆ!


ಹನುಮಾನ್ ಚಾಲೀಸಾದ ಈ ಸಾಲು

ಜೈ ಹನುಮಾನ್ ಜ್ಞಾನ ಗುಣ ಸಾಗರ್
ಜೈ ಕಪೀಸ ತಿಹುಂ ಲೋಕ ಉಜಾಗರ
ಈ ಸಾಲುಗಳನ್ನು ಭಕ್ತಿಯಿಂದ ಪಠಿಸಿದರೆ ಅದೃಷ್ಟ ಹಾಗೂ ಸಮೃದ್ಧಿ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ, ವೃತ್ತಿ ಹಾಗೂ ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.


ಹನುಮಾನ್ ಬೀಜ ಮಂತ್ರ

ಓಂ ಐಂಗ್ ಹ್ರಿಂಗ್ ಹನುಮತೇ ರಾಮದೂತಾಯ ಲಂಕಾವಿಧ್ವಂಸನಾಯ
ಅಂಜನಿ ಗರ್ಭ ಸಂಭೂತಾಯ ಶಾಕಿನಿ ಡಾಕಿನಿ ವಿಧ್ವಂಸನಾಯ
ಕಿಲಿಕಿಲಿ ಬೂಬುಕರೇನ್ ವಿಭೀಷಣಾಯ ಹನುಮದ್ದೇವಾಯ
ಓಂ ಹ್ರಿಂಗ್ ಶ್ರೀ ಹ್ರಿಂಗ್ ಓಂ
ಈ ಬೀಜ ಮಂತ್ರವನ್ನು ಪಠಿಸುವುದರಿಂದ ಮಾನಸಿಕ ಒತ್ತಡ, ಖಿನ್ನತೆ ಹಾಗೂ ನಕಾರಾತ್ಮಕ ಚಿಂತನೆಗಳಿಂದ ಮುಕ್ತಿ ದೊರೆಯಲಿದ್ದು, ಜೀವನದಲ್ಲಿ ಸಕಾರಾತ್ಮಕತೆ ಹಾಗೂ ಶಾಂತಿಯನ್ನು ತರುವಲ್ಲಿ ಇದು ಸಹಕಾರಿಯಾಗಿದೆ.

ಆಂಜನೇಯ ಮಂತ್ರ

ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ
ಹನುಮಂತನ ಶಕ್ತಿ ಹಾಗೂ ಆಶೀರ್ವಾದವನ್ನು ಪಡೆಯಲು ಈ ಮಂತ್ರ ಅತ್ಯಂತ ಪರಿಣಾಮಕಾರಿ. ವಿದ್ಯಾರ್ಥಿಗಳು ಉತ್ತಮ ಏಕಾಗ್ರತೆಗಾಗಿ, ಉದ್ಯೋಗಸ್ಥರು ವೃತ್ತಿ ಸಮಸ್ಯೆಗಳ ನಿವಾರಣೆಗೆ ಈ ಮಂತ್ರವನ್ನು ಪಠಿಸಬಹುದು. ವಿಶೇಷವಾಗಿ ಮಂಗಳವಾರದಂದು 11 ಬಾರಿ ಜಪಿಸುವುದರಿಂದ ಹೆಚ್ಚಿನ ಫಲ ಸಿಗುತ್ತದೆ ಎನ್ನಲಾಗುತ್ತದೆ.