ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: Astro Tips: ನಿಮ್ಮ ಮನೆಯಲ್ಲಿ ತುಳಸಿ ಇದ್ಯಾ, ಹಾಗಾದ್ರೆ ಪ್ರತಿದಿನ ಹೀಗೆ ಮಾಡಿ; ಮನೆಯ ಸಂಪತ್ತು ವೃದ್ಧಿಯಾಗಲು ಶುರುವಾಗುತ್ತೆ!

ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ವಿಶೇಷ ಆಚರಣೆಗಳನ್ನು ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ವಿಶೇಷವಾಗಿ ಗುರುವಾರ ಮತ್ತು ಶುಕ್ರವಾರ ಈ ಕಾರ್ಯಗಳನ್ನು ಮಾಡುವುದರಿಂದ ಹೆಚ್ಚಿನ ಫಲಿತಾಂಶ ದೊರೆಯುತ್ತದೆ. ಆದರೂ ಇತರೆ ಮಂಗಳಕರ ದಿನಗಳಲ್ಲಿಯೂ ಈ ಪೂಜೆಗಳನ್ನು ನೆರವೇರಿಸಬಹುದು. ವಿಷ್ಣು ಹಾಗೂ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ತುಳಸಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ತಪ್ಪದೆ ಅನುಸರಿಸಬೇಕು.

ತುಳಸಿಗೆ ಪ್ರತಿದಿನ ತುಪ್ಪದ ದೀಪ ಹಚ್ಚಿ; ಲಕ್ಷ್ಮೀ ದೇವಿ ಒಲಿಯುತ್ತಾಳೆ

ತುಳಸಿ -

Profile
Sushmitha Jain Dec 29, 2025 8:12 AM

ಬೆಂಗಳೂರು: ತುಳಸಿ ಗಿಡವು (Tulsi Plant) ಹಿಂದೂ ಧರ್ಮದಲ್ಲಿ (Hindu Religion) ಅತ್ಯಂತ ಪವಿತ್ರ ಹಾಗೂ ಪೂಜ್ಯವಾದ ಸಸ್ಯವಾಗಿದ್ದು, ಇದನ್ನು ತಾಯಿ ಲಕ್ಷ್ಮಿಯ (Godess Lakshmi) ಅವತಾರವೆಂದು ಭಕ್ತರು ಆರಾಧಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರಗಳ(Astro Tips) ಪ್ರಕಾರ, ಮನೆಯಲ್ಲಿ ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ತುಳಸಿ ಪೂಜಿಸುವುದರಿಂದ ಮನೆಯಲ್ಲಿ ಧನಸಮೃದ್ಧಿ ಆಗುತ್ತದೆ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಜೀವನದಲ್ಲಿನ ಅನೇಕ ಅಡೆತಡೆಗಳು ನಿವಾರಣೆಯಾಗುತ್ತವೆ. ಇದರಿಂದ ಮನೆಯಲ್ಲಿ ಸದಾ ಶಾಂತಿ, ಸಂತೋಷ ಮತ್ತು ಸೌಹಾರ್ದತೆ ನೆಲೆಸುತ್ತದೆ.

ಇದರೊಂದಿಗೆ ತುಳಸಿಗೆ ಸಂಬಂಧಿಸಿದ ಕೆಲವು ವಿಶೇಷ ಆಚರಣೆಗಳನ್ನು ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ವಿಶೇಷವಾಗಿ ಗುರುವಾರ ಮತ್ತು ಶುಕ್ರವಾರ ಈ ಕಾರ್ಯಗಳನ್ನು ಮಾಡುವುದರಿಂದ ಹೆಚ್ಚಿನ ಫಲಿತಾಂಶ ದೊರೆಯುತ್ತದೆ. ಆದರೂ ಇತರೆ ಮಂಗಳಕರ ದಿನಗಳಲ್ಲಿಯೂ ಈ ಪೂಜೆಗಳನ್ನು ನೆರವೇರಿಸಬಹುದು. ವಿಷ್ಣು ಹಾಗೂ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ತುಳಸಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ತಪ್ಪದೇ ಅನುಸರಿಸಬೇಕು.

ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತೆ, ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಶುಭಕರ. ಇದರಿಂದ ತುಳಸಿ ದೇವಿ ಸಂತುಷ್ಟಳಾಗುತ್ತಾಳೆ ಮತ್ತು ಮನೆಯಲ್ಲಿ ತಾಯಿ ಲಕ್ಷ್ಮಿಯ ವಾಸವಾಗುತ್ತದೆ ಎಂದು ನಂಬಲಾಗುತ್ತದೆ. ಇದರ ಫಲವಾಗಿ ಸಂಪತ್ತಿನ ವೃದ್ಧಿಯಾಗುತ್ತದೆ ಹಾಗೂ ಗ್ರಹದೋಷಗಳಿಂದ ಉಂಟಾಗುವ ತೊಂದರೆಗಳು ಕೂಡ ಕಡಿಮೆಯಾಗುತ್ತವೆ.

Astro Tips: ನಿಮ್ಮ ಮೇಲೆ, ಮಕ್ಕಳ ಮೇಲೆ ಕೆಟ್ಟ ದೃಷ್ಟಿ ತಾಗಿದೆಯೇ; ಹಾಗಾದ್ರೆ ಈ ಪರಿಹಾರ ಮಾಡಿ

ಹಿಂದೂ ಪಂಚಾಂಗದ ಪ್ರಕಾರ, ಪ್ರತೀ ತಿಂಗಳ ಎರಡೂ ಏಕಾದಶಿ ದಿನಗಳಲ್ಲಿ ಸುಮಂಗಲಿತನದ ಪ್ರತೀಕವಾದ ಹರಿಶಿನ, ಕುಂಕುಮ ಇತ್ಯಾದಿ ವಸ್ತುಗಳನ್ನು ತುಳಸಿ ಗಿಡಕ್ಕೆ ಅರ್ಪಿಸುವುದು ಮಂಗಳಕರವೆಂದು ಹೇಳಲಾಗಿದೆ. ಹೀಗೆ ಬಳೆಗಳು, ಬಿಂದಿ, ಹೂವುಗಳು ಹಾಗೂ ಕುಂಕುಮವನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರ ಆಸೆಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆಯಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ಪಂಚಮಿ ತಿಥಿಯಂದು ತುಳಸಿ ಗಿಡಕ್ಕೆ ನೀರಿನೊಂದಿಗೆ ಕಬ್ಬಿನ ರಸವನ್ನು ಅರ್ಪಿಸಬೇಕು. ಈ ಪರಿಹಾರ ಕ್ರಮವನ್ನು ಪಾಲಿಸುವುದರಿಂದ ಮನೆಗೆ ಸದಾ ಐಶ್ವರ್ಯ, ಸಂತೋಷ ಮತ್ತು ಶಾಂತಿ ಲಭಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಜೊತೆಗೆ ಜೀವನದಲ್ಲಿನ ವಿವಿಧ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

ಜೀವನದಲ್ಲಿ ಸುಖ ಮತ್ತು ನೆಮ್ಮದಿ ನೆಲೆಸಲು, ಮನೆಯಲ್ಲಿ ವಿಧಿವಿಧಾನಗಳೊಂದಿಗೆ ತುಳಸಿ ಪೂಜೆಯನ್ನು ನೆರವೇರಿಸಬೇಕು. ಪೂಜೆಯ ನಂತರ ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಅರ್ಪಿಸುವುದರಿಂದ ಗಿಡವು ಆರೋಗ್ಯಕರವಾಗಿ ಬೆಳೆಯುತ್ತದೆ ಎನ್ನುವ ನಂಬಿಕೆಯಿದೆ. ಇದರ ಮೂಲಕ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸಿ, ಕುಟುಂಬದಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ.

ತುಳಸಿ ಗಿಡಕ್ಕೆ ಹಸಿ ಹಾಲನ್ನು ಅರ್ಪಿಸುವುದು ಕೂಡ ಅತ್ಯಂತ ಶುಭಕರವಾಗಿದ್ದು, ಸಾಮಾನ್ಯವಾಗಿ ಗುರುವಾರ ಹಾಗೂ ಶುಕ್ರವಾರ ಹಾಲು ಅರ್ಪಿಸುವುದು ಒಳಿತು ಎಂದು ಹೇಳಲಾಗುತ್ತದೆ. ಜೊತೆಗೆ ಏಕಾದಶಿಯಂದು ತುಳಸಿಗೆ ಹಾಲು ಹಾಕಿದರೂ ಉತ್ತಮ ಫಲಿತಾಂಶ ದೊರೆಯುತ್ತದೆ. ಇದರಿಂದ ದುರಾದೃಷ್ಟ ದೂರವಾಗಿ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅಲ್ಲದೆ ತುಳಸಿ ಗಿಡಕ್ಕೆ ಸದಾ ಕಲವಾ ದಾರವನ್ನು ಕಟ್ಟುವುದೂ ಮಂಗಳಕರವೆಂದು ಪರಿಗಣಿಸಲಾಗಿದೆ.