Astro Tips: ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿದೆಯೇ? ಹಾಗಾದ್ರೆ ಮಂಗಳವಾರ ಹೀಗೆ ಉಪವಾಸ ವ್ರತ ಮಾಡಿ
ಮಂಗಳವಾರದ ಉಪವಾಸವನ್ನು ಭಕ್ತರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಪುರುಷರೂ, ಮಹಿಳೆಯರೂ ಸಮಾನವಾಗಿ ಈ ವ್ರತವನ್ನು ಮಾಡಬಹುದು. ಸಂತಾನಲಾಭದ ಆಶಯವಿರುವ ದಂಪತಿಗಳು, ಸಂತಾನಪ್ರಾಪ್ತಿ ಪಡೆಯಲು ಬಯಸುವವರು ಹಾಗೂ ದುಷ್ಟ ಪ್ರಭಾವಗಳಿಂದ ಮುಕ್ತಿ ಬೇಕಿರುವವರು ಈ ಉಪವಾಸವನ್ನು ಆಚರಿಸುವುದು ಶ್ರೇಷ್ಠ ಎನ್ನಲಾಗುತ್ತದೆ.
ಹನುಮಾನ್ -
ಬೆಂಗಳೂರು: ಮಂಗಳವಾರದ ಉಪವಾಸವನ್ನು(Tuesday Fasting) ಸಾಮಾನ್ಯವಾಗಿ ಭಗವಾನ್ ಹನುಮನಿಗೆ (Hanumantha) ಅರ್ಪಿಸಲಾಗುತ್ತದೆ. ರಾಮನ ಪರಮಭಕ್ತನಾದ ಹನುಮಂತನು ಅತ್ಯಂತ ತೇಜಸ್ವಿ ಮತ್ತು ಅಜೇಯಶಕ್ತಿಯ ಸಂಕೇತ. ಈ ಕಾರಣದಿಂದಲೇ ಮಂಗಳವಾರದ ಉಪವಾಸವನ್ನು ಭಕ್ತರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಪುರುಷರೂ, ಮಹಿಳೆಯರೂ ಸಮಾನವಾಗಿ ಈ ವ್ರತವನ್ನು ಮಾಡಬಹುದು. ಸಂತಾನಲಾಭದ ಆಶಯವಿರುವ ದಂಪತಿಗಳು, ಸಂತಾನಪ್ರಾಪ್ತಿ ಪಡೆಯಲು ಬಯಸುವವರು ಹಾಗೂ ದುಷ್ಟ ಪ್ರಭಾವಗಳಿಂದ ಮುಕ್ತಿ ಬೇಕಿರುವವರು ಈ ಉಪವಾಸವನ್ನು ಆಚರಿಸುವುದು ಶ್ರೇಷ್ಠ ಎನ್ನಲಾಗುತ್ತದೆ.
ಯಾರ ಮೇಲೆ ಶತ್ರುಗಳ ಪ್ರಾಬಲ್ಯ ಹೆಚ್ಚಿದೆಯೋ, ಸಾಲದ ಒತ್ತಡದಲ್ಲಿ ಇದ್ದರೋ, ಕೆಲಸ–ವ್ಯವಹಾರದಲ್ಲಿ ಅಡಚಣೆಗಳು ಎದುರಾಗುತ್ತಿದೆಯೋ, ಆರೋಗ್ಯ ಸಮಸ್ಯೆಗಳು ಕಾಡುತ್ತಿದೆಯೋ ಅಂತವರು ಮಂಗಳವಾರ ಉಪವಾಸವನ್ನು ಆಚರಿಸುವುದು ಪರಿಣಾಮಕಾರಿ ಎಂದು ಜ್ಯೋತಿಷ್ಯಶಾಸ್ತ್ರ(Astro Tips) ಹೇಳುತ್ತದೆ. ಮಂಗಳವಾರವು ಮಂಗಳ ಗ್ರಹಕ್ಕೆ ಸಮರ್ಪಿತ ದಿನವಾಗಿದ್ದು, ಭೂಮಿ, ಆಸ್ತಿ, ಶಕ್ತಿ ಮತ್ತು ಶೌರ್ಯ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಹೀಗಾಗಿ ಮಂಗಳಗ್ರಹದ ಕೃಪೆ ಪಡೆಯಲು ಈ ಉಪವಾಸ ಅನುಕೂಲಕರ.
ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಈ ವಿಗ್ರಹಗಳನ್ನು ಮನೆಗೆ ತಂದು ಇಡಿ
ಈ ಉಪವಾಸವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಚರಿಸಬೇಕು. ಬೆಳಗಿನ ಜಾವ ಸ್ನಾನ ಮಾಡಿದ ಬಳಿಕ ಗಣೇಶ ಪೂಜೆ ಮಾಡಿ, ನಂತರ ಹನುಮದೇವರನ್ನು ಆರಾಧಿಸುವುದು ಮುಖ್ಯ. ಕೆಂಪು ಬಣ್ಣದ ವಸ್ತ್ರ ತೊಡುವುದು ಮತ್ತು ಪೂಜೆಯಲ್ಲಿ ಕೆಂಪು ಹೂವನ್ನು ಅರ್ಪಿಸುವುದು ಶುಭಕರವಾಗಿ ಪರಿಗಣಿಸಲಾಗಿದೆ. ದಿನವಿಡೀ ಹನುಮಾನ್ ಚಾಲೀಸಾ, ಮಂಗಳವಾರ ವ್ರತಕತೆ ಹಾಗೂ ಸಂಕಟಮೋಚನ ಅಷ್ಟಕ ಪಠಿಸುವುದು ಬಹಳ ಫಲಕಾರಕ. ಸಂಜೆ ಪೂಜೆಯ ನಂತರ ಬೆಲ್ಲ ಮತ್ತು ಗೋಧಿ ಸೇರಿದ ಒಂದೇ ಬಾರಿಯ ಉಪವಾಸದಾಹಾರ ಸೇವಿಸಬಹುದು. ಆದರೆ ಇಂದು ಉಪ್ಪನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಉಪವಾಸದ ಪ್ರಯೋಜನ:
ವಿರೋಧಿಗಳ, ಶತ್ರುಗಳ ಮೇಲೆ ಜಯ ಸಾಧಿಸಲು, ವ್ಯವಹಾರದಲ್ಲಿ ಯಶಸ್ಸು, ಆರೋಗ್ಯದ ಸುಧಾರಣೆ, ದುಷ್ಟಶಕ್ತಿಯಿಂದ ರಕ್ಷಣಾ, ಮಂಗಳದೋಷ ನಿವಾರಣೆ ಆಗುವುದರ ಜೊತೆ ಹಾಗೂ ಆತ್ಮಶಕ್ತಿಯ ವೃದ್ಧಿ ಆಗುತ್ತದೆ.
‘ಮಂಗಳವಾರ’ ಎಂಬ ಹೆಸರೇ ಮಂಗಳ ಗ್ರಹದಿಂದ ಬಂದಿದ್ದು, ಈ ದಿನದ ವ್ರತವನ್ನು ಮಂಗಲ್ವಾರ್ ವ್ರತ ಎಂದು ಕರೆಯುತ್ತಾರೆ. ವಿಶೇಷವಾಗಿ ಸಂತಾನಕಾಂಕ್ಷೆಯುಳ್ಳ ದಂಪತಿಗಳು ಒಟ್ಟಿಗೆ ವ್ರತ ಮಾಡಿದರೆ ಶುಭಫಲ ದೊರೆಯುತ್ತದೆ ಎಂದು ನಂಬಲಾಗಿದೆ.
ಈ ಉಪವಾಸವನ್ನು 21 ವಾರಗಳ ಕಾಲ ನಿರಂತರವಾಗಿ ಮಾಡಿದರೆ ಅತ್ಯುತ್ತಮ ಫಲ ಸಿಗುತ್ತದೆ. ಉಪವಾಸದ ಅವಧಿಯಲ್ಲಿ ಹನುಮದೇವರ ಬಲ ನೀಡುವ ಬೀಜಮಂತ್ರವನ್ನು ಜಪಿಸುವುದು ಶ್ರೇಷ್ಠ:
“ಓಂ ಈಂ ಭ್ರೀಂ ಹನುಮತೇ ಶ್ರೀರಾಮದೂತಾಯ ನಮಃ”
ಇದರ ಜೊತೆ “ಓಂ ಶ್ರೀ ಹನುಮತೇ ನಮಃ”
ಅಥವಾ
“ಹಂಗ್ ಪವನ ನಂದನಾಯೇ ಸ್ವಾಹಾ”
ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಬಹುದು.
ನೀವು ಗಂಭೀರ ಕಾಯಿಲೆ, ದುಷ್ಟಶಕ್ತಿಗಳ ಕಾಟ ಅಥವಾ ಆತಂಕ–ಭಯ ಇದ್ದಲ್ಲಿ, ಕೆಳಗಿನ ಮಂತ್ರವನ್ನು 1008 ಬಾರಿ ಜಪಿಸುವುದು ರಕ್ಷಣಾಕವಚದಂತೆ ಕೆಲಸ ಮಾಡುತ್ತದೆ:
“ಓಂ ನಮೋ ಭಗವತೆ ಆಂಜನೇಯಾಯ ಮಹಾಬಲಾಯ ಸ್ವಾಹಾ”
ಈ ಮಂತ್ರವನ್ನು ಜಪಿಸುವುದರಿಂದ ಭೂತ–ಪ್ರೇತ, ನಕಾರಾತ್ಮಕ ಶಕ್ತಿಗಳ ಅಥವಾ ದೆವ್ವಗಳ ಪ್ರಭಾವ ನಿಮ್ಮ ಮೇಲೆ ಬೀಳುವುದಿಲ್ಲ ಎಂಬ ನಂಬಿಕೆ ಇದೆ. ಮಕ್ಕಳಿಗೆ ಬರುವ ದುಃಸ್ವಪ್ನಗಳು, ಭಯಭೀತ ಮನೋಭಾವ, ಸಾಡೆಸ್‌ಸಾತಿಯಿಂದ ಬರುತ್ತಿರುವ ಸಂಕಟಗಳು ಮುಂತಾದವುಗಳಿಂದ ಇದು ರಕ್ಷಣೆ ನೀಡುತ್ತದೆ. ಹನುಮದೇವರನ್ನು ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ, ಅವರ ಭಕ್ತರ ಕಷ್ಟಗಳನ್ನು ನಿವಾರಿಸಲು ಹನುಮಂತನು ಸ್ವತಃ ನೆರವಿಗೆ ಬರುತ್ತಾನೆ ಎಂಬ ನಂಬಿಕೆ ಇದೆ. ದುಷ್ಟ ಪ್ರಭಾವಗಳಿಂದ ಮುಕ್ತಿ ಬೇಕಿರುವವರು ಈ ಉಪವಾಸವನ್ನು ಆಚರಿಸುವುದು ಶ್ರೇಷ್ಠ ಎನ್ನಲಾಗುತ್ತದೆ.