ಬೆಂಗಳೂರು: ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದಕ್ಕೆ ಧರ್ಮಗ್ರಂಥಗಳಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ತುಳಸಿ ಸಸ್ಯವು ಕೇವಲ ಪೂಜಾ ಕಾರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ, ಅದು ಮನೆಯಲ್ಲಿನ ಶಾಂತಿ, ಸುಖ-ದುಃಖ ಮತ್ತು ಭವಿಷ್ಯದ ಸಂಕೇತಗಳೊಂದಿಗೆ ಕೂಡ ಸಂಬಂಧ ಹೊಂದಿದೆ.
ಜ್ಯೋತಿಷ್ಯ ಶಾಸ್ತ್ರ ನಂಬಿಕೆಗಳ(Astro Tips) ಪ್ರಕಾರ, ತುಳಸಿ ರೋಗಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದ್ದು, ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಗಳಿಂದ ಕಾಪಾಡುವ ಪವಿತ್ರ ಸಸ್ಯವಾಗಿದೆ. ಇದರೊಂದಿಗೆ ವಾಸ್ತು ಶಾಸ್ತ್ರದಲ್ಲಿಯೂ ತುಳಸಿ ಗಿಡಕ್ಕೆ ಪ್ರಮುಖ ಸ್ಥಾನವಿದೆ ಎಂದು ಹೇಳಲಾಗುತ್ತದೆ.
ತುಳಸಿ ಗಿಡವು ಮನೆಯ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವುದರ ಜೊತೆಗೆ, ಮುಂಬರುವ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ ಎಂಬ ನಂಬಿಕೆ ಇದೆ.
ಹಾಗಾದ್ರೆ ಭವಿಷ್ಯದ ಕುರಿತು ತುಳಸಿ ಸಸ್ಯ ನೀಡುವ ಶುಭ ಸೂಚನೆ ಯಾವುದು..? ಅಶುಭ ಸೂಚನೆ ಯಾವುದು..? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..
ತುಳಸಿ ಗಿಡ ಒಣಗಿದರೆ ಅಶುಭವೇ..!
ಮನೆಯಲ್ಲಿ ತುಳಸಿ ಗಿಡ ನಿಧಾನವಾಗಿ ಒಣಗಲು ಆರಂಭಿಸಿದರೆ ಅದನ್ನು ನಿರ್ಲಕ್ಷಿಸಬಾರದು. ಇದು ಆರ್ಥಿಕ ನಷ್ಟ ಅಥವಾ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳ ಸಂಕೇತವೆಂದು ಹೇಳಲಾಗುತ್ತದೆ. ಕೆಲವೊಮ್ಮೆ ಇದನ್ನು ಪಿತೃ ದೋಷದ ಸೂಚನೆ ಎಂದೂ ಪರಿಗಣಿಸಲಾಗುತ್ತದೆ. ಹಲವಾರು ಬಾರಿ ನೆಟ್ಟರೂ ಗಿಡ ಮತ್ತೆ ಮತ್ತೆ ಒಣಗುತ್ತಿದ್ದರೆ, ಪೂರ್ವಜರ ಶಾಂತಿಗಾಗಿ ದಾನ-ಧರ್ಮ ಮಾಡುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು ಒಳ್ಳೆಯದು.
ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಒಳ್ಳೆಯದೇ..?
ತುಳಸಿ ಎಲೆಗಳು ಹಠಾತ್ತನೆ ಹಳದಿ ಬಣ್ಣಕ್ಕೆ ಬದಲಾಗುವುದು ಅಶುಭ ಸೂಚನೆ ಎಂದು ನಂಬಲಾಗುತ್ತದೆ. ಇದು ಕೌಟುಂಬಿಕ ಸಮಸ್ಯೆಗಳು ಬರಬಹುದೆಂಬ ಸೂಚನೆ ಆಗಿರಬಹುದು. ಈ ಸಂದರ್ಭದಲ್ಲಿ ಹಳದಿ ಎಲೆಗಳನ್ನು ತೆಗೆದು ಹರಿಯುವ ನೀರಿನಲ್ಲಿ ಬಿಡಬೇಕು. ಜೊತೆಗೆ ಮನೆಯಲ್ಲಿ ಪೂಜೆ, ಪಾರಾಯಣ ಅಥವಾ ಮಹಾಮೃತ್ಯುಂಜಯ ಮಂತ್ರ ಜಪ ಮಾಡುವುದು ಒಳಿತು.
Astro Tips: ಗುರುವಾರ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ!
ತುಳಸಿ ಒಣಗಿದರೆ ಏನಾಗುತ್ತದೆ..?
ತುಳಸಿಯ ಎಲೆಗಳು ಒಣಗಲು ಪ್ರಾರಂಭಿಸಿದರೆ ಅದನ್ನು ತಕ್ಷಣ ತೆಗೆದುಹಾಕಬೇಕು. ಇಲ್ಲವಾದರೆ ಗಿಡದ ಮೇಲೆ ಭಾರ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಇದನ್ನು ಸಾಲ ಅಥವಾ ಒತ್ತಡ ಹೆಚ್ಚುವ ಸಂಕೇತವೆಂದು ಸಹ ಹೇಳುತ್ತಾರೆ. ಒಣಗಿದ ಹೂವನ್ನು ನದಿಯಲ್ಲಿ ಬಿಡಬಹುದು ಅಥವಾ ಒಣಗಿಸಿ ಬೀಜವಾಗಿ ಸಂಗ್ರಹಿಸಬಹುದು.
ತುಳಸಿ ಗಿಡ ಹಸಿರಾಗಿದ್ದರೆ ಏನರ್ಥ..!
ಯಾವ ಮನೆಯಲ್ಲಿ ತುಳಸಿ ಸದಾ ಹಸಿರಾಗಿಯೇ ಇರುತ್ತದೋ, ಆ ಮನೆಯಲ್ಲಿ ಶುಭಶಕ್ತಿಗಳು ನೆಲೆಸಿರುತ್ತವೆ ಎಂದು ನಂಬಿಕೆ. ಶ್ರೀ ಹರಿಯ ಕೃಪೆ, ಲಕ್ಷ್ಮಿ ದೇವಿಯ ಆಶೀರ್ವಾದ ಇರುವ ಮನೆಯ ಸಂಕೇತವಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಅಂತಹ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಕುಟುಂಬದ ಒಗ್ಗಟ್ಟು ಹೆಚ್ಚಾಗುತ್ತದೆ.