Astro Tips: ಗುರುವಾರ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ!
ಗುರುವಾರವು ವಿಷ್ಣು ಮತ್ತು ಬೃಹಸ್ಪತಿ ಪೂಜೆಗೆ ಮಹತ್ವವಾದ ದಿನ. ಈ ದಿನ ಕೆಲವು ಸರಳ ಆಚರಣೆಗಳನ್ನು ಅನುಸರಿಸಿದರೆ ಅದೃಷ್ಟ, ಸಮೃದ್ಧಿ ಮತ್ತು ಮನಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಗುರುವಾರದಂದು ಅದೃಷ್ಟವನ್ನು ಆಕರ್ಷಿಸಲು ನಾವು ಏನು ಮಾಡಬೇಕು..? ಯಾವ ಆಚರಣೆಗಳನ್ನು ಅನುಸರಿಸಿದರೆ ಶುಭಫಲ ದೊರೆಯುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಗುರುವಾರ ಪೂಜೆ -
ಬೆಂಗಳೂರು: ಗುರುವಾರವು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮಹಾವಿಷ್ಣುವಿನ ಆರಾಧನೆ ಹಾಗೂ ನವಗ್ರಹಗಳಲ್ಲಿ ಪ್ರಮುಖನಾದ ದೇವಗುರು ಬೃಹಸ್ಪತಿಯ ಪೂಜೆಗೆ ವಿಶೇಷ ಮಹತ್ವವಿದೆ. ಜಾತಕದಲ್ಲಿ ಬಲವಾದ ಗುರುಗ್ರಹ ಇರುವವರು ಜೀವನದಲ್ಲಿ ಜ್ಞಾನ, ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ಗುರುವಾರವನ್ನು ವಿಷ್ಣುವಿನ ದಿನ ಹಾಗೂ ಬೃಹಸ್ಪತಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಕೆಲವು ಶುಭ ಕಾರ್ಯಗಳನ್ನು ಮಾಡಿದರೆ ಅದೃಷ್ಟ ಹೆಚ್ಚುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಗುರುವಾರದಂದು ಅದೃಷ್ಟವನ್ನು ಆಕರ್ಷಿಸಲು ನಾವು ಏನು ಮಾಡಬೇಕು..? ಯಾವ ಆಚರಣೆಗಳನ್ನು ಅನುಸರಿಸಿದರೆ ಶುಭಫಲ ದೊರೆಯುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಈ ದಿನ ದೇವರಿಗೆ ಪ್ರಿಯವಾದ ಹಳದಿ ಬಣ್ಣಕ್ಕೆ ವಿಶೇಷ ಸ್ಥಾನವಿದ್ದು. ಮನೆಯಿಂದ ಹೊರಡುವಾಗ ಶ್ರೀಗಂಧದ ತಿಲಕವನ್ನು ಹಾಕಿಕೊಳ್ಳುವುದು ಶುಭಕರ. ಅದು ಲಭ್ಯವಿಲ್ಲದಿದ್ದರೆ ಅರಿಶಿನವನ್ನು ಬಳಸಬಹುದು. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಮಾಡುವ ಕೆಲಸಗಳಲ್ಲಿ ಯಶಸ್ಸು ತಂದುಕೊಡುತ್ತದೆ ಎಂಬ ನಂಬಿಕೆ ಇದೆ.
ಈ ದಿನ ಹಳದಿ ಬಣ್ಣದ ವಸ್ತುಗಳು ಅಥವಾ ಆಹಾರ ಪದಾರ್ಥಗಳನ್ನು ದಾನ ಮಾಡುವುದು ಅತ್ಯಂತ ಶುಭಕರ. ಬಡವರು, ಬ್ರಾಹ್ಮಣರು ಅಥವಾ ನಿರ್ಗತಿಕರಿಗೆ ದಾನ ನೀಡುವುದರಿಂದ ಪುಣ್ಯ ಲಭಿಸುತ್ತದೆ ಹಾಗೂ ಜೀವನದಲ್ಲಿ ಸಮೃದ್ಧಿ ಬರುತ್ತದೆ. ಗುರುವಾರ ಉಪವಾಸ ಆಚರಿಸುವುದೂ ಮಹತ್ವದ್ದಾಗಿದೆ. ಬೆಳಿಗ್ಗೆ ಬೇಗ ಎದ್ದು ವಿಷ್ಣುವಿಗೆ ಪೂಜೆ ಸಲ್ಲಿಸಿ ಉಪವಾಸದ ಸಂಕಲ್ಪ ಮಾಡಬೇಕು. ಈ ವ್ರತವು ಮನಶಾಂತಿ ಮತ್ತು ಇಚ್ಛಾಪೂರಣೆಗೆ ಸಹಾಯಕವಾಗುತ್ತದೆ.
ಗುರುವಾರವು ವಿಷ್ಣುವಿನ ದಿನವಾಗಿದ್ದರೂ, ಈ ದಿನ ಶಿವನ ಆರಾಧನೆಗೂ ಮಹತ್ವವಿದೆ. ಶಿವನಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸುವುದರಿಂದ ಉತ್ತಮ ಫಲ ಸಿಗುತ್ತದೆ ಎಂದು ನಂಬಲಾಗಿದೆ.
Astro Tips: ದೇವರಿಗೆ ನಮಸ್ಕಾರ ಮಾಡುವ ಕ್ರಮ ಹೇಗೆ? ಪೂಜೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ನೋಡಿ ಉತ್ತರ
ಬಾಳೆ ಮರವನ್ನು ಪೂಜಿಸುವುದು ಕೂಡ ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇದು ಆರೋಗ್ಯ, ಸಮೃದ್ಧಿ ಮತ್ತು ವಿವಾಹ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಸಹಕಾರಿ ಎಂದು ಹೇಳಲಾಗುತ್ತದೆ. ವಿಶೇಷವಾಗಿ ವಿವಾಹ ವಿಳಂಬವಾಗಿರುವವರು ಈ ಪೂಜೆಯನ್ನು ಮಾಡುವುದು ಉತ್ತಮ. ವಿಷ್ಣುವಿಗೆ ಹಳದಿ ಹೂವಿನ ಹಾರವನ್ನು ಅರ್ಪಿಸುವುದು ಮತ್ತು ಹಳದಿ ಬಟ್ಟೆಗಳನ್ನು ಧರಿಸುವುದು ಶುಭ ಫಲಗಳನ್ನು ನೀಡುತ್ತದೆ. ಈ ಬಣ್ಣವು ಸಂತೋಷ ಮತ್ತು ಧನಾತ್ಮಕ ಶಕ್ತಿಯನ್ನು ಸೂಚಿಸುತ್ತದೆ.
ಪೂಜೆಯ ಸಮಯದಲ್ಲಿ “ಓಂ ನಮೋ ನಾರಾಯಣ” ಮಂತ್ರವನ್ನು ಭಕ್ತಿಯಿಂದ ಜಪಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗೂ ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ.
ಗುರುವಾರ ಲಕ್ಷ್ಮೀ ದೇವಿಯ ಆರಾಧನೆ ಕೂಡ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿ.
ಇನ್ನು ವಿವಾದ ತಡೆತಡೆಗಳನ್ನು ನಿವಾರಿಸಲು ಈ ದಿನದ ಉಪವಾಸವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದ ಪೂಜೆಯಲ್ಲಿ ಹಳದಿ ಹೂವುಗಳು, ಕಡಲೆ ಬೇಳೆ, ಹಳದಿ ಅಕ್ಕಿ, ಸಿಹಿತಿಂಡಿಗಳು ಇತ್ಯಾದಿಗಳನ್ನು ಬಳಸುವುದು ಅತ್ಯಂತ ಶುಭಕರ. ಪೂಜೆಯ ನಂತರ ಬಡವರಿಗೆ ಅನ್ನದಾನ ಮಾಡುವುದು ಪುಣ್ಯಕರವೆಂದು ಪರಿಗಣಿಸಲಾಗುತ್ತದೆ.