ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ಕುಂಭ ರಾಶಿಗೆ ರಾಹುದೆಸೆ ಬೇವಾಗಲಿದೆಯೆ ಅಥವಾ ಬೆಲ್ಲವಾಗಲಿದೆಯೆ?

ಹಿಂದೂಗಳ ಪಾಲಿನ ಹೊಸ ವರ್ಷದ ಯುಗಾದಿ ದಿನದಿಂದಲೇ ಅನೇಕ ರಾಶಿಗಳ ಗ್ರಹಗತಿಗಳ ಮೇಲೆ ಮಹತ್ವದ ಪರಿಣಾಮ ಸಹ ಬೀರಲಿದೆ. ಶನಿ, ರಾಹು, ಕೇತು, ಶುಕ್ರ ಗ್ರಹಗಳ ಸಂಚಲನವು ಕೆಲವು ಗ್ರಹಕ್ಕೆ ಅದೃಷ್ಟ ಒಲಿದು, ಶುಭ ಸಮಾಚಾರ ತಂದರೆ ಇನ್ನು ಕೆಲವು ಗ್ರಹಗಳಿಗೆ ಆಪತ್ತು ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಕುಂಭ ರಾಶಿಯ ಫಲ ಏನಿರಬಹುದು? ಇಲ್ಲಿದೆ ವಿವರ.

ಯುಗಾದಿ ಬಳಿಕ ಕುಂಭ ರಾಶಿಗೆ ಗುರುವಿನ ಬಲ ಒಲಿದು ಬರಲಿದೆಯೇ?

ugadi astrlogy

Profile Pushpa Kumari Mar 30, 2025 9:44 PM

ಬೆಂಗಳೂರು: ಹಿಂದೂ ಪರಂಪರೆಯ ಪವಿತ್ರ ಹಬ್ಬವಾದ ಯುಗಾದಿ ಸನಾತನ ಕಾಲದಿಂದಲೂ ತನ್ನದೆ ಆದ ಪ್ರಾಮುಖ್ಯತೆ ಹೊಂದಿದೆ. ಜೀವನದ ಏರಿಳಿತಗಳನ್ನು ಸಮನಾಗಿ ಕಾಣುವಂತೆ ಸಾರುವುದೆ ಯುಗಾದಿ ಹಬ್ಬದ ವಿಶೇಷತೆ. ಹಿಂದೂಗಳ ಪಾಲಿನ ಹೊಸ ವರ್ಷದ ಯುಗಾದಿ ದಿನದಿಂದಲೇ ಅನೇಕ ರಾಶಿಗಳ ಗ್ರಹಗತಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಶನಿ, ರಾಹು, ಕೇತು, ಶುಕ್ರ ಗ್ರಹಗಳ ಸಂಚಲನವು ಕೆಲವು ಗ್ರಹಕ್ಕೆ ಅದೃಷ್ಟ ಒಲಿದು, ಶುಭ ಸಮಾಚಾರ ತಂದರೆ ಇನ್ನು ಕೆಲವು ಗ್ರಹಗಳಿಗೆ ಆಪತ್ತು ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಕುಂಭ ರಾಶಿಯ (Ugadi Horoscope) ಫಲ ಏನಿರಬಹುದು? ನಿಮ್ಮ ಜೀವನದಲ್ಲಿ ಬದಲಾವಣೆಗಳಿದೆಯ? ಎಷ್ಟು ಒಳಿತು ಕೆಡುಕು ಇದೆ, ಇದಕ್ಕೆ ಪರಿಹಾರ ಕ್ರಮಗಳು ಏನು? ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.



ಆರೋಗ್ಯದ ಕುರಿತು ಕಾಳಜಿ ವಹಿಸಿ

ಕುಂಭ ರಾಶಿ ಅಧಿಪತಿ ಶನಿಯಾಗಿದ್ದು, ಯುಗಾದಿ ನಂತರದ ದಿನದಲ್ಲಿ ಅಷ್ಟೇನು ಶುಭ ಫಲ ಗೋಚರವಾಗಲಾರದು. ಮೇ 13ರ ಬಳಿಕ ರಾಹು ಕುಂಭ ರಾಶಿ ಪ್ರವೇಶ ಮಾಡುವ ಕಾರಣ ಕೆಲವು ಅನಾರೋಗ್ಯ ಸಮಸ್ಯೆ ಕಾಡಲಿದೆ. ಆಹಾರದಲ್ಲಿ ಕೆಲವು ನಿಯಂತ್ರಣಗಳು ಅವಶ್ಯಕ. ಸಾಡೆಸಾತಿಯ ಕೊನೆ ಹಂತದಲ್ಲಿದ್ದು, ಇದು ಮುಗಿಯುವ ಹಂತಕ್ಕೆ ಸಾಕಷ್ಟು ಶುಭ ಸಮಾಚಾರ ಗೋಚರವಾಗುವ ಜತೆಗೆ ಆರೋಗ್ಯ ಸಮಸ್ಯೆ ದೂರಾಗಲಿದೆ.

ಗುರುಬಲ ಇದೆ

ಕುಂಭರಾಶಿ ಅವರಿಗೆ ಯುಗಾದಿಯ ಬಳಿಕ ಗುರುಬಲ ಇದ್ದು ಸಾಕಷ್ಟು ಅನುಗ್ರಹ ಇದೆ. ಕುಂಭರಾಶಿಯಲ್ಲಿ ಇರುವವರಿಗೆ ಗುರುಸ್ಥಾನದಿಂದ ಸಾಕಷ್ಟು ಅನುಗ್ರಹ ಸಿದ್ಧಿಯಾಗಲಿದೆ. ರಾಜಯೋಗದ ಸೌಭಾಗ್ಯ ಕುಂಭ ರಾಶಿ ಪಾಲಿಗೆ ಒಲಿದು ಬರಲಿದೆ. ಶನಿಯಿಂದ ಇಷ್ಟು ದಿನ ಕಷ್ಟ ಅನುಭವಿ ಸಿದ್ದು ಎಲ್ಲವೂ ಮುಕ್ತಾಯವಾಗಿ ಶುಭ ಫಲ ಇರಲಿದೆ. ಪಂಚಮಕ್ಕೆ ಗುರು ಪ್ರವೇಶ ಮಾಡುವ ಕಾರಣ ಮೇ 14ರ ನಂತರ ಒಳ್ಳೆ ಫಲ ಅನುಭವಿಸಲಾಗುವುದು. ಈ ಬಾರಿ ಅನೇಕ ತೀರ್ಥ ಯಾತ್ರೆಗಳನ್ನು ಮಾಡಲು ಪುಣ್ಯ ಕ್ಷೇತ್ರ ಭೇಟಿ ನೀಡುವ ಸೌಭಾಗ್ಯ ಸಿಗಲಿದೆ.

ಸಮಸ್ಯೆ ಬಗೆಹರಿಯಲಿದೆ

ಪಂಚಮದಲ್ಲಿ ಇರುವ ಗುರು ಸ್ವರ್ಣಕಾರಕನಾಗಿದ್ದು ಪಿತ್ರಾರ್ಜಿತ ಗ್ರಹಗಳು ಕೂಡ ಮೋಕ್ಷ ಸಿಗಲಿದೆ. ಅನೇಕ ವರ್ಷದಿಂದ ಬಾಕಿ ಇದ್ದ ಕೋರ್ಟ್ ವ್ಯಾಜ್ಯಗಳು, ಸರಕಾರಿ ಕೆಲಸ ಕಾರ್ಯಗಳು ಯುಗಾದಿ ಬಳಿಕ ಗುರು ದೆಸೆಯಿಂದ ಎಲ್ಲವೂ ನಿರ್ವಿಘ್ನವಾಗಿ ಬಗೆಹರಿಯಲಿದೆ. ಆರೋಗ್ಯ ಸಮಸ್ಯೆಗಳು, ಮಾನ ಸಿಕ ಖಿನ್ನತೆ ಕೂಡ ದೈವ ಬಲದಿಂದ ದೂರವಾಗಲಿದೆ. ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವ ಅತ್ಯಂತ ಶುಭ ಗಳಿಗೆಗಳು ಕೂಡಿ ಬರಲಿದೆ.

ಇದನ್ನು ಓದಿ: Ugadi Horoscope: ಮಕರ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ಹೇಗಿದೆ?

ಪರಿಹಾರ ಏನು?

ಕುಂಭರಾಶಿಯವರು ಕೆಲವು ಗ್ರಹಚಾರದ ಸ್ಥಿತಿಗೆ ತಲುಪುವ ಕಾರಣ ಈ ಬಾಧೆ ಸಂಭವಿಸದಿರಲು ನಿಮ್ಮ ಕುಲದೇವರನ್ನು ಮತ್ತು ಲಕ್ಷ್ಮೀ ನರಸಿಂಹ ದೇವರನ್ನು ಪ್ರಾರ್ಥಿಸಬೇಕು. ಲಕ್ಷ್ಮೀ ನರಸಿಂಹ ದೇವರಿಗೆ ವಿಶೇಷ ಪೂಜೆ, ಸೇವೆ, ನೈವೇದ್ಯ ಸಲ್ಲಿಸಿ ಪಾದಕ್ಕೆ ಕಪ್ಪು ದಾರವನ್ನು ಮುಟ್ಟಿಸಿ ಅದನ್ನು ಕೈಗೆ ಕಟ್ಟಿಕೊಳ್ಳಬೇಕು. ಲಕ್ಷ್ಮೀ ನರಸಿಂಹನ ಶ್ಲೋಕ ಪಠಿಸಿದರೆ ದೇವರ ಕೃಪಾ ಕಟಾಕ್ಷ ಪ್ರಾಪ್ತವಾಗಲಿದೆ. ಇದರಿಂದ ಯುಗಾದಿಯ ಕಾಲದಲ್ಲಿ ಅತ್ಯಂತ ಶುಭಫಲ ಸಿಗಲಿದೆ. ಮನೆಯಲ್ಲಿ ಲಕ್ಷ್ಮೀ ನರಸಿಂಹ ದೇವರ ಮೂರ್ತಿ ಇದ್ದವರು ಅದಕ್ಕೆ ಜಲ ಸಂಪ್ರೋಕ್ಷಣೆ ಮಾಡಬೇಕು. ತುಪ್ಪದಲ್ಲಿ ಅಭಿಷೇಕ ಇತ್ಯಾದಿ ಮಾಡುವುದರಿಂದ ಸ್ಥಿರ ಸುಖಗಳು ಪ್ರಾಪ್ತವಾಗಲಿದೆ.