Ugadi Horoscope: ಮಕರ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ಹೇಗಿದೆ?
ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಮಕರ ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ಎಂದು ಖ್ಯಾತ ಜ್ಯೋತಿ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.

ugadi capricorn

ಬೆಂಗಳೂರು: 2025 ಮಾರ್ಚ್ 30ರ ಈ ದಿನದ ಅಧಿಪತಿ ಸೂರ್ಯ. ಹಾಗಾಗಿ ಇಂದಿನಿಂದ ಹಿಂದೂಗಳಿಗೆ ಹೊಸ ವರ್ಷದ ಆರಂಭ. ಹಿಂದೂ ಪಂಚಾಂಗದ ಪ್ರಕಾರ 2025 ಯುಗಾದಿಯಿಂದ 2026 ಯುಗಾದಿಯ ವರೆಗೆ ವಿಶ್ವಾವಸು ನಾಮ ಸಂವತ್ಸರದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯಿಂದ ಎಲ್ಲ ರಾಶಿಯವರಿಗೆ ಹಲವು ರೀತಿಯ ಬದಲಾವಣೆ ಕಂಡು ಬರಲಿದೆ. ಹಾಗಾಗಿ ಈ ಯುಗಾದಿ ಹಬ್ಬವು ಮಕರ ರಾಶಿಯವರಿಗೆ ಶ್ರೀ ವಿಶ್ವಾವಸು (Ugadi Horoscope) ನಾಮ ಸಂವತ್ಸರ ಹೇಗಿರಲಿದೆ? ಮಕರ ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ಈ ವರ್ಷ ಏನೆಲ್ಲ ಬದಲಾವಣೆ ಕಂಡು ಬರಲಿದೆ? ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ಹೇಳಿದ್ದಾರೆ.
ಮಕರ ರಾಶಿಗೆ ಯುಗಾದಿಯ ಭವಿಷ್ಯ ಹೇಗಿರಲಿದೆ?
ಉತ್ತಾರಾಷಾಢ ನಕ್ಷತ್ರದ 2, 3 ಮತ್ತು 4ನೇ ಪಾದ, ಶ್ರವಣ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಧನಿಷ್ಠ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ಮಕರ ರಾಶಿ ಆಗುತ್ತದೆ. ಮಕರ ರಾಶಿಯಿಂದ ಗುರು ಆರನೇ ಮನೆಗೆ ಚಲಿಸಲಿದ್ದು ಸ್ಥಿರಾಸ್ತಿಯನ್ನು ಸಂಪಾದನೆಯಾಗಲಿದೆ. ಹಾಗೆಯೇ ಸ್ವಂತ ಮನೆಯನ್ನು ನಿರ್ಮಿಸುವ ಕನಸು ಇಟ್ಟುಕೊಂಡವರ ಆಸೆ ನೆರವೇರಲಿದೆ. ಆದರೆ ದೂರ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ.
ಮೇ ಅಂತ್ಯದ ವರೆಗೂ ಉತ್ತಮ ಫಲ
ಮಕರ ರಾಶಿಯವರು ತಾಳ್ಮೆ, ಸಂಯಮವನ್ನು ಕಾಪಾಡಿಕೊಳ್ಳಬೇಕು. ಮಕರ ರಾಶಿಯವರಿಗೆ ಗುರುವಿನ ಫಲ ಕಡಿಮೆ ಇದ್ದು, ಶನಿಯು ಮೂರನೇ ಮನೆಯಲ್ಲಿ ಸಂಚರಿಸುವಾಗ ಸಾಧಾರಣ ಫಲ ಹಾಗೂ ಆರನೇ ಮನೆಯಲ್ಲಿ ಗುರು ಸಂಚರಿಸುವಾಗ ನಷ್ಟಗಳು ಉಂಟಾಗುವ ಸಾಧ್ಯತೆ ಇದೆ. ಮೇ ಅಂತ್ಯದವರೆಗೂ ಮಕರ ರಾಶಿಯವರಿಗೆ ಉತ್ತಮ ಫಲ ಇರಲಿದ್ದು ಈ ಸಮಯದಲ್ಲಿ ಆರ್ಥಿಕ ವಾಗಿಯು ಅಭಿವೃದ್ದಿಯನ್ನು ಕಾಣುತ್ತೀರಿ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಹೊಸ ಕೆಲ ಸವು ವ್ಯವಹಾರಕ್ಕೆ ಸರಿಯಾದ ದಿಕ್ಕನ್ನು ನೀಡುತ್ತದೆ. ಈ ಸಂದರ್ಭ ಉದ್ಯೋಗ ಮತ್ತು ವ್ಯಾಪಾರ ಉತ್ತಮವಾಗಿರುತ್ತದೆ. ಜೂನ್‌ನಿಂದ ಅಲ್ಪ ಮಟ್ಟಿಗೆ ನಷ್ಟ ಉಂಟಾಗಲಿದ್ದು ಶನಿಯ ಸಂಚಾರದಿಂದಾಗಿ ಮಕರ ರಾಶಿಗೆ ಸೇರಿದ ಜನರು ಸಾಕಷ್ಟು ಅಡೆತಡೆಗಳನ್ನು ಮತ್ತು ಕೆಲಸಗಳಲ್ಲಿ ತಡೆ ಸೃಷ್ಟಿ ಸಬಹುದು
ತಾಳ್ಮೆ ಅಗತ್ಯ
ಒರಟು-ಕಹಿ ಮಾತಿನಿಂದ ಹತ್ತಿರದವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.ಹಾಗಾಗಿ ಹೆಚ್ಚಿನ ತಾಳ್ಮೆ ವಹಿಸಿ ಮೌನದಿಂದ ಇರುವುದು ಉತ್ತಮ. ಹಾಗೆಯೇ ಇತರರೊಂದಿಗೆ ವ್ಯಾಜ್ಯ ಉಂಟಾಗುವುದನ್ನು ತಪ್ಪಿಸಿ ಕೊಳ್ಳಿ. ಹಾಗಾಗಿ ಮಕರ ರಾಶಿಯವರು ತತ್ವ ಜ್ಞಾನದ ಕಡೆ ಹೆಚ್ಚಿನ ಒಲವು ನೀಡಿದರೆ ಉತ್ತಮ.
ಇದನ್ನು ಓದಿ: Ugadi Horoscope: ಧನು ರಾಶಿಯವರಿಗೆ ಗುರು ಅಧಿಪತಿ; ವರ್ಷವಿಡಿ ಶುಭ ಫಲ
ಭಗವದ್ಗೀತೆ ಓದಿಗೆ ಅದ್ಯತೆ ನೀಡಿ
ತಿಂಗಳಿಗೆ ಒಂದು ಭಾರಿಯಾದರೂ ಭಗವದ್ಗೀತೆ ಓದುವ ಹವ್ಯಾಸ ಮಾಡಿಕೊಳ್ಳಿ.ಇದರಿಂದ ನಿಮ್ಮ ಮನೋಶಕ್ತಿಯು ಅಭಿವೃದ್ಧಿ ಹೊಂದಿ ಆಗುವ ನಷ್ಟ ತಪ್ಪಿಸಬಹುದು. ವಿವಿಧ ದೇವರ ಪೂಜಾ ಕಾರ್ಯದಲ್ಲಿ ಭಾಗವಹಿಸಿ.ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ವಿವಿಧ ಮಂತ್ರವನ್ನು ಪಠಿಸಿ.